ಜಿಲ್ಲಾ ಉಸ್ತುವಾರಿ ಸಚಿವರಿಂದ  ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಸಂಜೆವಾಣಿ ವಾರ್ತೆ
ದಾವಣಗೆರೆ ಮಾ 4; ಹರಿಹರದಲ್ಲಿ ಮಾರ್ಚ್ 18 ಮತ್ತು 19 ರಂದು ಜರುಗಲಿರುವ ದಾವಣಗೆರೆ ಜಿಲ್ಲಾ 13 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಶನಿವಾರ ಸಂಜೆ ಬಿಡುಗಡೆ ಮಾಡಿದರು.ಈ ವೇಳೆ ಮಾತನಾಡಿದ ಅವರು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ  ಬಿ ವಾಮದೇವಪ್ಪನವರ ನೇತೃತ್ವದಲ್ಲಿ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಿಡುಗಡೆಗೊಳಿಸುತ್ತಿರುವುದು ಒಂದು ವಿನೂತನ ಪ್ರಯತ್ನವಾಗಿದ್ದು  ಸಂತೋಷದ ಸಂಗತಿ  ಇದಕ್ಕೆ ಅಧ್ಯಕ್ಷರನ್ನು ಮತ್ತು ಅವರ ತಂಡವನ್ನು ಅಭಿನಂದಿಸುತ್ತೇನೆ. ಹಾಗೂ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಕೋರಿದರು.ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪ ಮಾತನಾಡಿ  ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸುವುದರೊಂದಿಗೆ ಅವರ ಸಹಕಾರವನ್ನು ಕೋರಿದರು. ಹಾಗೂ ದಾವಣಗೆರೆ ಜಿಲ್ಲಾ ಕ ಸಾ ಪ ಮೊದಲ ಬಾರಿಗೆ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕ ಸಾ ಪ ದ ಗೌರವ ಕಾರ್ಯದರ್ಶಿಗಳಾದ ಬಿ ದಿಳ್ಳೆಪ್ಪ ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿಗಳಾದ ಸಿ ಜಿ ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ನಿರ್ದೇಶಕರಾದ ಬಿ ಎಂ ಬೈರೇಶ್ವರ, ಎನ್ ಎಸ್ ರಾಜು, ಶ್ರೀಮತಿ ರುದ್ರಾಕ್ಷಿ ಬಾಯಿ, ಎಂ ಎ ಸುದರ್ಶನ್, ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷ ಶ್ರೀಮತಿ ಸುಮತಿ ಜಯಪ್ಪ, ನಿರ್ದೇಶಕರಾದ ಎ ಎಂ ಸಿದ್ದೇಶ್ ಕುರ್ಕಿ, ಹರಿಹರ ತಾಲೂಕು ಕಸಾಪ ಅಧ್ಯಕ್ಷರಾದ ಡಿ ಎಂ ಮಂಜುನಾಥಯ್ಯ, ಕಾರ್ಯದರ್ಶಿ ಚಿದಾನಂದ ಕಂಚಿಕೇರಿ, ಜಿ ಎಸ್ ನಾಗರಾಜ ಕೋಡಿಹಳ್ಳಿ, ಮಲ್ಲಿಕಾರ್ಜುನ ಆರ್ ಬಿ, ಅಶೋಕ ಸಾಲ ಕಟ್ಟೆ, ವಾಸುದೇವ ಮೂರ್ತಿ, ಹಾಗೂ ಬಸವಂತಪ್ಪ ಎಂ ಬೇತೂರು ಮುಂತಾದವರು ಉಪಸ್ಥಿತರಿದ್ದರು.ನೇತೃತ್ವದಲ್ಲಿ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಜಿಲ್ಲಾ ಕ ಸಾ ಪ ಬಿಡುಗಡೆಗೊಳಿಸುತ್ತಿರುವುದು ಒಂದು ವಿನೂತನ ಪ್ರಯತ್ನವಾಗಿದೆ ಎಂದು ಸಂತೋಷ ಪಟ್ಟರು.ಇದಕ್ಕೆ ಅಧ್ಯಕ್ಷರನ್ನು ಮತ್ತು ಅವರ ತಂಡವನ್ನು ಅಭಿನಂದಿಸುತ್ತಾ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಕೋರಿದರು.