ಗೋಡೆ ಬರಹ ಕಾರ್ಯಕ್ರಮ
ಲಕ್ಷ್ಮೇಶ್ವರ,ಮಾ.3: ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ ಮತ್ತು ಪಕ್ಷದ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿಎಸ್ ಗಡ್ಡದೇವರಮಠ ಅವರು ಮಾತನಾಡಿ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತ್ರತ್ವದಲ್ಲಿನ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಪಂಚ ಗ್ಯಾರಂಟಿಗಳನ್ನು ರಾಜ್ಯದ ಸಮಸ್ತ ಎಲ್ಲ ಜನರಿಗೂ ತಲುಪಿಸುವ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತವನ್ನು ಎತ್ತಿ ಹಿಡಿದಿದ್ದಾರೆ.
ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿ ಗ್ರಾಮದಲ್ಲೂ ಮನೆಮನೆಗೆ ತೆರಳಿ ಸರ್ಕಾರದ ಯೋಜನೆಗಳನ್ನು ತಲುಪಿಸಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ ಆರ್ ಕೊಪ್ಪದ ನಗರ ಘಟಕದ ಅಧ್ಯಕ್ಷ ಅಂಬರೀಶ ತೆಂಬದಮನಿ ಪುರಸಭಾ ಸದಸ್ಯ ರಾಜು ಕುಂಬಿ ರಾಮು ಗಡದವರ ಬಾಬು ಅಳವಂಡಿ ನೀಲಪ್ಪ ಪಡಿಗೇರಿ ಶಾಂತಣ್ಣ ಗುಡಿಗೇರಿ ಶಿವಯೋಗಿ ದೊಡ್ಡದೇವರ ಮಠ ಫಕೀರೇಶ್ ನಂದಣ್ಣವರ ಫಕಿರೇಶ ಮ್ಯಾಟ್ಟಣ್ಣವರ ನೀಲಪ್ಪ ಶರಶೂರಿ ಮುದುಕಣ್ಣ ಗದ್ದಿ ಸಂಜೀವ ರೆಡ್ಡಿ ಹೊಂಬಳ ಸಿದ್ದಣ್ಣ ಗದ್ದಿ ಕೃಷ್ಣ ಕುಲಕರ್ಣಿ ಸೇರಿದಂತೆ ಅನೇಕರಿದ್ದರು.