ಉಪನ್ಯಾಸ ಕಾರ್ಯಕ್ರಮ
ಧಾರವಾಡ,ಮಾ.4: ಮಾನವ ಮಾನವನನ್ನುಗೌರವಿಸುವುದೇ ಮಾನವ ಹಕ್ಕುಗಳು, ನಾನು ಮಾತಾಡಿದರೆಇನ್ನೊಬ್ಬರಿಗೆ ನೋವಾಗದಂತಿರಬೇಕುಎಂಬುದು ವಚನಕಾರರು ಹೇಳುವ ಮೂಲಕ, ಮಾನವ ಹಕ್ಕುಗಳನ್ನು ವಚನಕಾರರು ವಿಭನ್ನರೀತಿಯಲ್ಲಿತಮ್ಮ ವಚನಗಳಲ್ಲಿ ಪ್ರತಿಪಾದಿಸಿರುವರು ಎಂದುಕರ್ನಾಟಕಉಚ್ಚನ್ಯಾಯಾಲದ ನ್ಯಾಯಮೂರ್ತಿ ಶಿವಶಂಕರ ಬಿ. ಅಮರಣ್ಣವರಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ದಿವಂಗತ ಪೆÇ್ರ.ರಾಮಚಂದ್ರ ಪಾಟೀಲ ದತ್ತಿ ಅಂಗವಾಗಿಆಯೋಜಿಸಿದ್ದ ‘ವಚನಗಳು ಮತ್ತು ಮಾನವ ಹಕ್ಕುಗಳು’ ವಿ?Àಯದ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡುತ್ತಾ, ಶರಣರುಅಸ್ಪ್ರಶ್ಯತೆ ಬಗ್ಗೆ, ಲಿಂಗ ಸಮಾನತೆ ಬಗ್ಗೆ ಹೀಗೆ ಮಾನವ ಹಕ್ಕುಗಳನ್ನೆಲ್ಲವನ್ನು ತಮ್ಮ ವಚನಗಳಲ್ಲಿ ಹೇಳುವ ಮೂಲಕ ಬಹುತೇಕ ವಚನಕಾರರ ಆಶಯಗಳೆಲ್ಲ ಸಂವಿಧಾನದಲ್ಲಿಅಡಕವಾಗಿವೆ. ಹಿಂಸೆ ಎಂದರೆ ಕೇವಲ ದೈಹಿಕವಾಗಿಅಲ್ಲ ಮಾನಸಿಕವಾಗಿಯೂ ಘಾಸಿ ಮಾಡುವುದೂ ಹಿಂಸೆಯಾಗುತ್ತದೆ. ನಮ್ಮ ನಡೆ ನುಡಿ ಸ್ಪಟಿಕದ ಸಲಾಕೆಯಂತಿರಬೇಕುಎನ್ನುವ ಮೂಲಕ ಇನ್ನೊಬ್ಬರ ಮಾನನ?À್ಟವಾಗದಂತೆ ನಡೆದುಕೊಳ್ಳಬೇಕು ಎಂದಿರುವರು. ವಚನಕಾರರು ಕೇವಲ ವಚನಗಳನ್ನು ಬರೆಯಲಿಲ್ಲ ಬರೆದಂತೆ ಬದುಕಿದರು, ಬದುಕಿದಂತೆ ಬರೆದರು.ಜಗತ್ತಿಗೆ ಮಾನವೀತೆಯಶ್ರೇಷ್ಠತೆಯ ದಾರಿತೋರಿಸಿದರು.
ಸಾವಿರಾರು ಕಾನೂನುಗಳು ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಬಂದಿವೆ. ಅವೆಲ್ಲವೂ ವಚನಗಳಲ್ಲಿ ಅಡಕವಾದ ಅಂಶಗಳನ್ನೇ ಒಳಗೊಂಡಿವೆ.ಭಾರತೀಯದಂಡ ಸಂಹಿತೆಯಲ್ಲಿ ಸೂಚಿಸುವ ಅಂಶಗಳನ್ನು ಬಸವಣ್ಣನವರ ಕಳಬೇಡ, ಕೊಲಬೇಡವಚನದಲ್ಲಿ ಸಪ್ತ ಸೂತ್ರಗಳನ್ನು ನೀಡುವುದರೊಂದಿಗೆ ಸ್ಪ?À್ಟವಾಗಿ ಅಪರಾಧಗಳನ್ನು ತಡೆಗಟ್ಟುವ ಮಾರ್ಗವನ್ನು ಹೇಳಿಕೊಟ್ಟಿದ್ದಾರೆ.ಶರಣೆ ಕಾಳವ್ವ ಆಹಾರದ ಭೇಧಭಾವ ಸಲ್ಲದುಎಂದುಆಹಾರದ ಬಗ್ಗೆ ಯಾರಮೇಲೂಯಾರದೂ ನಿಬರ್ಂಧಇರಬಾರದುಎಂದು ಪ್ರತಿಪಾದಿಸಿರುವಳು.
ಮಾನವ ಹಕ್ಕುಗಳನ್ನು ಜಾರಿಗೊಳಿಸಿರುವುದರಿಂದ ದೇಶದಲ್ಲಿ ಮಾನವನಜೀವನ ಮಟ್ಟ ಸುಧಾರಿಸಿದೆ.ಇದಕ್ಕೆಕಾರಣ ವಚನಗಳ ಪ್ರಭಾವವೂಅಡಗಿದೆಎಂದ ನ್ಯಾಯಮೂರ್ತಿಅಮರಣ್ಣವರ, ಇಂದುಜಗತ್ತಿನಲ್ಲಿ ಭಯೋತ್ಪಾದನೆ, ಅನಾಚಾರ, ಬ್ರ?Á್ಟಚಾರ ಮಿತಿ ಮೀರಿದೆ. ಇವುಗಳು ನಿಯಂತ್ರಣಕ್ಕೆ ಬರಬೇಕೆಂದರೆ ವಚನಗಳನ್ನು ಪಾಲಿಸಿದರೆ ಸಾಕು ಈ ಪಿಡುಗುಗಳನ್ನು ಇಲ್ಲದಾಗಿಸಬಹುದು.ಸಕಲ ಜೀವಾತ್ಮಕ್ಕೆ ಲೇಸನ್ನು ವಚನಕಾರರು ಬಯಸಿದರು. ನಮ್ಮ ಸಂವಿಧಾನವೂಇದನ್ನೇ ಪ್ರತಿಪಾದಿಸುತ್ತಿದೆ.ಮಹಿಳೆಯರ ಮೇಲಿನ ದೌರ್ಜನೆಗಳನ್ನು ತಡೆಯಲು ಬರೀ ಕಾನೂನಿನಿಂದ ಸಾಧ್ಯವಿಲ್ಲ. ಇದೊರಟ್ಟಿಗೆ ಸಮಾಜದಲ್ಲಿ ನೈತಿಕತೆ ಮಟ್ಟ ಹೆಚ್ಚಾದಾಗ ಮಾತ್ರ ಮಹಿಳೆಯರ ದೌರ್ಜನ್ಯ ನಿಲ್ಲಿಸಲು ಸಾಧ್ಯವಾಗುವುದು
ಬಸವಣ್ಣನವರು ಶ್ರಮಿಕರಲ್ಲಿ ಸ್ವಾಭಿಮಾನತುಂಬಿದರು.ಮೌಢ್ಯವನ್ನು ಖಂಡಿಸಿದರು, ಹೆಣ್ಣಿನಘನತೆಯನ್ನುಎತ್ತಿ ಹಿಡಿದರು.ದೀನದಲಿತರನ್ನು ಮೇಲೆಕ್ಕೆತ್ತಿದರು.ಇಂದು ನಾವು ವಚನಗಳನ್ನು ಪಾಲಿಸುತ್ತೇವೆಎಂದರೆ ಸಂವಿಧಾನವನ್ನು ಪಾಲಿಸಿದಂತೆ, ಇಂದು ವಚನಗಳನ್ನು ರಕ್ಷಿಸುತ್ತೇವೆಎಂದರೆ ಸಂವಿಧಾನವನ್ನು ರಕ್ಷಿಸಿದಂತೆ, ಇಂದು ವಚನಗಳನ್ನು ಎತ್ತಿ ಹಿಡಿಯುತ್ತೇವೆಎಂದರೆ ಸಂವಿಧಾನವನ್ನುಎತ್ತಿ ಹಿಡಿದಂತೆ.ವಚನಗಳಿಲ್ಲದೇ ಸಂವಿಧಾನವಿಲ್ಲ, ಸಂವಿಧಾನವಿಲ್ಲದೆ ವಚನಗಳಿಲ್ಲ, ಅದಕ್ಕಾಗಿ ನಾವೆಲ್ಲರೂ ಸಂವಿಧಾನವನ್ನುಗೌರವಿಸೋಣ ವಚನಗಳಂತೆ ನಡೆದುಕೊಳ್ಳೋಣ ಎಂದು ಶಿವಶಂಕರ ಬಿ.ಅಮರಣ್ಣವರ ಹೇಳಿದರು.
ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದಕರ್ನಾಟಕಉಚ್ಚನ್ಯಾಯಾಲಯಧಾರವಾಡ ಪೀಠದ ವಿಶ್ರಾಂತ ಹೆಚ್ಚುವರಿ ಸಹಾಯಕ ಸಾಲಿಸಿಟರ್ ಜನರಲ್‍ಕೆ.ಬಿ.ನಾವಲಗಿಮಠ, ವಕೀಲರು ಮತ್ತು ನ್ಯಾಯಾಧೀಶರು ಹೇಗಿರಬೇಕೆಂದರೆ ಈ ಸೃಷ್ಟಿಯಲ್ಲಿಏನೆಲ್ಲ ಮಾಹಿತಿ, ಜ್ಞಾನಇದೆಯಲ್ಲಅದರಅರಿವುಇರಬೇಕು, ಅಂದಾಗಲೇ ನ್ಯಾಯ ಒದಗಿಸಿಕೊಡಲು ಸಾಧ್ಯ. ಅಂಥ ತಿಳುವಳಿಕೆಯನ್ನು ಶಿವಲಿಂಗ ಅಮರಣ್ಣವರ ಹೊಂದಿದ್ದಾರೆ.ತಂದೆ ನನಗೇನು ಮಾಡಿದ್ದಾನೆಎಂದು ಕೇಳುವ ಇಂದಿನ ಯುವಜನಾಂಗಕ್ಕೆ ಮಾದರೀಯವಾಗಿಡಾ. ಅಶೋಕ ಪಾಟೀಲ ತಮ್ಮತಂದೆಯನ್ನುಅರ್ಥಪೂರ್ಣವಾಗಿ ಸ್ಮರಿಸಿಕೊಳ್ಳುತ್ತಿದ್ದಾರೆ.ಇಂದಿನ ಪೀಳಿಗೆಗೆ ಮಾದರೀಯವಾಗಿದ್ದಾರೆಎಂದರು.
ರಾಂಚಿ ಕಾನೂನಿನ ಅಧ್ಯಯನ ಮತ್ತು ಸಂಶೋಧನಾರಾಷ್ಟ್ರೀಯವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಅಶೋಕ ಪಾಟೀಲ, ಶಾರದಾ ಪಾಟೀಲ ದತ್ತಿ ದಾನಿಗಳ ಪರವಾಗಿ ಮಾತನಾಡಿದರು.ಮಧುಮತಿ ಸಣಕಲ್ಲ ವಚನ ಹೇಳುವ ಮೂಲಕ ಪ್ರಾರ್ಥನೆ ನಡೆಸಿಕೊಟ್ಟರು.ಸಂಘದಕೋಶಾಧ್ಯಕ್ಷ ಸತೀಶತುರಮರಿ ಸ್ವಾಗತಿಸಿದರು, ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಹಲಗತ್ತಿಕಾರ್ಯಕ್ರಮ ನಿರೂಪಿಸಿದರು.ಶಿವಾನಂದ ಭಾವಿಕಟ್ಟಿ ವಂದಿಸಿದರು.
ವೇದಿಕೆ ಮೇಲೆ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದರು.ವೀರಣ್ಣಒಡ್ಡೀನ, ಡಾ.ಧನವಂತ ಹಾಜವಗೋಳ, ಡಾ. ಜಿನದತ್ತ ಹಡಗಲಿ, ಪ್ರಮಿಳಾ ಜಕ್ಕಣ್ಣವರ, ಸದಾನಂದ ಮುಂದಿನಮನಿ, ರಾಜು ನಾವಲಗಿಮಠ, ಮಹಾಂತೇಶನರೇಗಲ್ಲ, ಶಿವಾನಂದ ಹೂಗಾರ, ನಿಂಗಣ್ಣಕುಂಟಿ, ಮುದಿಗೌಡರ ಹಾಗೂ ರಾಮಚಂದ್ರ ಪಾಟೀಲ ಪರಿವಾರ ಭಾಗವಹಿಸಿದ್ದರು.