ಕನ್ನಡ ಭಾಷೆಯನ್ನು ಪ್ರೀತಿಸಿ, ಬೆಳೆಸಿ : ಶಾಸಕಿ ಎಂ.ಪಿ.ಲತಾ.

ಸಂಜೆವಾಣಿವಾರ್ತೆ
ಹರಪನಹಳ್ಳಿ.ಮಾ.೪: ಕರ್ನಾಟಕದಲ್ಲಿರುವ ನಾವು ನಮ್ಮ ಮಾತೃಭಾಷೆಯಾದ ಕನ್ನಡಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿಯಿರುವ ಅಂಜುಮನ್ ಶಾದಿಮಹಲ್‌ನಲ್ಲಿ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಭಾಷೆ, ದೇಶದ ಹಾಗೂ ಅಂತರಾಷ್ಟಿçÃಯ ಭಾಷೆಗೆ ಅದ್ಯತೆ ನೀಡಬೇಕು ಇದಕ್ಕೆ ಪಕ್ಕದ ತಮಿಳುನಾಡು ತಮಿಳು, ಆಂದ್ರದಲ್ಲಿ ಆಂದ್ರ, ಕೇರಳದಲ್ಲಿ ಕೇರಳ ಭಾಷೆಯನ್ನು ಮೊದಲು ಬಳಕೆ ಮಾಡುತ್ತಾರೆ ಹಾಗಾಗಿ ನಾವು ಕೂಡ ನಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಬೇಕು ಎಂದು ಹೇಳಿದರು. ಮುಸ್ಲಿಂ ಸಮುದಾಯವು ತಮ್ಮ ಉರ್ದು ಭಾಷೆಯನ್ನು ಪ್ರೀತಿಸಿದಷ್ಟೆ, ಕನ್ನಡವನ್ನು ಪ್ರೀತಿಸಬೇಕು. ಮಕ್ಕಳಿಗೆ 15 ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಇರುತ್ತದೆ ಎಂದ ಅವರು ಈ ಸಮುದಾಯ ದುಡಿಮೆ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು, ಮಕ್ಕಳು ಚನ್ನಾಗಿ ಓದಿ ಮುಂದೆ ಬರಬೇಕು, ಪೋಷಕರಿಗೆ ಒಳ್ಳೆಯ ಹೆಸರು ತರಬೇಕೆಂದು ಸಲಹೆ ನೀಡಿದರು.ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬೇಡಿಕೆಗಳನ್ನು ಸಂಬAಧಪಟ್ಟ ಇಲಾಖೆ ಗಮನಕ್ಕೆ ತಂದು ಹಂತ-ಹAತವಾಗಿ ಬಗೆಹರಿಸಲಾಗವುದು ಎಂದರು.ಇದೇ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವರ್ಗಾವಣೆಯಾಗಿ ಬಂದ ಮತ್ತು ಹೊಸದಾಗಿ ಸೇವೆಗೆ ಸೇರಿದ ಮುಸ್ಲಿಂ ಸಮುದಾಯದ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅAಜಿನಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ, ರಾಜ್ಯ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಂ.ಷರೀಫ್, ತಾಲೂಕು ಅಧ್ಯಕ್ಷ ಪುರಸಭೆ ಸದಸ್ಯರಾದ ಲಾಟಿ ದಾದಪೀರ್, ಜಾಕೀರ್ ಹುಸೇನ್, ಕೆ.ಎಸ್.ಉಸ್ಮಾನ್, ಅಂಜುಮಾನ್ ಸಮಿತಿ ಅಧ್ಯಕ್ಷ ಎಂ.ರೆಹಮಾನ್, ಎಂ.ದಾದ ಕಲಾಂದರ, ರಾಜಶೇಖರ್, ಪದ್ಮಲತಾ, ಚಂದ್ರಮೌಳಿ, ಮನ್ಸೂರ್, ಪದ್ಮರಾಜ್, ಅಂಜಿನಪ್ಪ, ಸಲೀಂ, ಅರ್ಜುನ್‌ಮುನಿಸ್, ನಟರಾಜ ಸೇರಿದಂತೆ ಇತರರು ಇದ್ದರು.