ಪುರಾಣ ಕಾರ್ಯಕ್ರಮ
ಲಕ್ಷ್ಮೇಶ್ವರ,ಮಾ4:ತಾಲೂಕಿನ ಒಡೆಯರ ಮಲ್ಲಾಪುರ ಗ್ರಾಮದಲ್ಲಿ ಐದು ವರ್ಷಕ್ಕೆ ಒಮ್ಮೆ ಜರಗುವ ಗ್ರಾಮ ದೇವಿಯ ಜಾತ್ರಾ ಮಹೋತ್ಸವ ಹಾಗೂ ಗ್ರಾಮದೇವಿಯ ಪ್ರತಿಷ್ಠಾಪನೆ ಮತ್ತು ಪುರಾಣ ಕಾರ್ಯಕ್ರಮವು ಆರಂಭವಾಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆಯಿಂದ ದಿನಾಂಕ 5 ರಿಂದ ಗ್ರಾಮ ದೇವಿಯ ಪುರಾಣ ಕಾರ್ಯಕ್ರಮ ಆರಂಭವಾಗಲಿದ್ದು ಯರನಾಳದ ಹಿರೇಮಠ ಸಂಸ್ಥಾನದ ಪರಮಪೂಜ್ಯ ಶಿವಪ್ರಸಾದ ದೇವರು ಪುರಾಣ ಪ್ರವಚನ ನಡೆಸಿಕೊಡಲಿದ್ದಾರೆ 9 ದಿನಗಳ ಕಾಲ ಪುರಾಣ ನಡೆಯಲಿದೆ.
ದಿನಾಂಕ 11 ರಂದು ಸೋಮವಾರ ದಿವಸ ಸಾಯಂಕಾಲ ಗಡಿಗೆ ಕಳುಹಿಸುವುದು ದಿನಾಂಕ 12 ರಂದು ಮಂಗಳವಾರ ಬೆಳಿಗ್ಗೆ ಗ್ರಾಮದೇವಿಯ ಭವ್ಯವಾದ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಲಿದೆ ಮತ್ತು ಸಾಯಂಕಾಲ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 13 ರಂದು ಬುಧವಾರ ಬೆಳಗ್ಗೆ ಗ್ರಾಮ ದೇವಿಯ ಪ್ರತಿಷ್ಠಾಪನ ಕಾರ್ಯಕ್ರಮ ವಿಧಿ ವಿಧಾನಗಳ ಮೂಲಕಜರುಗಲಿದೆ. ಪ್ರತಿಷ್ಠಾಪನ ಕಾರ್ಯಕ್ರಮದ ನಂತರ ಗ್ರಾಮದ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ ನಂತರ ಶ್ರೀಗಳ ಆಶೀರ್ವಚನ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ.
ಆದ್ದರಿಂದ ಸದ್ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಗ್ರಾಮದೇವಿ ಸೇವಾ ಟ್ರಸ್ಟ್ ಕಮಿಟಿ ಹಾಗೂ ಒಡೆಯರ ಮಲ್ಲಾಪುರ ಗ್ರಾಮದ ಸದ್ಭಕ್ತ ಪ್ರಕಟಣೆಯಲ್ಲಿ ಮನವಿ ಮಾಡಿದೆ.