ಇಂಜಿನಿಯರ್ಸ್ ದಿನಾಚರಣೆ: ನಗರದಲ್ಲಿ ಭವ್ಯ ಮೆರವಣಿಗೆ
ಬೀದರ್: ಸೆ.16:ಸರ್. ಎಂ. ವಿಶ್ವೇಶ್ವರಯ್ಯನವರ 164 ಜನ್ಮದಿನದ ಅಂಗವಾಗಿ ನಾಡಿನ ಮೂಕುಟಪ್ರಾಯ ಗಡಿ ಜಿಲ್ಲೆ ಬೀದರ್‍ನಲ್ಲಿ ಇಂದು ಇಂಜಿನಿಯರ್ಸ್ ದಿನಾಚರಣೆಯ ನಿಮಿತ್ಯ ಭವ್ಯ ಮೆರವಣಿಗೆ ಜರುಗಿತು.
ನಗರದ ಬಸವೇಶ್ವರ ವೃತ್ತದಲ್ಲಿ ಖ್ಯಾತ ಉದ್ಯಮಿಗಳಾದ ಸೋಮಶೇಖರ್ ಪಾಟೀಲ್ ಗಾದಗಿ ಅವರು ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆಗೈದು ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಬಸವೇಶ್ವರ ವೃತ್ತದಿಂದ ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರದ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಅಸೋಷಿಯೆಶನ್ ಆಫ್ ಕನ್ಸಲಟಿಂಗ್ ಸಿವಿಲ್ ಇಂಜಿನಿರ್ಸ್, ಬೀದರನ ಅಧ್ಯಕ್ಷರಾದ ಹಿರಿಯ ಇಂಜಿನಿಯರರಾದ ಅಶೋಕಕುಮಾರ ಉಪ್ಪೆ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಭಾರತ) ಅಧ್ಯಕ್ಷರಾದ ವೀರಶೆಟ್ಟಿ ಮಣಗೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮೇರವಣಿಗೆಯಲ್ಲಿ ಖಜಾಂಚಿಯಾದ ಓಂಕಾರ ಪಟೀಲ್, ದಿಲೀಪ ನಿಟ್ಟೂರೆ, ಮಹೇಶ ಬುರೇಂದೆ, ರಾಜಶೇಖರ ಕರಪೂರ, ಸಂದೀಪ ಕಾಡಾದೆ, , ಶಿವಕುಮಾರ ಪಾಟೀಲ, ಸಂತೋಷ ಸುಂಕದ ಪ್ರಲ್ಹಾದ್, ಹಿರಿಯ ಪತ್ರಕರ್ತರಾದ ಶಿವಶರಣಪ್ಪಾ ವಾಲಿ ಸೇರಿದಂತೆ ಅನೇಕರು ಅನೇಕರು ಉಪಸ್ಥಿತರಿದ್ದರು.
ಮೇರವಣಿಗೆಯೂ ನಗರದ ರಂಗಮಂದಿರಕ್ಕೆ ತಲುಪಿ ಮುಕ್ತಾಯಗೊಂಡಿತ್ತು. ನಂತರ ವೇದಿಕೆ ಕಾರ್ಯಕ್ರಮ ಜರುಗಿತು.