ಅತಿವೃಷ್ಟಿಯಿಂದ ರೈತರ ಬೆಳೆ ಸಂಪೂರ್ಣ ಜಲಾವೃತ
ಭಾಲ್ಕಿ :ಸೆ.16:ಅತಿವೃಷ್ಟಿಯಿಂದ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಮಾಂಜರಾ ನದಿ ತುಂಬಿ ತುಳುಕುತ್ತಿದ್ದು, ಸುತ್ತ ಮುತ್ತಲು ಗ್ರಾಮಗಳಾದ ಕಾಸರ ತುಗಾoವ, ವಾಡಿ, ಭಾಟಸಾಗಾoವಿ, ಶಿವಣಿ, ಮಾನಕೇಶ್ವರ,ನದಿ ಸುತ್ತಮುತ್ತಲಿನ ಗ್ರಾಮದ ಗದ್ದೆಗೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿದ್ದು .ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲಿಸಿ ರೈತರ ನೆರವಿಗೆ ಧಾವಿಸಿ ಬೆಳೆ ಹಾನಿ ನಷ್ಟ ಪರಿಹಾರ ಒದಗಿಸಿ ಕೊಡಬೇಕೆಂದು ರೈತರು ತಮ್ಮ ಗೋಳು ಪತ್ರಿಕೆಗೆ ತಿಳಿಸಿದಾರೆ.