ಜೀವ ವೈವಿಧ್ಯತೆ ಸಂರಕ್ಷಿಸಿ ಉಳಿಸಿ: ಶಿವಲಿಂಗೇಶ್ವರ ಸ್ವಾಮಿಗಳು
ಹುಮನಾಬಾದ :ಸೆ.16: ಪರಿಸರ ಅಸಮತೋಲನಿಂದ ಜೀವ ವೈವಿಧ್ಯತೆ ಮೇಲೆ ಭಾರಿ ಪರಿಣಾಮ ಬೀರುತಿದೆ ಪರಿಸರ ಸಂರಕ್ಷಣೆ ಮಾಡಡಿದರೆ ನಮಗೆ ಉಳಿಗಾಲ ವಿದೆ ಎಂದು ಬಸವಕಲ್ಯಾಣ ತಾಲೂಕಿನ ಖೇಳಗಿ ಶ್ರೀ ಶಿವಲಿಂಗೇಶ್ವ ಸಂಸ್ಥಾನ ಮಠದ ಶಿವಲಿಂಗೇಶ್ವರ ಮಹಾಸ್ವಾಮಿಗಳು ತಾಲ್ಲೂಕ ಹುಡುಗಿ ಗ್ರಾಮದ ಬಸವತೀರ್ಥ ವಿಧ್ಯಾಪೀಠ ಪ್ರಾಥಮಿಕ ಶಾಲೆಯಲ್ಲಿ ಪರಿಸರ ವಾಹಿನಿ ಬೀದರ ಲಿಂ. ವೇದಮೂರ್ತಿ ಗದಗಯ್ಯಾ ಕಾವಡಿ ಮಠ ಇವರ 11ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ ಪರಿಸರೋತ್ಸವ ಜೀವ ವೈವಿಧ್ಯತೆ ಸಂರಕ್ಷಣ ಅಭಿಯಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು. ಮರ ಗಿಡಗಳ ನಾಶದಿಂದ ಮಾಲಿನ್ಯ ಹೆಚ್ಚಳವಾಗಿ ಹ¯ವಾರು ರೋಗಗಳಿಗೆ ಬಲಿಯಾಗುತ್ತಿದೇವೆ. ಇತ್ತಿಚಿನ ದಿನಗಳಲ್ಲಿ ಆಮ್ಲಜನಕ ಕೊರತೆಯಿಂದ ಅಸುನಿಗಿದ ಘಟನೆಯನ್ನು ಸ್ಮರಿಸಿದರು. ದೇಶ ವಿಶ್ವದಗಳಲ್ಲಿ ಆಮ್ಲಜನಕ ಸೇವಿಸುವ ಬ್ಯಾಂಕಗಳು ನಿರ್ಮಾಣವಾಗಿವೆ ಅಂತಹ ಕೆಟ್ಟ ದಿನಗಳು ಬರದಿರಲು ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಆಧ್ಯತೆ ನೀಡಲು ಶಿವಲಿಂಗೇಶ್ವರ ಸ್ವಾಮಿಗಳು ಕರೆ ನೀಡಿದರು. ಪತ್ರಕರ್ತ ಸುಭಾಶ ಬಣಗಾರ ಸನ್ಮಾನ ಸ್ವೀ ಕರಿ ಮಾತನಾಡಿ ಪರಿಸರೋತ್ಸವ ಕಾರ್ಯಕ್ರಮ ಇದೊಂದು ಅತ್ಯತ್ತಮ ಕಾರ್ಯಕ್ರಮವಾಗಿದೆ. ಶಿಕ್ಷಕಿ ಧನಲಕ್ಷಿ??ೀ ಪರಿಸರೋತ್ಸವ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಬಸವತೀರ್ಥ ವಿಧ್ಯಾಪೀಠ ಹುಡಗಿ (ಪರಿಸರ ಸಂರಕ್ಷಣೆ), ಸುಭಾಷ ಬಣಗಾರ ( ಅತ್ಯತ್ತಮ ಸಂಪಾದಕರು) ಗೋವಿಂದ ರೆಡ್ಡಿ ರಾಜೋಳ ( ಪ್ರಗತಿಪರ ರೈತರು) ಸಂತೋಷ ಪಾಟೀಲ (ಕೃಷಿ ಅಧಿಕಾರಿ) ನೀಲಮ್ಮ ಮಾಣ ಕಪ್ಪಾ ಗುದಗಿ (ಆದರ್ಶ ರೈತರು) ಶಾಮಣ ಬೊಂಬಳಗಿ (ಸಮಾಜ ಸೇವೆ) ಆನಂದರಾವ ಸಿ.ಕಾಳಗೊಂಡ ಕಲ್ಲೂರ (ಜನಸ್ನೇಹಿ ಬಸ್ ಚಾಲಕರು) ವೀರಪಣ್ಣ ಜನ್ನಾ (ಫ್ರೀಜ ಮೇಕಾನಿಕ) ಮುಖ್ಯಗುರುಗಳು ವಿಜಯಕುಮಾರ (ಪರಿಸರ ಜಾಗೃತಿ) ಶಶಿಕಲಾ ಕೊಠಾರೆ(ಕೈ ತೋಟ ನಿರ್ಮಾಣ ) ಶಿವಕುಮಾರ ಕನ್ನಾ (ಜನಸ್ನೇಹಿ ವ್ಯಾಪಾರಸ್ಥರು), ಸವೀತಾ ಡಿ.ಡೋಂಗ್ರೆ, ( ಅತ್ಯತ್ತಮ ಶಿಕ್ಷಕಿ) ಗಂಗಾಬಾಯಿ ಹಿರೇಮಠ (ಔಷಧಿ ಸಸ್ಯಗಳ ಸಂರಕ್ಷಣೆ) ಅನೀಲ ಕುಮಾರ ಧನ್ನೂರ (ಆಂಗ್ಲ ಭಾಷೆ ಶಿಕ್ಷಕರು ) ಮಂಜುನಾಥ ಕಟ್ಟಿಮನಿ (ಸಮಾಜ ಸೇವೆ) ಡಾ. ಶಾಂತಕುಮಾರ ಸಿದ್ದೇಶ್ವರ (ಪಶು ವೈದ್ಯರು) ಇವರುಗಳಿಗೆ 2024-25 ನೇ ಸಾಲಿನ ಪರಿಸರೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪರಿಸರ ವಾದಿ ಶೈಲೇಂದ್ರ ಕಾವಡಿ ಪ್ರಾಸ್ತಾವಿಕ ಮಾತನಾಡಿದರು. ಮಾತೋಶ್ರೀ ಸರಸ್ವತಿ ಕಾವಡಿ ಮಠ ಕಾರ್ಯಕ್ರಮದ ಅಧ್ಯಕ್ಷತೆ ಮಹಿಸಿದರು. ಸಮಾಜ ಕಾರ್ಯಕರ್ತ ಅಸ್ಮ್‍ಂಮಿಯ್ಯ ಸಸಿಗಳು ವಿತರಿಸಿದರು. ಮಹಾದೇವ ಕಾವಡಿ, ಶಂಕರ ನಂದಿ, ಕಾಶಿನಾಥ ಕೊಡ್ಲಿ. ಸಿದ್ದಯ್ಯಾ ಕಾವಡಿ ಮಠ, ಹಿರಿಯ ನಾಗರಿಕ ಪ್ರಶಸ್ತಿ ವೀರಭದ್ರಪ್ಪ ಉಪ್ಪಿನ, ಬಾಬುರಾವ ಪರಮಶೆಟ್ಟಿ, ವೀರಯ್ಯಾ ಕಾವಡಿ ಮಠ ಉಪಸ್ಥಿತರಿದ್ದರು. ಗುರುನಾಥ ಹೂಗಾರ ಸ್ವಾಗತಿಸಿದರು. ಗಂಗಾಧರ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು. ಸಿದ್ದಯ್ಯ ಕಾವಡಿ ವಂದಿಸಿದರು