ಚಂಡರಕಿ ಗಾನಯೋಗಿ ಸಂಸ್ಥೆಯಲ್ಲಿ ಪೂಜ್ಯ ಪುಟ್ಟ ರಾಜ 110 ನೇ ಜಯಂತಿ ಆಚರಣೆ
ಗುರುಮಠಕಲ್:ಮಾ.4:ವಂದೇ ಗುರು ಕುಮಾರ ಪಂಚಾಕ್ಷರ ಪುಟ್ಟ ರಾಜ ಪರ ಬ್ರಹ್ಮಣೇನಮ: .ನಾಡಿನ ಶ್ರೇಷ್ಠ ಸಾಧಕರು ಹಾಗೂ ಆಧ್ಯಾತ್ಮ ಸಂಗೀತ, ಸಾಹಿತ್ಯದ ಜೊತೆ ಲಕ್ಷಾಂತರ ಅನಾಥ ಅಂದ ಮಕ್ಕಳ ಬಾಳಿಗೆ ಬೆಳಕಾದ ಪದ್ಮಭೂಷಣ ಗಾನಯೋಗಿ ಡಾಕ್ಟರ್ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 110 ನೇ ಜನ್ಮದಿನಾಚರಣೆ ಆಚರಿಸಲಾಯಿತು.
ತಾಲೂಕ ಸಮಿಪದ ಚಂಡರಿಕಿ ಗಾನಯೋಗಿ ಡಾಕ್ಟರ್ ಪುಟ್ಟರಾಜ ಸಂಗೀತ ಸಾಹಿತ್ಯ ನಿರಂತರ ಸಾಂಸ್ಕøತಿಕ ಕಲಾ ಸಂಸ್ಥೆಯಲ್ಲಿ ಜರುಗಿದ ಜಯಂತೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿದ ಪತ್ರಕರ್ತ ರಾಜಲಿಂಗಪ್ಪ ಸಜ್ಜನ್ ಚಂಡರಕಿ ಅವರು ಮಾತನಾಡಿ ಪರಮಪೂಜ್ಯ ಶ್ರೀ ಗುರು ಪುಟ್ಟ ರಾಜ ಗುರುಗಳು ದಿನಾಂಕ 03-03-1914 ಸೋಮವಾರ ದಂದು ಮಾತೃ ಮೂರ್ತಿ ಸಿದ್ದಮ್ಮ ರೇವಯ್ಯ ಹಿರೇಮಠ ಜಂಗಮರ ಪುಣ್ಯ ಗರ್ಭದಲ್ಲಿ ಜನಿಸಿದ ಪೂಜ್ಯರು ಸೋದರಮಾವ ಚಂದ್ರಶೇಖರ ಸ್ವಾಮಿ ಯವರ ಪ್ರೀತಿ ವಾತ್ಸಲ್ಯದಲ್ಲಿ ಬೆಳೆದು 1936ರಲ್ಲಿ ಶ್ರೀ ಪೂಜ್ಯರು ಬಿದರಿ ಕುಮಾರ ಸ್ವಾಮಿಯವರಿಂದ ಶಿವದೀಕ್ಷ ಪಡೆದರು. ಪೂಜ್ಯರು ಅಂಧತ್ವವನ್ನು ಮೀರಿ ಅವರು ಸಮಾಜಕ್ಕಾಗಿ ಮಾಡಿದ ಸೇವೆ ಮತ್ತು ಸಾಧನೆ ಅಪಾರ ವಾದದ್ದು. ಪುಟ್ಟ ರಾಜ ಪುಟ್ಟ ರಾಜ ವೆನ್ನಿರಿ, ಪೂರ್ವ ಜನ್ಮದಲ್ಲಿ ಮಾಡಿದ ಪಾಪ ಪರಿಹರಿಸಿ ಕೊಳ್ಳಿರಿ. ಪರಮಪೂಜ್ಯ ಪುಟ್ಟ ರಾಜರು ಮಾನವ ರೂಪದಲ್ಲಿ ಬಂದ ಮಹಾದೇವರು ಎಂದು ಹೇಳಿದರು. ಈ ವೇಳೆ ಗ್ರಂಥಾಪಲಕರು ಪಿ.ಭೀಮಶಪ್ಪ ಚಂಡರಿಕಿ. ಮಹಾದೇವಪ್ಪ ಗೂಳಿ. ರಾಮುಲು ಬಡಿಗೇರ ಹಾಗೂ ವಿಧ್ಯಾರ್ಥಿಗಳು ಇದ್ದು ಪೂಜ್ಯರ ಜಯಂತಿ ಕಾರ್ಯಕ್ರಮ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.