ಪ್ರಜಾಪ್ರಭುತ್ವ ಜಾತ್ಯತೀತ ಭಾರತದ ಆಧಾರಸ್ತಂಭ: ಡಾ. ಮಲ್ಲಿಕಾರ್ಜುನ ಲಕಶಟ್ಟಿ
ಬಸವಕಲ್ಯಾಣ: ಸೆ.16:ಭಾರತವನ್ನು ಸಮಾಜವಾದಿ ಮತ್ತು ಜಾತ್ಯತೀತವಾಗಿ ರೂಪಿಸಲು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಆಧಾರಸ್ತಂಭ ವಾಗಿವೆ ಎಂದು ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶಟ್ಟಿ ಹೇಳಿದರು.
ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯುಎಸಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅನುಭವ ಮಂಟಪ ಪ್ರಜಾಪ್ರಭುತ್ವ ಅನುಷ್ಠಾನಕ್ಕೆ ತಂದ ಮೊದಲ ಸಂಸ್ಥೆಯಾಗಿದೆ. ಹಾಗಾಗಿ ಅನುಭವ ಮಂಟಪದಿಂದಲೇ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಮಾನವ ಸರಪಳಿ ಆರಂಭಿಸುವ ಯೋಜನೆ ಸರ್ಕಾರ ಹಮ್ಮಿಕೊಂಡಿದೆ ಎಂದರು.
ಬಸವಣ್ಣನವರ ವಚನಗಳಲ್ಲಿ ಪ್ರಜಾಪ್ರಭುತ್ವದ ಅಂಶಗಳಿವೆ. ಬಸವಕಲ್ಯಾಣದ ನೆಲ ವಿಶ್ವದಲ್ಲಿ ಮೊದಲು ಪ್ರಜಾಪ್ರಭುತ್ವ ಪ್ರತಿಪಾದಿಸಿದ ಸ್ಥಳವಾಗಿದೆ ಎಂದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದ ಪೆÇ್ರ. ಸಂಗೀತಾ ಮಹಾಗಾಂವೆ ಅವರು, ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವವನ್ನು ಉಳಿಸಿಕೊಳ್ಳಲು ಪ್ರಜಾಪ್ರಭುತ್ವದ ಅಗತ್ಯವಿದೆ. ಭಾರತದ ಶ್ರೀಮಂತಿಕೆಗೆ, ಸಾಂಸ್ಕøತಿಕ ಘನತೆಗೆ, ಮಾನವೀಯ ಮೌಲ್ಯಗಳ ಉಳಿವಿಗೆ ಪ್ರಜಾಪ್ರಭುತ್ವ ತಳಪಾಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿ ದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಕೃತಕ ಬುದ್ಧಿಮತ್ತೆಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳವ ಅಗತ್ಯ ಈ ಕಾಲದ್ದಾಗಿದೆ. ಆಡಳಿತ ವ್ಯವಸ್ಥೆ ಕೆಲವು ಸಂದರ್ಭಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಅಪಾಯವಿದೆ. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಈ ಸಲದ ಧ್ಯೇಯ ಮತ್ತು ಆಶೆಯ ತಂತ್ರಜ್ಞಾನದ ಭಾಗವಾದ ಕೃತಕ ಬುದ್ಧಿಮತ್ತೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ವಚನ ಸಾಹಿತ್ಯ ಮತ್ತು ಭಾರತೀಯ ಸಂವಿಧಾನದಲ್ಲಿ ಅತಿ ಹೆಚ್ಚು ಸಾಮ್ಯತೆಗಳಿವೆ. ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯ ಕನಸುಗಾರರು. ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಈ ನೆಲದಲ್ಲಿ ನೆಲೆ ನಿಲ್ಲಿಸಲು ಶ್ರಮಿಸಿದವರು. ಸ್ವಾತಂತ್ರ್ಯ, ಸಮಾನತೆ, ಅಧಿಕಾರ, ಲಿಂಗ ಸಮಾನತೆಯನ್ನು, ಮಾತನಾಡುವ, ಬರೆಯುವ ಹಕ್ಕನ್ನು ಪ್ರಜಾಪ್ರಭುತ್ವ ಹಾಗೂ ಸಂವಿಧಾನದಿಂದ ಜನರಿಗೆ ದಿಕ್ಕಿವೆ. ಈ ಕಾಲದಲ್ಲಿ ಪ್ರಜಾಪ್ರಭುತ್ವವು ಜನರು ಅಧಿಕಾರ ಮತ್ತು ಅಭಿವೃದ್ಧಿಗಳನ್ನು ತೀರ್ಮಾನಿಸುವ, ನಿರ್ಣಯಿಸುವ ಹಕ್ಕು ಆಗಬೇಕು ಎಂದರು.
ಜನ ಸಮುದಾಯದ ಆರ್ಥಿಕ, ಸಾಮಾಜಿಕ ಸಮಾನತೆ ಸಾಧಿತ ವಾಗಬೇಕು. ಈ ದೇಶದ ಸಬಾಲ್ಟರ್ನ್ ಸಮುದಾಯ ಅಧಿಕಾರದ, ಅಭಿವೃದ್ಧಿಯ ಕೇಂದ್ರಕ್ಕೆ ಬರಬೇಕು. ಹಳ್ಳಿಗಳಿಗೆ ಮೂಲಭೂತ ಸೌಕರ್ಯ, ಭೀತಿಗಳಿಲ್ಲದ ನಗರ ಮತ್ತು ಹಳ್ಳಿಗಳನ್ನು ರೂಪಿಸುವ ಪ್ರಜಾಪ್ರಭುತ್ವ ಬೇಕು. ಈ ನೆಲದ ಬಹುತ್ವ ಬದುಕಿರುವುದೇ ಪ್ರಜಾಪ್ರಭುತ್ವದ ಆಶಯಗಳಲ್ಲಿ ಎಂದರು.
ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ್, ಗಂಗಾಧರ ಸಾಲಿಮಠ, ಅನುಪಮಾ, ಅಂಜಲಿ ದುಬೆ ಮಾತನಾಡಿದರು.
ಗುರುದೇವಿ ಕಿಚಡೆ, ವಿವೇಕಾನಂದ ಶಿಂಧೆ, ಶ್ರೀನಿವಾಸ ಉಮಾಪುರೆ, ಬಸವರಾಜ ಗುಂಗೆ, ಸುಧೀರ್ ಯಾದವ್, ನೀಲಮ್ಮ ಮೇತ್ರಿ, ರೋಶನ್ ಬೀ, ಪವನ್ ಪಾಟೀಲ್, ಪ್ರಶಾಂತ ಬುಡಗೆ , ಗಣಪತರಾವ ಮೇತ್ರೆ, ಮೊದಲಾದವರು ಇದ್ದರು.
ಎಲ್ಲರೂ ಸಂವಿಧಾನ ಪೀಠಿಕೆ ಓದುವ ಮೂಲಕ ಸಮಾರಂಭ ಆರಂಭಿಸಲಾಯಿತು.
ಜಗದೇವಿ ಜವಳಿಗೆ ಸ್ವಾಗತಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಿಸಿದರು. ಚೆನ್ನಬಸಪ್ಪ ಗೌರ ವಂದಿಸಿದರು.