ಕ.ಸಾ.ಪ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಬಿ.ಎಂ ರಾವ್ ಆಯ್ಕೆ:ನವೆಂಬರ್ ತಿಂಗಳಲ್ಲಿ ಸಮ್ಮೇಳನ ನಡೆಸಲು ತೀರ್ಮಾನ
ಅಫಜಲಪುರ:ಸೆ.16: ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಶಿಕ್ಷಕ ಬಿ.ಎಂ. ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಪ್ರಭು ಪುಲಾರಿ ಅವರು ತಿಳಿಸಿದ್ದಾರೆ.
ಪಟ್ಟಣದ ಶ್ರೀ ಗುರು ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಬಳಿಕ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಂತರ ಮಾತನಾಡಿದ ಅವರು ತಾಲೂಕು ಮಟ್ಟದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು ಸಮ್ಮೇಳನವು ಮುಂಬರುವ ನವ್ಹೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ತಾಲೂಕಿನ ಸಂಘ-ಸಂಸ್ಥೆಗಳು, ಕನ್ನಡಪರ ಸಂಘಟನೆಗಳ ಮುಖಂಡರು, ತಾಲೂಕಿನ ಮಹಾಜನತೆ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಕೋರಿದರು.
ಕಸಾಪ ಗೌರವಾಧ್ಯಕ್ಷ ಬಸಣ್ಣ ಗುಣಾರಿ ಮಾತನಾಡಿ ನವ್ಹೆಂಬರ್‍ನಲ್ಲಿ ಸಾಹಿತ್ಯ ಸಮ್ಮೇಳನ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಹಿರಿಯ ಮುಖಂಡರ ಸಲಹೆ ಮೇರೆಗೆ ಸಮಿತಿಗಳನ್ನು ರಚನೆ ಮಾಡುವ ಮೂಲಕ ಸಮ್ಮೇಳನದ ಸಕಲ ಸಿದ್ಧತೆಗಳು ಇಂದಿನಿಂದಲೇ ಆರಂಭಿಸಿ ಎಂದು ಸಲಹೆ ನೀಡಿದರು.
ಪೂರ್ವಭಾವಿ ಸಭೆಯ ಬಳಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಬಿ. ಎಂ ರಾವ್ ಅವರ ಮನೆಗೆ ತೆರಳಿದ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಅಧಿಕೃತವಾಗಿ ಆಹ್ವಾನ ನೀಡಿ ಗೌರವಿಸಿ ಸತ್ಕರಿಸಿದರು.
ಈ ವೇಳೆ ಗೌರವ ಕಾರ್ಯದರ್ಶಿ ಡಾ.ಸಂಗಣ್ಣ ಎಂ.ಸಿಂಗೆ, ಅರುಣಕುಮಾರ ಹೂಗಾರ, ಪರಮಾನಂದ ಸರಸಂಬಿ, ಚಂದು ಬನ್ನಟ್ಟಿ, ಪ್ರಭಾವತಿ ಮೇತ್ರಿ, ಪ್ರೇಮಾವತಿ ರಾಜಾನವರ, ಬಾಹುಬಲಿ ಮಾಲಗತ್ತಿ, ಸಿದ್ದು ಶಿವಣಗಿ, ಕಾಲೇಸಾಬ ಬಾಗವಾನ, ಶ್ರೀಶೈಲ ಮ್ಯಾಳೇಶಿ ವಲಯಾಧ್ಯಕ್ಷರಾದ ಮಹಾದೇವ ವಿಶ್ವಕರ್ಮ, ಧೂಳಪ್ಪ ಈಶ್ವರಗೊಂಡ, ಅರ್ಚನಾ ಜೈನ್, ಭೀಮಾಶಂಕರ ಮೇಳಕುಂದಿ, ಚಂದ್ರಶೇಖರ ಹೊಸೂರಕರ್, ಮಲ್ಲಯ್ಯ ಹೊಸಮಠ, ಬಸವರಾಜ ಚಾಂದಕವಟೆ, ರಮೇಶ ಹೂಗಾರ, ಬಸವರಾಜ ನಿಂಬರ್ಗಿ, ಬಾಪುಗೌಡ ಬಿರಾದಾರ, ಶಕೀಲ್ ಚೌಧರಿ, ಬೀರಣ್ಣ ಕನಕಟೇಲರ್, ಸೋಂದು ಬಾಗವಾನ, ಶ್ರೀಕಾಂತ ದಿವಾಣಜಿ, ಈರಣ್ಣ ಮಗಿ, ಮಹಾಂತೇಶ ಬಳೂಂಡಗಿ, ರವಿ ಗೌರ, ಗೌತಮ ಸಕ್ಕರಗಿ, ಬಿಲಾಲ್ ಅಹ್ಮದ್, ಸಿದ್ದು ಪೂಜಾರಿ, ಸಾಯಬಣ್ಣ ಜಮಾದಾರ, ದಾದಾಗೌಡ ಬಿರಾದಾರ, ಪ್ರತಿಭಾ ಮಹಿಂದ್ರಕರ್, ಗೋಪಾಲ ಹಳ್ಯಾಳ, ರಹೀಂ ಖೇಡಿಗಿ, ಬಿಲಾಲ್ ಅಹ್ಮದ್, ಶಿವಾನಂದ ಹೂಗಾರ, ಸುಭಾಷ ತೇಲಿ, ಸೇರಿದಂತೆ ಅನೇಕರು ಇದ್ದರು.