ಮುಂಸ್ಲೀರಿಂದ ಈದ್ ಮಿಲಾದ್ಮಹಮ್ಮದ್ ಪೈಗಂಬರ್ ಜಯಂತಿ ಆಚರಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.16: ಮುಸ್ಲಿಂ ಧರ್ಮಗುರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜಯಂತಿಯ ಈದ್  ಮಿಲಾದ್ ಹಬ್ಬವನ್ನು ಮುಸ್ಲಿಂ ಜನತೆ ನಗರದಲ್ಲಿ ಇಂದು  ಶ್ರದ್ದಾಭಕ್ತಿಯಿಂದ ಆಚರಿಸಿದರು.
ನಗರದ ಕೌಲ್ ಬಜಾರ್ ನಲ್ಲಿ ಬೆಳಿಗ್ಗೆ ಸಮುದಾಯದ ಮುಖಂಡರು ಮತ್ತು ಜನತೆ ಸೇರಿ ಸಿಹಿ ಹಂಚಿ ಮೆರವಣಿಗೆ ನಡೆಸಿದರು.
ಇನ್ನು ನಗರದ ಬಳ್ಳಾರಪ್ಪ ಮಸೀದಿ, ಹುಸೇನ್ ನಗರ ಮಸೀದಿ ಸೇರಿದಂತೆ ಹಲವು ಕಡೆ ಮಧ್ಯಾಹ್ನ ಸೇರಿ ಮಸೀದಿಯಲ್ಲಿ ದರ್ಶನ ಪಡೆದು ಸಿಹಿ ಹಂಚಿ ಮಕ್ಕಾ – ಮದೀನಾದ ಸ್ಮಾರಕಗಳ ಪ್ರತಿಕೃತಿಗಳ ಮೆರವಣಿಗೆ ನಡೆಸಲಿದೆ.
ಬಕ್ರೀದ್, ರಂಜಾನ್ ಮೊದಲಾದ ಹಬ್ಬಗಳಲ್ಲಿ ಮಾಂಸಹಾರಕ್ಕೆ ಪ್ರಾಧಾನ್ಯತೆ ಇದ್ದರೆ ಈ ಹಬ್ಬದಲ್ಲಿ ಮಾತ್ರ ಸಿಹಿಗೆ ಪ್ರಧಾನ್ಯತೆ ಇರುತ್ತದೆ.