ಮನೆಮನೆಗಳಿಗೆ ಭೇಟಿ ಗ್ಯಾರಂಟಿ ಯೋಜನೆಗಳ ಪರಿಶೀಲನೆ
ಚಿಂಚೋಳಿ,ಮಾ.9- ತಾಲೂಕಿನ ಮೀರಿಯಾಣ ಗ್ರಾಮದಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ಸಿಗುತ್ತಿರುವ ಕುರಿತು, ಗ್ರಾಮದ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಯೋಜನೆ ಲಾಭ ಪಡೆಯುತ್ತಿರುವ ಫಲಾನುಭವಿಗಳಿಂದ ಅಭಿಪ್ರಾಯ ಸಂಗ್ರಹಿಸಲು ಹಾಗೂ ಯೋಜನೆಯ ಎಲ್ಲರಿಗೂ ಸಿಗುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿತು.
ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಾದ ಗುರುಪ್ರಸಾದ ಕವಿತಾಳ, ಅವರ ನೇತೃತ್ವದಲ್ಲಿ ತಂಡ ಗ್ರಾಮದ ಮನೆ ಮನೆಗೆ ತೆರಳಿ ಗ್ಯಾರಂಟಿಗಳ ಪಡೆದುಕೊಂಡ ಬಗ್ಗೆ ಪರಿಶೀಲನೆ ಮಾಡಿತು. ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳಾದ ಕಸ್ತೂರಿಬಾಯಿ, ಅಂಗನವಾಡಿ ಕಾರ್ಯಕರ್ತರದ ಕವಿತಾ ಪಾಟೀಲ್, ಇದ್ದರು