ಸುಸಂಸ್ಕøತ ಸಮಾಜ ನಿರ್ಮಾಣ ಮಾಡಲು ಕರೆ
ಮುನವಳ್ಳಿ,ಮಾ4 : ಪಾಲಕರು ತಮ್ಮ ಮಕ್ಕಳ ಕಲಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬೆಳೆಸಬೇಕು ಅಂದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಮತ್ತು ಸುಸಂಸ್ಕøತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಸವದತ್ತಿ ತಾಲೂಕಾ ಕ ಸಾ ಪ ಅಧ್ಯಕ್ಷರು ಹಾಗೂ ಕೆ ಪಿ ಎಸ್ ಪ್ರಾಚಾರ್ಯರಾದ ವೈ ಎಂ ಯಾಕೊಳ್ಳಿ ಹೇಳಿದರು.
ಯಕ್ಕುಂಡಿಯ ಕರ್ನಾಟಕ ಪಬ್ಲಿಕ್ ಸ್ಕೂಲನ ಪ್ರಾಥಮಿಕ ವಿಭಾಗದ ಸನ್ 2023-2024 ನೇ ಸಾಲಿನ 7 ನೇ ತರಗತಿವಿದ್ಯಾರ್ಥಿಗಳ ಬೀಳ್ಳೊಡುವ ಸಮಾರಂಭ ಮತ್ತು ವಾರ್ಷಿಕ ಸ್ನೇಹಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಶಿಕ್ಷಣ ಜಗತ್ತಿನಲ್ಲಿ ನಮ್ಮೆಲ್ಲರನ್ನು ದೊಡ್ಡವರನ್ನಾಗಿ ಮಾಡುತ್ತದೆ ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು. ಶ್ರಮಪಟ್ಟು ಓದುವುದನ್ನ ರೂಡಿಮಾಡಿಕೊಳ್ಳಲು ಕರೆನೀಡಿದರು,ಪ್ರಾಥಮಿಕ ವಿಭಾಗದ ಶಿಕ್ಷಕರು ವಿದ್ಯಾರ್ಥಿಗಳನ್ನು ಒಳ್ಳೆಯ ರೀತಿಯಲ್ಲಿ ಬೆಳಸಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿದರು.
ಮುಖ್ಯೋಪಾದ್ಯರಾದ ವ್ವಿ ಎಸ್ ಗದ್ದಿಗೌಡರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸಮಯ ನಿರ್ವಹಣೆ ಮತ್ತು ಶಿಸ್ತನ್ನು ಹಾಗೂ ಸದ್ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ವಿಯಾಗಿ ಗುರಿ ಸಾಧಿಸಲು ಸಾಧ್ಯ ಮತ್ತು ನಿಮ್ಮ ಕನಸುಗಳನ್ನು ನಂಬಿಕೆಯಾಗಿ ಇಟ್ಟುಕೊಂಡು ನನಸು ಮಾಡಿಕೊಳ್ಳಲು ಪ್ರಯತ್ನಿಸಿ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಪಿ ಪಿ ನಾಗಪ್ಪಗೋಳ ಮಾತನಾಡಿದರು.
ಮುಖ್ಯಅತಿಥಿಗಳಾಗಿ ಧೂಪದಾಳ ಶಾಲೆಯ ಮುಖ್ಯೋಪಾದ್ಯರಾದ ಎಸ್ ವಾಯ್ ಬಡ್ಲಿ, ಉರ್ದುಶಾಲೆಯ ಶಂಕರ ಲಮಾಣಿ, ಎಸ್‍ಡಿಎಮ್‍ಸಿ ಸದಸ್ಯರಾದ ಚನ್ನಪ್ಪ ಹೊಂಗಲ, ದಿಲಾವರಸಾಬ ಭಾರಿಗಿಡದ, ಶಾಲೆಯ ಗುರುಗಳಾದ ಕೆ. ಕೆ. ಲಮಾಣಿ, ಎನ್. ಸಿ. ಗೋಣಿ, ಪಿ. ಎಸ್. ವಿವೇಕಿ, ಪಿ. ವ್ಹಿ. ಹತ್ತಿಕಟಗಿ, ಎಮ್. ಐ. ಮುಲ್ಲಾನವರ, ಆರ್. ಎಚ್. ಈಳಗೇರ ಮುಂತಾದ ಗುರುವೃಂದ ಮತ್ತು ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
ಪಾಠದಲ್ಲಿ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಹಾಡು ಕುಣಿತ ವೇಷಭೂಷಣ ಒಳಗೊಂಡ ಮನರಂಜನೆಯ ಕಾರ್ಯಕ್ರಮಗಳು ಆಗಮಿಸಿದ ಎಲ್ಲರನ್ನು ರಂಜಿಸಿತು. ಶಿಕ್ಷಕರಾದ ಲಕ್ಷ್ಮಣ ಹೊಸಮನಿ ಸ್ವಾಗತಿಸಿದರು, ಕಾರ್ಯಕ್ರಮವನ್ನು ಜೈನುಲ್ಲಾ ಬಾರಿಗಿಡದ ನಿರೂಪಿಸದರು, ಆರ್.ಸಿ. ತುರಮಂದಿ ವಂದಿಸಿದರು.