ನವಲಗುಂದ ಪುರಸಭೆ ಬಜೆಟ್ ಮಂಡನೆ
ನವಲಗುಂದ,ಮಾ.3: ಪುರಸಭೆಯ 2024-25ನೇ ಸಾಲಿನ ಅಂದಾಜು ಅಯವ್ಯಯ ಪತ್ರಿಕೆಯ ಬಜೆಟ್ ತರಾತುರಿಯಲ್ಲಿ ಮಂಡಿಸಲಾಯಿತು. ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯದೇ ಇರುವುದರಿಂದ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಬಜೆಟ್ ಮಂಡನೆ ಮಾಡಿದರು.
ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಬೇಕಾಗಿದ್ದ ಪುರಸಭೆ ಬಜೆಟ್ ಸಭೆ ಅನಿವಾರ್ಯ ಕಾರಣಗಳಿಂದ ಸಂಜೆ 5. ಗಂಟೆಗೆ ಆರಂಭಗೊಂಡಿತು.ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಗೈರಾಗಿದ್ದರು. ಕಾಂಗ್ರೆಸ್ ಪಕ್ಷದ ಸದಸ್ಯರು, ಅಧಿಕಾರಿಗಳು ಬಜೆಟ್ ಮಂಡನೆಗೆ ಸಾಕ್ಷಿಯಾದರು.
ಬಜೆಟ್ ಮೊತ್ತ 18,85,71,000 ರೂ.ಆಗಿದ್ದು 4,42,000 ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು. ನೂತನ ಆಶ್ರಯ ಪ್ಲಾಟ್ ಹಕ್ಕುಪತ್ರ ನೀಡುವುದರ ಕುರಿತು ಚರ್ಚಿ ಸಲಾಯಿತು. ನೋಂದಣಿ ಪ್ರಕ್ರಿಯೆಯಾದ ಮೇಲೆ ಹಕ್ಕುಪತ್ರ ವಿತರಿಸಬೇಕೆಂದು ಉಪವಿಭಾಗಾಧಿಕಾರಿಗಳು ತಿಳಿಸಿದರು.
ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಸಭೆಗಳು ಇದ್ದುದರಿಂದ ಬಜೆಟ್ ಮಂಡನೆ ತಡವಾಗಿ ಪ್ರಾರಂಭವಾಗಿದೆ. ಪಟ್ಟಣದ ಅಭಿವೃದ್ಧಿಯ ಗುರಿ ಇಟ್ಟುಕೊಂಡು ಬಜೆಟ್ ನಲ್ಲಿ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಯುಜಿಡಿ ಹಾಗೂ 2್ಠ47 ಕುಡಿಯುವ ನೀರಿನ ಯೋಜನೆ ಶೀಘ್ರವೇ ರೂಪಿಸಲಾಗುವುದೆಂದರು.
ಪುರಸಭೆಗೆ 3 ಕೋಟಿ ರೂ. ಅನುದಾನ ಸರಕಾರದಿಂದ ಬಂದಿದೆ. ಇದರಲ್ಲಿ ಅಣ್ಣಿಗೇರಿ ಹಾಗೂ ನವಲಗುಂದ ಪುರಸಭೆಯ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಲು ಶಾಸಕರು ಸೂಚಿಸಿದರು.
ರವೀಂದ್ರ ವಿಶ್ವಜ್ಞ ಆಯವ್ಯಯ ವಾಚಿಸಿದರು. ಲೆಕ್ಕ ಪರಿಶೋಧಕಿ ಶೋಭಾ ಹೆಬ್ಬಳ್ಳಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಭೋವಿ, ಸದಸ್ಯರಾದ ಮೋದಿನಸಾಬ ಶಿರೂರ, ಜೀವನ ಪವಾರ, ಪ್ರಕಾಶ ಶಿಗ್ನಿ ಶಿವಾನಂದ ತಡಸಿ, ಪದ್ಮಾವತಿ ಪೂಜಾರ, ಪರೀದಾಬೇಗಂ ಬಬರ್ಚಿ ಸೇರಿದಂತೆ ಪುರಸಭೆ ಎಲ್ಲ ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು .