ಬಸ್ ನಿಲ್ದಾಣದಲ್ಲಿ ಮಗಳಿಗೆ ಪಲ್ಸ್ ಪೆÇೀಲಿಯೋ ಹಾಕಿಸಿದ ಅಧಿಕಾರಿ ದಂಪತಿ
ಹುಬ್ಬಳ್ಳಿ,ಮಾ.4: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ರವರು ಐ.ಎ.ಎಸ್. ಅಧಿಕಾರಿಯಾಗಿರುವ ಪತ್ನಿ ಪ್ರಿಯಾಂಗ ಎಂ. ರೊಂದಿಗೆ ನಗರದ ಗೋಕುಲ ರಸ್ತೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ತಮ್ಮ ಮಗಳಿಗೆ ಪೆÇೀಲಿಯೋ ಲಸಿಕೆ ಹಾಕಿಸಿದರು.
ದಂಪತಿಗಳಿಬ್ಬರೂ ಐ.ಎ.ಎಸ್. ಅಧಿಕಾರಿಗಳಾಗಿದ್ದರೂ ಸಹ, ಇತರೆ ಸಾಮಾನ್ಯ ಜನರಂತೆ ಬಂದು ನಗರದ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ತಮ್ಮ ಮಗಳಿಗೆ ಪೆÇೀಲಿಯೋ ಲಸಿಕೆ ಹಾಕಿಸುವ ಮೂಲಕ ಸರಳತೆ ಮೆರೆದರು. ಸಂಸ್ಥೆಯ 21ಸಾವಿರಕ್ಕೂ ಹೆಚ್ಚಿನ ಸಾರಿಗೆ ನೌಕರರು, ಅವರ ಕುಟುಂಬದವರು ಹಾಗೂ ಸಾರ್ವಜನಿಕರಿಗೆ ಪೆÇೀಲಿಯೊ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು ಹಾಗೂ ಇತರರಿಗೆ ಲಸಿಕೆ ಹಾಕಿಸಲು ಪ್ರೇರಣೆ ನೀಡಿದರು.
ಹೆಗ್ಗೇರಿಯ ನಗರ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಗೀತಾ ಬಡಿಗೇರ ಹಾಗೂ ನಾಜಮೀನ, ಆಶಾ ಕಾರ್ಯಕರ್ತೆ ರತ್ನ , ನರ್ಸಿಂಗ್ ವಿದ್ಯಾರ್ಥಿಗಳಾದ ಕೀರ್ತಿ ಹಾಗೂ ಗಂಗಾಧರ ಮತ್ತಿತರರು ಇದ್ದರು.