ವಿಜ್ಞಾನ ತುಂಬಾ ಮುಂದುವರೆದಿದೆ :  ಹೆಚ್ ಎಂ ಬಸವರಾಜ್

ಸಂಜೆವಾಣಿ ವಾರ್ತೆ
ಹಿರಿಯೂರು.ಮಾ.೪: ನಗರದ ಮೋಕ್ಷ ಗುಂಡಂ ವಿಶ್ವೇಶ್ವರಯ್ಯ ವಿದ್ಯಾ ಮಂದಿರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲೆಯ ನಿರ್ದೇಶಕರಾದ ಹೆಚ್.ಎಂ.ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಜ್ಞಾನ ತುಂಬಾ ಮುಂದುವರೆದಿದೆ ನಮ್ಮ ಬದುಕಿನ ಪ್ರತಿ ಹಂತದಲ್ಲೂ ವಿಜ್ಞಾನ ತಂತ್ರಜ್ಞಾನ ಹರಡಿಕೊಂಡಿದೆ ಎಂದರು ಹಾಗೂ ವಿದ್ಯಾರ್ಥಿಗಳು ವೈಜ್ಞಾನಿಕ ವಾಗಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಬಿ.ವಿ.ಸೂರ್ಯಪ್ರಕಾಶ್, ಕಾರ್ಯದರ್ಶಿ ಕೆ.ಆರ್.ವೀರಭದ್ರಯ್ಯ ಮುಖ್ಯೋಪಾಧ್ಯಾಯರಾದ  ಜಿ ತಿಪ್ಪೇಸ್ವಾಮಿ, ನಿರ್ದೇಶಕರಾದ ಸಣ್ಣ ಭೀಮಣ್ಣ, ಮತ್ತು  ನಿವೃತ್ತ ಅಧಿಕಾರಿಗಳಾದ ದಾಸಣ್ಣ, ಬಿ ಆರ್ ಸಿ ತಿಪ್ಪೇರುದ್ರಪ್ಪ, ಬಿ ಆರ್ ಪಿ ಪ್ರಸನ್ನಕುಮಾರ್ ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸೌರವ್ಯೂಹ ಚಂದ್ರಯಾನ ಸೇರಿದಂತೆ ವಿವಿಧ ವೈಜ್ಞಾನಿಕ ಪರಿಕರಗಳನ್ನು ತಯಾರಿಸಿ ಪ್ರದರ್ಶಿಸಿದರು.