ಐದನೇ ರ್ಯಾಂಕ್ ಪಡೆದ ಎಂ.ಕೆ.ಮೋನಿಕಾ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ: ಪಟ್ಟಣದ ಹಳೇ ಮೈಸೂರು ರಸ್ತೆಯಲ್ಲಿ ವಾಸವಾಗಿರುವ ಎಂ.ಕೆ. ಮೋನಿಕಾ ಅವರು ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ 2020-21ನೇ ಸಾಲಿನ ಎಂ.ಎಸ್.ಸಿ ಕ್ಲಿನಿಕಲ್ ನ್ಯೂಟ್ರಿಷಿಯನ್ ಮತ್ತು ಡಯಟಿಕ್ಸ್ ವಿಷಯದಲ್ಲಿ ಅಧ್ಯಯನ ಮಾಡಿ ಐದನೇ ರ್ಯಾಂಕ್ ಪಡೆದಿದ್ದಾರೆ. ಎಂ.ಕೆ.ಮೋನಿಕಾ ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಪ್ರಗತಿ ಎಜುಕೇಶನ್ ಟ್ರಸ್ಟ್ ಗೌರವಾಧ್ಯಕ್ಷ ಕೆ.ಕಾಳೇಗೌಡ ಅವರ ಪುತ್ರಿಯಾಗಿದ್ದು ಕ್ಲಿನಿಕಲ್ ನ್ಯೂಟ್ರಿಷಿಯನ್ ಮತ್ತು ಡಯಟಿಕ್ಸ್ ಪದವಿಯ ಜೊತೆಗೆ ಜೀವ ರಸಾಯನ ಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.
ಅವರು ಮೈಸೂರಿನ ಜೆಎಸ್‍ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಗೆ ಸಂಶೋಧನೆ ನಿರತರಾಗಿದ್ದಾರೆ. ಪಟ್ಟಣದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು 05ನೇ ರ್ಯಾಂಕ್ ಪಡೆದಿರುವ ಎಂ.ಕೆ. ಮೋನಿಕ ಅವರನ್ನು ಅಭಿನಂದಿಸಿದ್ದಾರೆ