ಮಾ.6ರಂದು ಬೃಹತ್ ಬೆಂಗಳೂರು ಚಲೋ ಚಳುವಳಿ
ವಿಜಯಪುರ:ಮಾ.4:ಜನ ಜೀವನದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಇದೇ ಮಾರ್ಚ್ 6ರಂದು ಬೃಹತ್ ಬೆಂಗಳೂರು ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಈ ಸಭೆಯನ್ನು ಉದ್ದೇಶಿಸಿ ಪಕ್ಷದ ಪಾಲಿಟ್‍ಬ್ಯೂರೊ ಸದಸ್ಯರಾದ ಕಾ. ಕೆ. ರಾಧಾಕೃಷ್ಣರವರು ಮಾತನಾಡುವರು. ನಂತರ ಕೇಂದ್ರ ಸಮಿತಿ ಸದಸ್ಯರು ಮತ್ತು ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಕೆ. ಉಮಾ ಅವರು ಮಾತನಾಡಲಿದ್ದಾರೆ. ಅಲ್ಲದೆ ಪಕ್ಷದ ಎಲ್ಲ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಈ ಹೋರಾಟಕ್ಕೆ ವಿಜಯಪುರ ಭಾಗದಿಂದ ನೂರಾರು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಕಳೆದ ಹತ್ತು ವರ್ಷಗಳ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ದೇಶದ ಜನತೆ ಹೈರಾಣಾಗಿದ್ದಾರೆ. ಒಂದೆಡೆ ದೇಶದಲ್ಲಿ ಕೇವಲ ಶೇ.5ರಷ್ಟು ಮಾತ್ರ ಬಡವರು ಎಂದು ಸುಳ್ಳು ಅಂಕಿ-ಅಂಶ ನೀಡುವ ಸರ್ಕಾರ, 80 ಕೋಟಿ ಜನರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ರೇಷನ್ ವಿತರಿಸಲಾಗುತ್ತಿದೆ ಎಂದೂ ಹೇಳುತ್ತದೆ. ಉದ್ಯೋಗ ನಾಶ, ನಿರುದ್ಯೋಗ, ಬೆಲೆ ಏರಿಕೆ ಜನರನ್ನು ಸಾಲಗಾರರನ್ನಾಗಿ ಮಾಡುತ್ತಿವೆ. ರೈತರು, ಕಾರ್ಮಿಕರು ಕಂಗಾಲಾಗಿದ್ದಾರೆ. ಎನ್‍ಇಪಿ 2020ನ್ನು ತರಾತುರಿಯಲ್ಲಿ ಜಾರಿಗೆ ತಂದು ರಾಜ್ಯದ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಶಿಕ್ಷಣ, ಆರೋಗ್ಯ ವ್ಯಾಪಾರೀಕರಣಗೊಂಡು ಬಡವರಿಗೆ ಕೈಗೆಟಕದಂತಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅವಶ್ಯಕ ರೋಗ ಪರೀಕ್ಷಾ ಸೌಲಭ್ಯ, ತಜ್ಞ ವೈದ್ಯರು, ಸಿಬ್ಬಂದಿ ಇಲ್ಲದೆ ಅಸಹಾಯಕರಾಗಿ ಖಾಸಗಿ ಆಸ್ಪತ್ರೆಗಳಿಗೆ ಹಣ ಸುರಿಯುವಂತಾಗಿದೆ. ಭಾರೀ ಪ್ರಚಾರದ ಆಯುμÁ್ಮನ್ ಭಾರತ್ ಯೋಜನೆ ಆಸ್ಪತ್ರೆಗಳಿಗೆ ಅನುದಾನ ನೀಡುವ ಯೋಜನೆಯಾಗಿದೆಯೇ ಹೊರತು ಬಡ ರೋಗಿಗಳಿಗೆ ಕ್ರೂರ ವ್ಯಂಗ್ಯವμÉ್ಟೀ ಆಗಿದೆ.
ಮೋದಿಯವರು ಮತ್ತೆ ಅಧಿಕಾರಕ್ಕೆ ಬಂದರೆ 3ನೇ ಹಂತದ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವುದಾಗಿ ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ಭೂಮಿ, ಶ್ರಮ, ಬಂಡವಾಳ ಇತ್ಯಾದಿ ಅಂಶಗಳನ್ನು ಬಂಡವಾಳಶಾಹಿಗಳಿಗೆ ಬೇಕಾದಂತೆ ಬದಲಾಯಿಸುವುದೇ ಸುಧಾರಣೆ ಎನ್ನುತ್ತಾರೆ. ಬಿಜೆಪಿ ಮತ್ತು ಅದರ ನಾಯಕ ಮೋದಿಯವರು ಇದನ್ನೇ ಭಾರತದ ವಿಕಾಸ ಎಂದು ಹೇಳಿ ಜನತೆಯನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಹಸಿವು, ಅಸಮಾನತೆ, ಅಪೌಷ್ಟಿಕತೆ, ಬಡತನ, ನಿರುದ್ಯೋಗ, ರೈತರ ಯುವಕರ ಕಾರ್ಮಿಕರ ಆತ್ಮಹತ್ಯೆಗಳು ಇವರಿಗೆ ಕಾಣುತ್ತಿಲ್ಲ. ಅವನ್ನು ಮರೆಮಾಚಲು ಯತ್ನಿಸುತ್ತಾರೆ. ರೈತಹೋರಾಟ ಅವರಿಗೆ ಕಾಣುವುದಿಲ್ಲ. ಅದರ ಬಗ್ಗೆ ಮಾತನಾಡುವುದೇ ನೆಗೆಟಿವಿಟಿ, ದೇಶದ್ರೋಹ ಎಂದು ಹಣೆಪಟ್ಟಿ ನೀಡಲಾಗಿದೆ. ಸುಂಕ ಕಟ್ಟಿ ಸಾಗುವ ಎಕ್ಸ್‍ಪ್ರೆಸ್ ಹೈವೆಗಳು, ಐμÁರಾಮಿ ವಂದೇ ಭಾರತ್ ರೈಲುಗಳು ಇವೇ ಅಭಿವೃದ್ಧಿಯ ಮಾದರಿಗಳಾಗಿವೆ. ಖಾಸಗೀಕರಣದ ಮೂಲಕ ಸಾರ್ವಜನಿಕ ಆಸ್ತಿ ಬಂಡವಾಳಶಾಹಿಗಳಿಗೆ ಧಾರೆ ಎರೆಯುತ್ತಿದ್ದಾರೆ. ಅಂತೆಯೇ 75 ವರ್ಷಗಳ ಸ್ವತಂತ್ರ ಭಾರತದಲ್ಲಿ ಬಂಡವಾಳಶಾಹಿಗಳು ಕೊಬ್ಬಿ ವಿಕಸಿತರಾಗಿದ್ದಾರೆ. ದುಡಿಯುವ ಜನತೆ ಈ ಅಭಿವೃದ್ಧಿಯ ಬುಲ್ಡೋಜರ್ ಅಡಿಯಲ್ಲಿ ಅಪ್ಪಚ್ಚಿಯಾಗಿದ್ದಾರೆ. ಇದನ್ನು ಪ್ರಶ್ನೆ ಮಾಡುವವರನ್ನು ತಡೆಯಲು ಮಂದಿರ – ಮಸೀದಿ ಜಗಳ, ಕೋಮುವಾದದ ಅಮಲು ಹರಡಲಾಗುತ್ತಿದೆ.
ರಾಜ್ಯ ಸರ್ಕಾರವು ಕೂಡ ಕೇವಲ ತನ್ನ ಗ್ಯಾರಂಟಿಗಳೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ಭಾವಿಸಿದಂತಿದೆ. ಇಲ್ಲಿ ಬಗರ್ ಹುಕುಂ ರೈತರು ದಶಕಗಳಿಂದ ಉಳುಮೆ ಮಾಡುತ್ತಿದ್ದರೂ ಹಕ್ಕುಪತ್ರ ಸಿಗುತ್ತಿಲ್ಲ. ಅರಣ್ಯ ಇಲಾಖೆಯ ಕಿರುಕುಳ ತಾಳಲಾರದೆ ಮೈಸೂರಿನ ರೈತನೊಬ್ಬ ಆತ್ಮಹತ್ಯೆ ಮಾಡಿದ್ದು, ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ. ಆದರೆ ಪ್ರಭಾವಿ ಕುಳಗಳು ದಟ್ಟ ಅರಣ್ಯದೊಳಗೆ ರೆಸಾರ್ಟ್ ಗಳನ್ನು ನಿರ್ಮಿಸಲು ಅನುಮತಿ ದೊರೆಯುತ್ತದೆ. ತೀವ್ರವಾದ ಬರ ರಾಜ್ಯದಲ್ಲಿ ತಲೆದೋರಿದ್ದು, ರೈತರ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗುತ್ತಿಲ್ಲ.
ಕೈಗಾರಿಕೆಗಳಿಗೆ ಭೂಮಿ ಕೊಟ್ಟ ರೈತರಿಗೆ ಕಾನೂನು ಪ್ರಕಾರ ಉದ್ಯೋಗ ನೀಡುತ್ತಿಲ್ಲ. ಮಾನ್ಯ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿಯೇ ಇಂತಹ ಅನ್ಯಾಯ ನಡೆದರೂ ಸೂಕ್ತ ಕ್ರಮ ಜರುಗಿಸುತ್ತಿಲ್ಲ. ಇಂತಹ ಹಲವಾರು ಸಮಸ್ಯೆಗಳನ್ನು ರಾಜ್ಯದ ಜನತೆ ಎದುರಿಸುತ್ತಿದ್ದಾರೆ. ಪುಡಿಗಾಸಿಗೆ ದುಡಿಯುವ ಆಶಾ, ಅಂಗನವಾಡಿ, ಬಿಸಿಯೂಟ ನೌಕರರಿಗೆ ಕೇಂದ್ರವಾಗಲಿ, ರಾಜ್ಯ ಸರ್ಕಾರವಾಗಲಿ ಜೀವನಯೋಗ್ಯ ವೇತನ ನೀಡುತ್ತಿಲ್ಲ. ವರಿಗೆ ಜೀವನ ಭದ್ರತೆಯಿಲ್ಲ.
ಚುನಾವಣೆಯ ಸಂದರ್ಭದಲ್ಲಿ ಜನರ ಬದುಕಿನ ಸಮಸ್ಯೆಗಳ ಕುರಿತು ಚರ್ಚೆ ಆಗಬೇಕು. ಬಂಡವಾಳಶಾಹಿ ಪಕ್ಷಗಳು ಜನರನ್ನು ವಿಷಯಾಂತರ ಮಾಡಿ ಭ್ರಮೆಗಳಲ್ಲಿ ಮುಳುಗಿಸುತ್ತವೆ. ಇಂತಹ ಸಂದರ್ಭದಲ್ಲಿ ಎಸ್.ಯು.ಸಿ.ಐ. (ಸಿ) ದೇಶದಾದ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲು ಸಹಿ ಸಂಗ್ರಹ ಆಂದೋಲನ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಇದರ ಮುಂದುವರಿಕೆಯಾಗಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಸಂಗ್ರಹವಾದ ಸಹಿಗಳನ್ನು ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಮಾನ್ಯ ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ರಾಜ್ಯದ ಮತ್ತು ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ಜನತೆ ಇದಕ್ಕೆ ಬೆಂಬಲಿಸಿ ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕೋರುತ್ತೇವೆ.
ಹಕ್ಕೊತ್ತಾಯಗಳು: