ವ್ಯಾಪಾರಸ್ಥರ ಸಭೆ
ಲಕ್ಷ್ಮೇಶ್ವರ,ಮಾ.3: ಪಟ್ಟಣದಲ್ಲಿ ಪ್ರಮುಖ ಮಾರುಕಟ್ಟೆ ರಸ್ತೆ ಶಿಗ್ಲಿ ನಾ ಕಾ ದಿಂದ ಭಾನು ಮಾರ್ಕೆಟ್ ರಸ್ತೆಯವರೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಸೋಮವಾರದಿಂದಲೇ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಪೂರ್ವದಲ್ಲಿ ಶನಿವಾರ ಪೆÇಲೀಸ್ ಠಾಣೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ಹಾಗೂ ವ್ಯಾಪಾರಸ್ಥರ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಮುಖ್ಯ ಅಧಿಕಾರಿ ಮಹೇಶ ಹಡಪದ ಅವರು ಮಾತನಾಡಿ ಪಟ್ಟಣ ಅಚ್ಚುಕಟ್ಟಾಗಿ ಸುಂದರವಾಗಿ ಕಾಣಲು ರಸ್ತೆಯಲ್ಲಿ ಎಲ್ಲೆಂದರಲ್ಲಿ ವ್ಯಾಪಾರ ವಹಿವಾಟು ಮಾಡುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಇದರಿಂದಾಗಿ ವ್ಯಾಪಾರಸ್ಥರು ಮತ್ತು ಬೀದಿಬದಿ ವ್ಯಾಪಾರಸ್ಥರು ಪಾದಾಚಾರಿಗಳ ಮಾರ್ಗವನ್ನು ಬಿಟ್ಟು ಅದಕ್ಕೆ ಹೊಂದಿಕೊಂಡು ವ್ಯಾಪಾರ ವಹಿವಾಟು ಮಾಡಬೇಕು ವಿನಾಕಾರಣ ಗೊಂದಲ ಸೃಷ್ಟಿ ಮಾಡುವುದರಿಂದ ಸಂಚಾರ ಅಡಚಣೆಯಾಗಿ ದಟ್ಟಣೆ ಉಂಟಾಗುತ್ತಿದೆ ಆದ್ದರಿಂದ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಿಪಿಐ ನಾಗರಾಜ್ ಮಾಡಳ್ಳಿಯವರು ಮಾತನಾಡಿ ಸುಗಮ ಸಂಚಾರ ಸುರಕ್ಷಾ ಸಂಚಾರಕ್ಕಾಗಿ ಪಟ್ಟಣದ ಪಂಪ ಸರ್ಕಲ್ ಮತ್ತು ಶಿಗ್ಲಿ ನಾಕಾದಲ್ಲಿ ಥರ್ಡ್ ಐ ಸಿ ಸಿ ಕ್ಯಾಮೆರಾ ಅಳವಡಿಸಲಾಗಿದ್ದು ಹೆಲ್ಮೆಟ್ ರಹಿತ ಮೊಬೈಲ್ ಬಳಕೆ ಕಾರ್ ಶೀಟ್ ಬೆಲ್ಟು ಸೇರಿದಂತೆ ಸಂಚಾರದ ನಿಯಮಗಳನ್ನು ಉಲ್ಲಂಘಿಸುವವರಿಗೆ ಈ ಕ್ಯಾಮೆರಾ ಅವಲೋಕನ ಮಾಡುತ್ತಿದ್ದು ಅಂತವರಿಗೆ ನೇರವಾಗಿ ದಂಡ ಕಟ್ಟಲು ನೋಟಿಸ್ ಬರುತ್ತದೆ ಈ ದೃಷ್ಟಿಯಲ್ಲಿ ಸಂಚಾರ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಮತ್ತು ಸೈಬರ್ ಕ್ರೈಮಗಳನ್ನು ತಡೆಗಟ್ಟಲು ಅನಪೇಕ್ಷಿತ ಮೊಬೈಲ್ ಕರೆಗಳಿಗೆ ಉತ್ತರಿಸದೆ ಓಟಿಪಿ ಮತ್ತಿತರ ಮಾಹಿತಿಗಳನ್ನು ನೀಡಬಾರದು ಮತ್ತು ಸಾರ್ವಜನಿಕರು ಮನೆಗಳ ಬೀಗ ಹಾಕುವಾಗ ಪೆÇೀಲಿಸರಿಗೆ ಮಾಹಿತಿ ನೀಡಬೇಕು ಬಂಗಾರ ಮತ್ತಿತರ ಬೆಲೆಬಾಳುವ ವಸ್ತುಗಳು ಇದ್ದರೆ ಬ್ಯಾಂಕಿನಲ್ಲಿಟ್ಟು ಭದ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ತಹಶೀಲ್ದಾರ್ ವಾಸುದೇವಸ್ವಾಮಿಯವರು ಮಾತನಾಡಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಸಂಚಾರದಟ್ಟಣೆ ನಿಯಂತ್ರಿಸಲು ಮತ್ತು ಅಪರಾಧಗಳನ್ನು ತಡೆಗಟ್ಟಲು ಸಾರ್ವಜನಿಕರು ಪೆÇಲೀಸರೊಂದಿಗೆ ಸಹಕರಿಸಬೇಕು ಎಂದು ಹೇಳಿದರು ಪಿಎಸ್‍ಐ ಈರಪ್ಪ ರಿತ್ತಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ತಾಲೂಕ ಅಧ್ಯಕ್ಷರಾದ ಮಂಜುನಾಥ್ ಹೊಗೆಸೊಪ್ಪಿನ ಹಾಗೂ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಬಸವೇಶ್ ಮಹಾಂತ ಶೆಟ್ಟರ್ ಅವರುಗಳು ತಾವು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆಯ ಕಂದಾಯ ಅಧಿಕಾರಿ ಶಿವಾನಂದ್ ಅಜ್ಜಣ್ಣನವರ ಮತ್ತು ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ ಸೇರಿದಂತೆ ಬೀದಿಬದಿ ವ್ಯಾಪಾರಸ್ಥರು ಮತ್ತು ವ್ಯಾಪಾರಸ್ಥರ ಪ್ರತಿನಿಧಿಗಳು ಭಾಗವಹಿಸಿದ್ದರು.