ಕೆಅರ್‍ಕ್ಷೇತ್ರದ ನೂತನ ಬಿಜೆಪಿ ಅಧ್ಯಕ್ಷರ ಪದಗ್ರಹಣ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.04:-ಚಾಮುಂಡಿ ಪುರಂ ವೃತ್ತದಲ್ಲಿ ಇರುವ ಶಾರದ ಅನಿಕೇತನ ಸಭಾಂಗಣದಲ್ಲಿ ಅಧಿಕೃತವಾಗಿ ಬಾ.ಜ.ಪ.ಧ್ವಜ ಹಸ್ತಾಂತರಿಸುವ ಮೂಲಕ ಗೋಪಾಲ್ ರಾಜ್ ಅರಸ್ ರವರು ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಟಿ.ಎಸ್.ಶ್ರೀ ವತ್ಸ,ನಗರ ಅಧ್ಯಕ್ಷರಾದ ಎಲ್.ನಾಗೇಂದ್ರ ಮಾಜಿ ಅಧ್ಯಕ್ಷ ರಾದ ವಡಿವೇಲು, ಮೈ.ವಿ.ರವಿಶಂಕರ್, ಗಿರೀಧರ್ ರವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲಾಯಿತು.
ನಂತರ ಸಂಸದರು ಮಾತನಾಡಿ ಕೃಷ್ಣರಾಜ ಕ್ಷೇತ್ರ ಕಾರ್ಯಕರ್ತರ ಭದ್ರಕೋಟೆ,ನಗರದಲ್ಲಿ ಅತಿ ಹೆಚ್ಚು ಕಾರ್ಯಕರ್ತರು ಇರುವ ಕ್ಷೇತ್ರ ಕೃಷ್ಣ ರಾಜ ಕ್ಷೇತ್ರ, ಅತಿ ಹೆಚ್ಚು ನತದಾನ ನಡೆಯುವ ಕ್ಷೇತ್ರ ಕೃಷ್ಣರಾಜ, ಇಂತಹ ಕ್ಷೇತ್ರದಲ್ಲಿ ಅಧ್ಯಕ್ಷರಾಗುವುದು ಹೆಮ್ಮೆಯ ವಿಚಾರ,ಎಂದು ತಿಳಿಸಿದರು..
ಕೆ.ಅರ್.ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀ ವತ್ಸ ಮಾತನಾಡಿ ಪ್ರತಿ ಮೂರು ವರ್ಷಕೊಮ್ಮೆ ಜವಾಬ್ದಾರಿ ಹಸ್ತಾಂತರ ಮಾಡುವುದು ಪಕ್ಷ ದ ನಿಯಮ, ಕಳೆದ ಹತ್ತಾರು ವರ್ಷಗಳಿಂದ ಪಕ್ಷದ ಸಂಘಟನೆ ಯಲ್ಲಿ ಇರುವ ಸಾಮಾನ್ಯ ಕಾರ್ಯಕರ್ತ ಇವರ ನಾಯಕತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮತದಾನ ಮಾಡಿಸುವ ಮೂಲಕ ರಾಜ್ಯಕ್ಕೆ ಮಾದರಿ ಕ್ಷೇತ್ರ ವನ್ನಾಗಿ ಮಾಡಬೇಕು ಎಂದು ಕಿವಿ ಮಾತು ತಿಳಿಸಿದರು.
ಕ್ಷೇತ್ರದಲ್ಲಿ ಯಾವುದೇ ಗುಂಪುಗಾರಿಕೆ ನಡೆಯುವುದಿಲ್ಲ ಇಲ್ಲಿರುವುದು ಒಂದೆ ನಾವೆಲ್ಲರೂ ಕಮಲದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಸಂಸದರಾದ ಪ್ರತಾಪ್ ಸಿಂಹ, ಟಿ.ಎಸ್.ಶ್ರೀ ವತ್ಸ,ನಗರ ಅಧ್ಯಕ್ಷರಾದ ಮೈ.ವಿ.ರವಿಶಂಕರ್, ಮಾಜಿ ಉಪಮೇಯರ್ ಡಾ.ರೂಪ,ಪ್ರಧಾನ ಕಾರ್ಯದರ್ಶಿ ಗಳಾದ ಗಿರಿಧರ್,ರಘು ಬಿ.ಎಂ.ನಗರಉಪಾಧ್ಯಕ್ಷರಾದ ಜೋಗಿ ಮಂಜು, ವಿಶ್ವೇಶ್ವರಯ್ಯ,ಕ್ಷೇತ್ರದ ಅಧ್ಯಕ್ಷ ಗೋಪಾಲ ರಾಜ ಅರಸ್,ಮಾಜಿ ಅಧ್ಯಕ್ಷ ವಡಿವೇಲು, ಯುವ ಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಜಯರಾಮ್, ಗೋಕುಲ್ ಗೊವರ್ದನ್ ,ಮಾಜಿ ನಗರಪಾಲಿಕೆ ಸದದ್ಯರಾದ,ಬಿ.ವಿ.ಮಂಜುನಾದ್, ಸೌಮ್ಯ ಉಮೇಶ್,ಕೆ.ಜೆ.ರಮೇಶ್ ,ರಾಮಪ್ರಸಾದ್, ಛಾಯದೇವಿ, ಕಮಲಮ್ಮ, ಸೀಮಾ ಪ್ರಸಾದ್,ಸೌಭಾಗ್ಯ ಮೂರ್ತಿ, ಪಿ.ಟಿ.ಕೃಷ್ಣ, ಜಗದೀಶ್, ಕಿಶೋರ್, ಸಂತೋಷ್, ಸಂದೀಪ್, ಕೀರ್ತಿ, ಮುಂತಾದವರು ಇದ್ದರೂ.