ಸಂಶೋಧನೆ ತಾಳ್ಮೆಯಿಂದ ಮಾಡುವ ಕೆಲಸ
ಧಾರವಾಡ,ಮಾ.3: ಸಂಶೋಧನೆತುಂಬ ತಾಳ್ಮೆಯಿಂದ ಮಾಡುವ ಕೆಲಸವಾಗಿದೆ. ಸಂಶೋಧಕನ ವಿಷಯವೇಕಣ್ಣ ಮುಂದಿನ ಬೆಳಕು.ಸಂಶೋಧಕಜಾತ್ಯಾತೀತ ವ್ಯಕ್ತಿಯಾಗಿಕಾರ್ಯ ಮಾಡಬೇಕೆಂದುಡಾ.ಎಸ್.ಪಿ.ಪದ್ಮಪ್ರಸಾದ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿ ನಾಡಿನ ಹಿರಿಯ ಸಂಶೋಧಕರಾದಡಾ. ಬಿ. ವ್ಹಿ. ಶಿರೂರ ದತ್ತಿ ಅಂಗವಾಗಿ ಆಯೋಜಿಸಿದ್ದ ಡಾ. ಬಿ.ವ್ಹಿ. ಶಿರೂರ ಸಂಶೋಧನ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿಡಾ. ಬಿ.ವ್ಹಿ. ಶಿರೂರ ಸಂಶೋಧನ ಪ್ರಶಸಿ-2024′ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಆರ್.ನರಸಿಂಹಾಚಾರ್, ಡಿ.ಎಲ್.ಎನ್. ಎಂ.ಎಂ. ಕಲಬುರ್ಗಿ, ಬಿ.ವ್ಹಿ. ಶಿರೂರ ಅವರಂಥವರ ಸಂಶೋಧಕರ ಕಾರ್ಯಗಳನ್ನು ಸ್ಮರಿಸಿದರು. ಈಗ ಅಂಥಗುಣಮಟ್ಟದ ಸಂಶೋಧನೆಗಳು ಬರುತ್ತಿಲ್ಲ. ಗಟ್ಟಿಕಾಯಿಗಿಂತ ಜೊಳ್ಳು ಕಾಳುಗಳ ಸಂಖ್ಯೆ ಹೆಚ್ಚುತ್ತಿದೆಎಂದು ವಿಷಾಧಿಸಿದರು.ಡಾ. ಬಿ.ವ್ಹಿ. ಶಿರೂರ ಸಂಶೋಧನ ಪ್ರಶಸ್ತಿ ಬಂದಿರುವುದು ಸಂತಸತಂದಿದೆಎಂದು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಕೆ.ರವೀಂದ್ರನಾಥಅವರುಡಾ. ಪದ್ಮಪ್ರಸಾದಅವರ ಸಂಶೋಧನೆ ಮತ್ತು ಸಾಹಿತ್ಯಿಕ ಸಾಧನೆಗಳನ್ನು ಆಧಾರಗಳೊಂದಿಗೆ ವಿವರಿಸಿದರು.
ದತ್ತಿಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ. ಬಿ.ವ್ಹಿ. ಶಿರೂರ ಅವರ ನನ್ನ ವಿದ್ಯಾರ್ಥಿ ಬಳಗವೇ ಬಹಳ ದೊಡ್ಡ ಬಂಡವಾಳ. ಹನುಮಾಕ್ಷಿ ಗೋಗಿ ಅವರಂಥವರು ಸಂಶೋಧನಕ್ಷೇತ್ರದಲ್ಲಿ ಮಾಡುವ ಕೆಲಸ ಇನ್ನೂ ಬಹಳವಿದೆ ಎಂದಅವರುತಮ್ಮ ವಿದ್ಯಾರ್ಥಿಗಳು ಮತ್ತುಕುಟುಂಬದವರುಇಟ್ಟ ದತ್ತಿದಾನಿಗಳನ್ನು ಸ್ಮರಿಸಿದರು.
ಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವಾನಂದ ಹೂಗಾರ ಪ್ರಾರ್ಥಿಸಿದರು.ಸತೀಶತುರಮರಿ ಸ್ವಾಗತಿಸಿದರು.ಡಾ. ಸಣ್ಣವೀರಣ್ಣದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಧನವಂತ ಹಾಜವಗೋಳ ನಿರೂಪಿಸಿದರು. ವೀರಣ್ಣಒಡ್ಡೀನ ವಂದಿಸಿದರು.
ಪ್ರೊ.ಮಾಲತಿ ಪಟ್ಟಣಶೆಟ್ಟಿ, ಶಂಕರ ಹಲಗತ್ತಿ, ಗುರು ಹಿರೇಮಠ, ಡಾ.ಮಹೇಶ ಹೊರಕೇರಿ, ಡಾ.ಶಾಂತಿನಾಥ ದಿಬ್ಬದ, ಮಲ್ಲಿಕಾರ್ಜುನ ಹಿರೇಮಠ, ನಿಂಗಣ್ಣಕುಂಟಿ, ಡಾ. ಲಿಂಗರಾಜಅಂಗಡಿ, ಸುರೇಶ ಹೊರಕೇರಿ, ಎಂ.ಎಂ. ಚಿಕ್ಕಮಠ, ಡಾ.ಬಳಪ್ಪ ಚಿನಗುಡಿ, ಚಿದಾನಂದ ಮಾಸನಕಟ್ಟಿ, ಗಂಗಾಧರಗಡಾದ, ಕೆ.ಎಂ.ಅಂಗಡಿ ಸೇರಿದಂತೆ ಮುಂತಾದವರಿದ್ದರು.