ಪೆÇೀಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.04: ಆರೋಗ್ಯ ಇಲಾಖೆಯ ವತಿಯಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಪಲ್ಸ್ ಪೆÇಲೀಯೊ ಲಸಿಕಾ ಹನಿ ಹಾಕುವ ಕಾರ್ಯಕ್ರಮಕ್ಕೆ ತಹಸೀಲ್ದಾರ್ ನಿಸರ್ಗಪ್ರಿಯ ಚಾಲನೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪೆÇಲೀಯೊ ಹನಿ ಹಾಕುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಭಾರತ ಸರ್ಕಾರದ ಧೃಡ ಸಂಕಲ್ಪದಿಂದ ನಮ್ಮ ಭಾರತ ಪೆÇೀಲಿಯೊ ಮುಕ್ತ ದೇಶವಾಗಿದೆ. ಆದರೆ ಜಗತ್ತಿನ ಕೆಲವು ದೇಶಗಳಲ್ಲಿ ಪೆÇೀಲಿಯೋ ಇನ್ನೂ ಭೀತಿಯನ್ನುಂಟುಮಾಡುತ್ತಿದೆ. ಜಗತ್ತು ಪೆÇೀಲಿಯೋ ಮುಕ್ತವಾಗದಿರುವುದರಿಂದ ನಾವು ಎಚ್ಚರ ತಪ್ಪಿದರೆ ಪೆÇೀಲಿಯೋ ಮತ್ತೆ ಮರುಕಳಿಸುವ ಅಪಾಯವಿದೆ.ಪೆÇೀಲಿಯೋ ವಿರುದ್ದ ಭಾರತ ಸಾಧಿಸಿರುವ ಗೆಲುವನ್ನು ಮುಂದುವರಿಸಲು ಪ್ರತಿಯೊಬ್ಬ ಪೆÇೀಷಕರೂ ನಮ್ಮ ಜೊತೆ ಕೈ ಜೋಡಿಸಬೇಕು. ಪ್ರತಿ ಬಾರಿಯೂ 05 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಎರಡು ಹನಿ ಪೆÇೀಲಿಯೋ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ಶಾಶ್ವತ ಅಂಗವಿಕಲತೆಯಿಂದ ಸಂರಕ್ಷಿಸಿ ಪೆÇೀಲಿಯೋ ಮುಕ್ತ ರಾಷ್ಟ್ರ ನಿರ್ಮಾಣದ ಗುರಿಯನ್ನು ಸಾಕಾರಗೊಳಿಸುವಂತೆ ತಹಸೀಲ್ದಾರ್ ನಿಸರ್ಗಪ್ರಿಯ ಕರೆ ನೀಡಿದರು.
ಪೆÇೀಲಿಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ರಾಜ್ಯದಾದ್ಯಂತ ಮಾರ್ಚಿ 03 ರಿಂದ 06 ನೇ ತಾರೀಕಿನವರೆಗೆ ಮಕ್ಕಳಿಗೆ ಪೆÇೀಲಿಯೋ ಹನಿ ಹಾಕುವ ಕಾರ್ಯಕ್ರಮ ಆರಂಭಗೊಂಡಿದೆ. ಆರೋಗ್ಯ ಇಲಾಖೆ ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ನಾಲ್ಕು ದಿನಗಳ ಲಸಿಕಾ ಅಭಿಯಾನದಲ್ಲಿ 15,435 ಮಕ್ಕಳಿಗೆ ಲಸಿಕಾ ಹನಿ ಹಾಕಲು ಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇದಕ್ಕಾಗಿ 110 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಇದಲ್ಲದೆ ಕೆ.ಆರ್.ಪೇಟೆ ಪಟ್ಟಣ ವ್ಯಾಪ್ತಿಯಲ್ಲಿ 06, ಪುರಸಭಾ ವ್ಯಾಪ್ತಿಗೆ ಸೇರಿದ ಹೊಸಹೊಳಲಿನಲ್ಲಿ 02 ಹಾಗೂ ಪಟ್ಟಣದ ಬಸ್ ನಿಲ್ದಾಣದಲ್ಲಿ ಒಂದು ವಿಶೇಷ ಲಸಿಕಾ ಕೇಂದ್ರವನ್ನು ತೆರೆಯಲಾಗಿದ್ದು ತಾಲೂಕಿನ ಯಾವುದೇ ಒಂದು ಮಗುವೂ ಲಸಿಕೆಯಿಂದ ವಂಚಿತರಾಗದಂತೆ ಆರೋಗ್ಯ ಇಲಾಖೆ ಕ್ರಮ ವಹಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಮೂರು ದಿನಗಳ ಕಾಲ ಅಂದರೆ ಮಾರ್ಚಿ 03 ರಿಂದ 05 ನೇ ತಾರೀಕಿನವರೆಗೆ ಪಲ್ಸ್ ಪೆÇೀಲಿಯೋ ಲಸಿಕಾ ಅಭಿಯಾನ ನಡೆದರೆ ಕೆ.ಆರ್.ಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ನಾಲ್ಕು ದಿನಗಳ ಕಾಲ ಅಂದರೆ ಮಾರ್ಚಿ 06 ನೇ ತಾರೀಕಿನವರೆಗೆ ನಡೆಯಲಿದೆ. ತಾಲೂಕಿನ ಎಲ್ಲಾ 05 ವರ್ಷದೊಳಗಿನ ಮಕ್ಕಳ ಪೆÇೀಷಕರು ತಮ್ಮ ಮಕ್ಕಳಿಗೆ ಪೆÇೀಲಿಯೋ ಹನಿ ಹಾಕಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಶಿಧರ್, ಪುರಸಭಾ ಸದಸ್ಯ ಗಿರೀಶ್, ಶಿಕ್ಷಣ ಸಂಯೋಜಕಿ ನೀಲಾಮಣಿ, ಮುಖ್ಯ ಶುಶ್ರೋಷಕಿ ಬೇಬಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಔಷದ ಉಗ್ರಾಣಾಧಿಕಾರಿ ಸತೀಶ್ ಬಾಬು, ಅಬ್ದುಲ್‍ಗಫಾರ್, ಹಿರಿಯ ಆರೋಗ್ಯ ಪರಿವೀಕ್ಷಣಾಧಿಕಾರಿ ಶೀಳನೆರೆ ಸತೀಶ್ ಸೇರಿದಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂಧಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.