ಚಿತ್ತಾಪೂರ ಜಿಲ್ಲಾ ಕೇಂದ್ರವಾಗಲಿ
ಕಲಬುರಗಿ:ಸೆ.16: ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕು ಜಿಲ್ಲಾ ಕೇಂದ್ರ ಮಾಡುವಂತೆ ಕಲಬುರಗಿಯಲ್ಲಿ ಜರುಗಲಿರುವ ವಿಶೇಷ ಸಂಪುಟ ಸಭೆಯಲ್ಲಿ ಚರ್ಚೆ ಯಾಗಿ ಘೋಷಣೆ ಮಾಡುವಂತೆ ಕರವೇ ಕಾವಲು ಪಡೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಆಗ್ರಹಿಸಿದ್ದಾರೆ.
ಚಿತ್ತಾಪೂರ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಿಯಾಂಕ ಖರ್ಗೆ ಅವರು, ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆ ಕ್ಷೇತ್ರದ ಐತಿಹಾಸಿಕ ಮಹತ್ವ ಮತ್ತು ರಾಷ್ಟ್ರಕೂಟರ ಆಡಳಿತ ಅವಧಿಯ ಅಭಿವೃದ್ಧಿಯ ಕುರಿತು ಮನವರಿಕೆ ಮಾಡಿ ಜಿಲ್ಲಾ ಕೇಂದ್ರಕ್ಕೆ ಒತ್ತಡ ತರುವಂತೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.