ಪಲ್ಸ್ ಪೆÇೀಲಿಯೊ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ
ಬೀದರ:ಮಾ.4:ರಾಷ್ಟ್ರೀಯ ಪಲ್ಸ್ ಪೆÇೀಲಿಯೋ ಕಾರ್ಯಕ್ರಮ ಹಿನ್ನಲೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಅಷ್ಟೂರ ಗ್ರಾಮದಲ್ಲಿ
ಮಕ್ಕಳಿಗೆ ಪೆÇೀಲಿಯೋ ಹನಿಗಳು ಹಾಕುವ ಮೂಲಕ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು
ಪ್ರತಿಯೊಬ್ಬರೂ ಕೂಡ ತಪ್ಪದೇ ನಿಮ್ಮ ಮನೆಯ ಐದು ವರ್ಷದೊಳಗಿನ ಮಕ್ಕಳಿಗೆ ಪೆÇೀಲಿಯೊ ಲಸಿಕೆ ಹಾಕಿಸಿ, ಅವರ ನೆಮ್ಮದಿಯ ನಾಳೆಗಳನ್ನು ಖಾತ್ರಿಪಡಿಸಿ.
ಎಲ್ಲಾ ಆರೋಗ್ಯ ಕೇಂದ್ರ, ಅಂಗನವಾಡಿ, ಶಾಲೆ, ಆಸ್ಪತ್ರೆ, ಬಸ್ , ರೈಲ್ವೆ, ಗ್ರಾಮ ಪಂಚಾಯಿತಿ, ಸ್ಥಳಗಳಲ್ಲಿ ಲಸಿಕೆ ಲಭ್ಯವಾಗಿರುತ್ತದೆ. ಲಸಿಕಾ ಕೇಂದ್ರಗಳಲ್ಲಿ ಇಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ ಪ್ರತಿಯೊಬ್ಬರೂ ತಮ್ಮ ಐದು ವರ್ಷದೊಳಗಿನ ಮಕ್ಕಳನ್ನು ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ ನಾಗಲಗಿದ್ದಿ, ನರಸಪ್ಪ, ರಾಹುಲ್ ಮೋರೆ, ಧನರಾಜ ಭಾಲ್ಕಿ, ರಾಜಕುಮಾರ ಕೋಳಿ, ಭದ್ರು ಸ್ವಾಮಿ, ಅನೀಲ ಮೋರ್ಗಿ, ಕುಶಲ್ ನಾಗಲಗಿದ್ದಿ, ಆಕಾಶ ಕೋಟೆ, ಮಹಾಂತೇಶ ಧರಗೊಂಡ ಮತ್ತಿತರರು ಉಪಸ್ಥಿತರಿದ್ದರು.
