ರೈತರ ಬಾಳಿಗೆ ಕಲ್ಯಾಣ ಕರ್ನಾಟಕ ಉತ್ಸವ ಬೆಳಕಾಗಲಿ
ಕಾಳಗಿ:ಸೆ.16: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ಈ ಬಾರಿ ಕಲ್ಯಾಣ ಕರ್ನಾಟಕ ಉತ್ಸವದೊಂದಿಗೆ ಕಲಬುರಗಿಯಲ್ಲಿ ಸಚೀವ ಸಂಪುಟ ಸಭೆ ನಡೆಸುತ್ತಿರುವುದು ಸಂತೋಷದ ಸಂಗತಿ. ಈ ಕ್ಯಾಬಿನೇಟ್ ಸಭೆಯು ‘ಕಲ್ಯಾಣ ಕರ್ನಾಟಕ’ ದ ರೈತರ ಬಾಳಿಗೆ ಬೆಳಕಾಗಬೆಕೆಂಬುವುದು ಈ ಭಾಗದ ಬಹು ಸಂಖ್ಯಾತ ರೈತರ ಸದಾಶಯವಾಗಿದೆ.
ಕಾರಣ ಚಿಂಚೋಳಿ ತಾಲೂಕಿನ ಸಿದ್ಧಸಿರಿ ಕಾರ್ಖಾನೆ ಪ್ರಾರಂಭಿಸಿ ರೈತರಿಗೆ ಅನೂಲಕ ಮಾಡಿಕೊಡುವಂತೆ ರಟಕಲ್ ಗ್ರಾಮದಲ್ಲಿ ಹಿಂದೂ ಜಾಗೃತಿ ಸೇನೆ ತಾಲೂಕಾಧ್ಯಕ್ಷ ಶಂಕರ ಚೊಕಾ ಜಿಲ್ಲಾಧಿಕಾರಿಗಳಿಗೆ ರಕ್ತದಲ್ಲಿ ಮನವಿ ಪತ್ರ ಬರೆದರು.
ಈ ಭಾಗದ ರೈತರ ಅನೂಕುಕ್ಕಾಗಿ ಸಿದ್ಧಸಿರಿ ಕಾರ್ಖಾನೆ ಪ್ರಾರಂಭಿಸಲಾಗಿದೆ. ರಾಜಕೀಯದಿಂದ ಮಾಲಿನ್ಯ ನಿಯಂತ್ರಣ ಮಂಡಳಿ ನಾನಾ ಕಾರಣ ಹೇಳಿ ಕಾರ್ಖಾನೆ ಬಂದ್ ಮಾಡಿಸಿದ್ದು, ರೈತರಿಗೆ ಬರೆ ಎಳೆದಂತಾಗಿದೆ.
ರೈತರು ಕಾರ್ಖಾನೆಯ ಮೇಲೆ ಅವಲಂಬಿತರಾಗಿ ಸಾಲ-ಸೂಲ ಮಾಡಿ ಕಬ್ಬು ಬೆಳೆದಿದ್ದು ಕಟಾವಿಗೆ ಬಂದಿವೆ. ಇದರಲ್ಲಿ ಯಾವುದೇ ರಾಜಕೀಯ ಮಾಡದೇ ರೈತರ ಹಿತದೃಷ್ಟಿಯಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಏನೇ ಸಮಸ್ಯೆ ಇದ್ದರು ಬಗೆಹರಿಸಿ ಸಿದ್ಧಸಿರಿ ಕಾರ್ಖಾನೆ ಪ್ರಾರಂಭ ಮಾಡಬೇಕು. ಇದರಿಂದ ರೈತರಿಗೆ, ಕೂಲಿಕಾರ್ಮಿಕರಿಗೆ, ಯುವಕರಿಗೆ, ನಿರುದ್ಯೋಗಿಗಳಿಗೆ ಸಾಕಷ್ಟು ಅನೂಕುಲವಾಗಲಿದೆ ಎಂದು ಹಿಂದೂ ಜಾಗೃತಿ ಸೇನೆ ತಾಲೂಕಾಧ್ಯಕ್ಷ ಶಂಕರ ಚೊಕಾ ರಕ್ತದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಬರೆದು ವಿನಂತಿಸಿಕೊಂಡರು.
ರೈತ ಮುಖಂಡ ವೀರಣ್ಣ ಗಂಗಾಣಿ, ರಾಜಶೇಖರ ಗುಡದಾ, ಬಸವರಾಜ ತಳವಾರ, ರೇವಣಸಿದ್ದ ಬಡಾ, ಭೀಮರಾಯ ಮಲಘಾಣ, ಮಲ್ಲಣ್ಣ ಕುಡ್ಡಳ್ಳಿ, ಅನೀಲಕುಮಾರ ಮಾಲಿಪಾಟೀಲ, ವಿಜಯಕುಮಾರ ಮಾಕಪನೋರ, ಶಿವರಾಜ ಪಾಟೀಲ ಗೊಣಗಿ, ಶಿವರಾಯ ಬೊಮ್ಮಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ- ಸಿದ್ಧಸಿರಿ ಕಡೆ ಕಣ್ಣಾಯಿಸಿ ಕಾರ್ಖಾನೆ ಪ್ರಾರಂಭಿಸಿ
ಬಡ ರೈತರ ಪಾಲಿನ ಕಲ್ಪವೃಕ್ಷವಾಗಿರುವ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಕಡೆ ಕಣ್ಣಾಯಿಸುವ ಮೂಲಕ ಸಿಎಂ.ಸಿದ್ದರಾಮಯ್ಯನವರು ರೈತರಿಗೆ ಬೂಸ್ಟ್ ನೀಡಬೇಕು.
-ವೀರಣ್ಣ ಗಂಗಾಣಿ ರೈತ ನಾಯಕ