ಭಾರತವು ವಿಶ್ವ ಆರ್ಥಿಕತೆಗೆ ಹೊಂದಿಕೊಂಡಿದೆ: ಡಾ. ದೇವಿದಾಸ ತುಮಕುಂಟೆ
ಬೀದರ:ಮಾ.4:ಭಾರತವು ವಿಶ್ವ ಆರ್ಥಿಕತೆಗೆ ಹೊಂದಿಕೊಂಡಿದೆ ಅದರ ಪ್ರಯುಕ್ತವೆ ಇಂದು ನಾವು ಮುಂದುವರೆದ ರಾಷ್ಟ್ರದ ಸಾಲಿಗೆ ಕೆಲವೆ ವರ್ಷಗಳಲ್ಲಿ ಸೆರಲಿದ್ದೇವೆ. ನಮ್ಮ ಆರ್ಥಿಕ ಪರಿಶ್ಥಿತಿ ಸಧೃಢವಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಸಾಮಾಜಿಕ ನಿಕಾಯದ ಡೀನ್ ಹಾಗೂ ಸರ್ಕಾರಿ ಪದವಿ ಮಹಾವಿದ್ಯಾಲಯ ಗೊಡಂಪಳ್ಳಿಯ ಪ್ರಾಂಶುಪಾಲರಾದ ಡಾ. ದೇವಿದಾಸ ತುಮ್‍ಕುಂಟೆ ರವರು ನಗರದ ಸಿದ್ದಾರ್ಥ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರ “ಹೊಸ ಆರ್ಥಿಕ ನೀತಿ” ಎಂಬ ವಿಷಯ ಕುರಿತು ಉದ್ಘಾಟಿಸಿ ಮಾತನಾಡಿದರು.
ಮುಂದುವರಿದು ಮಾತನಾಡುತ್ತ 92ರ ದಶಕದಿಂದ ಭಾರತ ಮುಕ್ತ ಮಾರುಕಟ್ಟೆಯತ್ತ ಹೆಜ್ಜೆ ಇಟ್ಟಿದೆ. ಈ ನಿಮಿತ್ಯ ಜಗತ್ತಿನ ವಿವಿಧ ರಾಷ್ಟ್ರಗಳ ಕಂಪನಿಗಳು ಬಂಡವಾಳ ಹುಡಿಕೆಮಾಡಿವೆ. ಇದರ ಪ್ರಯುಕ್ತ ಅನೇಕ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಮತ್ತು ತಲಾ ಆದಾಯ ಹಾಗೂ ರಾಷ್ಟ್ರೀಯ ಆದಾಯ ಉತ್ತಮ ಗೊಳ್ಳುತ್ತಿದೆ. ನಮ್ಮ ನೇರೆ ಹೋರೆಯ ರಾಷ್ಟ್ರಗಳಿಗೆ ಹೊಲಿಸಿದರೆ ಭಾರತದ ಅರ್ಥವ್ಯವಸ್ಥೆ ಸಧೃಢವಾಗಿದೆ. ಇದು ಮುಕ್ತ ಮಾರುಕಟ್ಟೆಯ ಮತ್ತು ವಿಶ್ವ ಆರ್ಥಿಕತೆಯ ನಿಯಮಗಳ ಪಾಲನೆಗಳ ಪ್ರತಿಫಲವಾಗಿದೆ ಎಂದು ನುಡಿದರು.
ಕಾರ್ಯಗಾರದ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ ಬೀದರನ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಚ್ಚಿದಾನಂದ. ಕೆ. ಮಲ್ಕಾಪೂರೆ ಮಾತನಾಡುತ್ತಾ ರಾಷ್ಟ್ರದ ಆಮದು-ರಫ್ತು ಹಾಗೂ ಷೇರು ಮಾರುಕಟ್ಟೆಯ ಕುರಿತಾಗಿ, ಉದಾರಿಕರಣ, ಖಾಸಗಿಕರಣ ಮತ್ತು ಜಾಗತಿಕರಣದ ಅನುಸಾರವಾಗಿ ನಮ್ಮ ಆರ್ಥಿಕತೆ ಮುಂದುವರೆದು ಸಕಾರಾತ್ಮಕ ಫಲಿತಾಂಶ ಸೃಷ್ಟಿಸಿದೆ. ಅಲ್ಲದೆ ದೇಶದ ಹಾಗೂ ಹೊರದೇಶದ ಅನೇಕ ಕಂಪನಿಗಳು ರಾಷ್ಟ್ರದಲ್ಲಿ ಹೂಡಿಕೆಮಾಡಿ ಅರ್ಥವ್ಯವಸ್ಥೆ ಸಬಲಿಕರಣ ಗೊಳಿಸುತ್ತಿವೆ ಎಂದು ನುಡಿದರು. ಈ ಕಾರ್ಯಗಾರದ ಅಧ್ಯಕ್ಷತೆಯನ್ನ ಸಿದ್ಧಾರ್ಥ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ಗೊಪಾಲ ಬಡಿಗೇರ್ ವಹಿಸಿ ಮಾತನಾಡುತ್ತಾ ರಾಷ್ಟ್ರದ ಆರ್.ಬಿ.ಐ ನ್ ಸಫಲತೆ ಕುರಿತು ಮಾಹಿತಿ ನೀಡಿದರು. ಕಾರ್ಯಗಾರದ ಪ್ರಾರಂಭದಲ್ಲಿ ಪೆÇ್ರ. ಎ. ಬಿ. ಅಶೋಕ ಸರ್ವರನ್ನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪೆÇ್ರ ಜಗನ್ನಾಥ ಬಡಿಗೇರ್ ಪ್ರಾರ್ಥನೆ ನಡೆಸಿಕೊಟ್ಟರು. ಪೆÇ್ರ. ಬಸವರಾಜ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಅಂತಿಮವಾಗಿ ಪೆÇ್ರ. ಗಿರೀಶ. ಎಂ. ಮೀಸಿ ವಂದನಾರ್ಪಣೆ ಮಾಡಿದರು. ಈ ಕಾರ್ಯಗಾರವನ್ನು ಸರ್ಕಾರಿ ಪದವಿ ಮಹಾವಿದ್ಯಾಲಯ ಗೊಡಂಪಳ್ಳಿ ಮತ್ತು ಸರ್ಕಾರಿ ಪದವಿ ಮಹಾವಿದ್ಯಾಲಯ ನೌಬಾದ ಬೀದರನ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಯಿತು.