ವಾರ್ಷಿಕ ಸ್ನೇಹ ಸಮ್ಮೇಳನ
ಬಾದಾಮಿ,ಮಾ4 : ಇಲ್ಲಿನ ಜಯನಗರದ ಪ್ರತಿಷ್ಟಿತ ಎಸ್.ಎಫ್.ಹೊಸಗೌಡ್ರ ವಲ್ರ್ಡ್ ಶಾಲೆಯ 6ನೇ ವಾರ್ಷಿಕ ಸಮ್ಮೇಳನ ಸಂಭ್ರಮವು ಅತ್ಯಂತ ಅದ್ದೂರಿಯಾಗಿ ಎರಡು ದಿನಗಳ ಕಾಲ ನಡೆಯಿತು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಹೊಸಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ ಶೈಕ್ಷಣಿಕವಾಗಿ ಇಂದಿನ ಆಧುನಿಕ ತಂತ್ರಜ್ಞಾನದಂತೆ ಕಂಪ್ಯೂಟರ್, ಸಂಗೀತ ಮತ್ತು ಸಾಂಸ್ಕøತಿಕವಾಗಿ ಮಕ್ಕಳಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಮಹಾಸ್ವಾಮೀಜಿಗಳು, ಗದ್ದನಕೇರಿಯ ಶ್ರೀ ಮೌನೇಶ್ವರ ಮಳಿ ರಾಜೇಂದ್ರ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿ ಎಸ್.ವೈ. ಕೆಳಗಿನಮನಿ, ಗ್ರಾ.ಪಂ.ಸದಸ್ಯ ಎಮ್.ಪಿ.ಕುರಿ, ವೈದ್ಯ ಡಾ.ಕರವೀರ ಪ್ರಭು ಕ್ಯಾಲಕೊಂಡ, ಬಿಇಒ ಎನ್.ವೈ.ಕುಂದರಗಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ, ಪತ್ರಕರ್ತರಾದ ಅಡವೇಂದ್ರ ಇನಾಮದಾರ, ಉಮೇಶ ಭಿಕ್ಷಾವತಿಮಠ, ಪುರಸಭೆ ಸದಸ್ಯ ರಾಜಮಹ್ಮದ ಬಾಗವಾನ, ಮಾಜಿ ಜಿ.ಪಂ.ಸದಸ್ಯ ಎಂ. ಬಿ.ಹಂಗರಗಿ, ಮುಖಂಡ ಎಂ.ಡಿ.ಯಲಿಗಾರ, ಸುಧೀಂದ್ರ ವಿ ಹುನಗುಂಡಿ, ಶರಣಪ್ಪ ಲಿಂಗದಾಳ, ಶಿವಾನಂದ ಯಾದವಾಡ, ಪಕೀರಪ್ಪ ಕುರಹಟ್ಟಿ ಸೇರಿದಂತೆ ಇತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ , ಹಾಡು, ಸಂಗೀತ, ನಾಟಕ ಎಲ್ಲ ಜನರ ಮನಗಳನ್ನು ಸೂರ್ಯಗೊಳ್ಳುವುದರಲ್ಲಿ ಯಶಸ್ವಿಯಾದವು. ಕುಮಾರಿ. ಮಮತಾಜ್ ಖಾಜಿ ನಿರೂಪಿಸಿದರು. ಪೌಲಿನ್ ಜಳಕಿ ಸ್ವಾಗತಿಸಿದರು. ಶಾಲಾ ವಾರ್ಷಿಕ ವರದಿಯನ್ನು ಪ್ರಾಂಶುಪಾಲ ವೆಂಕಟೇಶ ಚವ್ಹಾಣ ಓದಿದರು. ಆಡಳಿತಾಧಿಕಾರಿ ಶಬಾನಾ ಹನಮಸಾಗರ ಸೇರಿದಂತೆ ಶಾಲಾ ಸಿಬ್ಬಂದಿ, ಆಡಳಿತ ಮಂಡಳಿಯ ಸದಸ್ಯರು, ಪಾಲಕರು, ಶಾಲಾ ಮಕ್ಕಳು ಭಾಗವಹಿಸಿದ್ದರು.