ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೊಂದಿಲ್ಲ: ಡಾ. ಕೆ. ಭವಾನಿ
ಬೀದರ:ಸೆ.16:ಈ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ದೊರುಕುತ್ತಿರುವ ಜ್ಞಾನ ಅಪಾರವಾದದ್ದು. ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೊಂದಿಲ್ಲ. ಅದು ಶಕ್ತಿಯಾಗಿ ಪರಿಣಮಿಸಬೇಕಾದರೆ ಜ್ಞಾನವನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಅದು ಶಕ್ತಿಯಾಗಿ ಪರಿಣಮಿಸುತ್ತದೆ ಎಂದು ಹೇಳಿದರು.
ಇಂದು ಕಲಿಯುಗ ಅಲ್ಲ ಇದು ಮಾಹಿತಿ ಯುಗ. ಇಂದು ಎಲ್ಲಾ ತರಹದ ಮಾಹಿತಿಗಳು ಎಲ್ಲಾ ಕಡೆಗೆ ಸಿಗುವ ವ್ಯವಸ್ಥೆ ಇದೆ ಎಂದು ಹೇಳಿದರು. ವಿದ್ಯಾರ್ಥಿಗಳು ಯಾವಾಗಲು ಕನಸು ಕಾಣಬೇಕು, ಅದು ನಮಗೆ ಕ್ರಿಯೆಯಲ್ಲಿ ತೊಡಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಒಳ್ಳೆಯ ಆಹಾರ ಸೇವನೆ ನಮ್ಮ ಬೆಳವಣಿಗೆಗೆ ಪೂರಕವಾದದ್ದು, ಇಂದು ಪೌಷ್ಠಿಕ ಆಹಾರ ಸೇವನೆ ಮಾಡುವುದು ಕಡಿಮೆಯಾಗಿದೆ ಎಂದರು. ಒಟ್ಟಾರೆ ವಿದ್ಯೆಯೊಂದಿಗೆ ಆರೋಗ್ಯ ಅತ್ಯಂತ ಅವಶ್ಯಕವಾದದ್ದು ಎಂದು ಹೇಳಿದರು. ಜ್ಞಾನದಿಂದ ಜಗತ್ತಿನಲ್ಲಿ ಸರ್ವ ಪದವಿಗಳು ದೊರುಕುತ್ತವೆ ಎಂದು ಹೇಳಿದರು. ದೈಹಿಕ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಮಕ್ಕಳು ಭಾಗವಹಿಸಬೇಕು. ಗುಂಪನ್ನು ಅನುಕರಣೆ ಮಾಡುವುದಕ್ಕಿಂತ ಪ್ರತಿಭೆಗೆ ತಕ್ಕಂತೆ ಮುಂದುವರೆಯಬೇಕೆಂದು ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಘಟಕ ಬೀದರ ವತಿಯಿಂದ ಆಯೋಜಿಸಿದ ಜ್ಞಾನ-ವಿಜ್ಞಾನ ಮೇಳ ಹಾಗೂ ಸಂಸ್ಕøತಿ ಮಹೋತ್ಸವದ ಸಮಾರೋಪ ಕಾರ್ಯಕ್ರಮವನ್ನು ಉದ್ಧೆಶಿಸಿ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಅಸೋಸಿಯೇಟ್ ಪೆÇ್ರಫೆಸರ್ ಬ್ರಿಮ್ಸ್ ಹಾಗೂ ಜಿಲ್ಲಾಧ್ಯಕ್ಷರು, ಆರೋಗ್ಯ ಭಾರತಿ, ಬೀದರ ಡಾ. ಅಶೋಕ ಕುಮಾರ ನಾಗೂರೆ ಅವರು ಮಾತನಾಡುತ್ತ ಮುಂದೆ ಗುರಿ, ಹಿಂದೆ ಗುರು ಇರಬೇಕು. ಶರೀರದ ಪ್ರಮುಖ ಭಾಗ ಮೇದಳು ಇದ್ದಂತೆ ಎಲ್ಲಾ ವಿಷಯಗಳಲ್ಲಿ ಪ್ರಮುಖ ವಿಷಯ ವಿಜ್ಞಾನವಾಗಿದೆ ಎಂದ ಅವರು ಆರೋಗ್ಯವೇ ಭಾಗ್ಯವೆಂಬಂತೆ ಎಲ್ಲರೂ ಮೊದಲು ಆರೋಗ್ಯ ಕಾಪಾಡಬೇಕು. ಇದು ಅತ್ಯಂತ ಅವಶ್ಯಕವಾದದ್ದು ಎಂದು ಹೇಳಿದರು. ನಮ್ಮ ಬದುಕು ಬಂಗಾರದಂತಹ ಬದುಕಾಗಬೇಕು ಎಂದು ಅವರು ಭಾರತೀಯ ಸಂಸ್ಕೃತಿ ಕಾಪಾಡಿಕೊಂಡು, ಬೆಳೆಸುವವರು ಮಾತ್ರ ಒಬ್ಬ ಉತ್ತಮವಾದ ಪ್ರಜೆಯೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿದ ವಿದ್ಯಾಭಾರತಿ ಬೀದರ ಜಿಲ್ಲೆಯ ಅಧ್ಯಕ್ಷರಾದ ಪೆÇ್ರ|| ಎಸ್.ಬಿ. ಸಜ್ಜನಶೆಟ್ಟಿ ಅವರು ಎಲ್ಲ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀಮತಿ ಅರ್ಚನಾ ಸಿರಗೆರೆ ಅವರು ಸ್ವಾಗತ ಕೋರಿದರೆ ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಭಗುಸಿಂಗ್ ಜಾಧವ್ ಅವರು ವಂದನೆಗಳನ್ನು ಸಲ್ಲಿಸಿದರು. ಶ್ರೀ ಶರಣು ಪಾಟೀಲರು ಕಾರ್ಯಕ್ರಮವನ್ನು ನಿರೂಪಿಸಿದರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಆಡಳಿತಾಧಿಕಾರಿಗಳಾದ ಶ್ರೀ ಬಂಡೆಪ್ಪಾ ಎಕಲಾರೆ, ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಪ್ರತಿಭಾ ಚಾಮಾ ಹಾಗೂ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀ ವಿಜಯಕುಮಾರ ಕರಂಜಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಶಿಶು ವಿಭಾಗದಲ್ಲಿ ಜನಸೇವಾ ಪ್ರಾಥಮಿಕ ಶಾಲೆ ಶಾಲಾ ಸರ್ವಶ್ರೇಷ್ಠ ಪ್ರಶಸ್ತಿ, ಬಾಲ ವಿಭಾಗದಲ್ಲಿ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ ಶಾಲಾ ಸರ್ವಶ್ರೇಷ್ಠ ಪ್ರಶಸ್ತಿ ಪಡೆದರೆ, ಕಿಶೋರ ವಿಭಾಗದಲ್ಲಿ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆ ಶಾಲಾ ಸರ್ವಶ್ರೇಷ್ಠ ಪ್ರಶಸ್ತಿ ಪಡೆದಿರುತ್ತದೆ