ಶೈಕ್ಷಣಿಕ ಕ್ರಾಂತಿಗೆ ಬಂಥನಾಳ ಶ್ರೀಗಳ ಕೊಡುಗೆ ಅನನ್ಯ : ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ: ಮಾ.3: ಬಂಥನಾಳ ಶ್ರೀಸಂಗನಬಸವಶ್ರೀಗಳು ಜಿಲ್ಲೆಯಲ್ಲಿ ಜೋಳಿಗೆ ಮೂಲಕ ಸಂಗ್ರಹಿಸಿದ ಹಣದಿಂದ ಇಂದು ಶೈಕ್ಷಣಿಕ ಕ್ರಾಂತಿ ಮಾಡಿರುವದರಿಂದ ಇಂದು ಜಿಲ್ಲೆ ಶೈಕ್ಷಣಿಕ ಅಭಿವೃದ್ದಿ ಜೊತೆ ಮಾನವೀಯ ಸಂಸ್ಕಾರಗಳು ಅಳವಡಿಸಿಕೊಂಡು ಸಾಗುತ್ತಿದ್ದೇವೆ.ಮಠ ಮಾನ್ಯಗಳು ಮನುಷ್ಯನ ಬದುಕಿಗೆ ಸಂಸ್ಕಾರ ನೀಡಿವೆ ವ್ಯಸನ ಮುಕ್ತ ಸಮಾಜ ಕಟ್ಟುವಲ್ಲಿ ಅಮೃತಾನಂದ ಮಹಾಸ್ವಾಮಿಗಳು ಕೂಡಾ ಒಬ್ಬರು ಎಂದು ಶಾಸಕ ಹಾಗೂ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.
ಸಿಂದಗಿ ರಸ್ತೆಯ ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿ ನಡೆದ ತಾಲೂಕಾ ಸರಕಾರಿ ಪ್ರಾಥಮಿಕ ಸಹಕಾರಿ ಪತ್ತಿನ ಸಂಘ ನಿ, ಇಂಡಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ತಾಲೂಕಾ ಘಟಕ ಇಂಡಿ ನೂತನ ಕಟ್ಟಡ ಉದ್ಘಾಟನೆ ತಾಲೂಕಾ ಮಟ್ಟದ ಶೈಕ್ಷಣಿಕ ಸಮ್ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
ವಿಜಯಪೂರ ಜಿಲ್ಲೆಯ ನಡೆದಾಡುವ ದೇವರಾದ ಶ್ರೀಸಿದ್ದೇಶ್ವರ ಶ್ರೀಗಳು ಪ್ರವಚನಗಳ ಮೂಲಕ ಜ್ಞಾನದ ದಾಸೋಹ ನೀಡಿದರೆ ಬಂಥನಾಳದ ಶ್ರೀಗಳು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ . ಶ್ರೀಸಿದ್ದೇಶ್ವರ ಮಹಾಸ್ವಾಮಿಗಳ ಹೆಸರು ಇಡುವದರಲ್ಲಿ ಗೊಂದಲ ಮೂಡಿಸುವುದು ತರವಲ್ಲ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳನ್ನು ಸದಾ ಸ್ಮರಿಸುವ ಕಾರ್ಯನಡೆಯಬೇಕಾದರೆ ಅವರ ಹೆಸರುಗಳು ಇಡಬೇಕಾಗುವುದು ನಮ್ಮೇಲ್ಲರ ಕರ್ತವ್ಯ. ಮುಂಬರುವ ಪೀಳಿಗೆಗೆ ಪೂಜ್ಯರು ಸದಾ ಚೀರಾಯು ಆಗಿರಬೇಕು. ಸಹಕಾರಿ ಕ್ಷೇತ್ರದಲ್ಲಿ ಡಾ.ಕುರಿಯನ್‍ರಂತ ಕೊಡುಗೆ ಅನೂನ್ಯ ಸರಕಾರಗಳು ಮಾಡದೆ ಇರುವ ಕಾರ್ಯ ಸಹಕಾರಿ ಸಂಘಗಳು ಮಾಡುತ್ತಿವೆ.
ಇಂದು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಅನೇಕ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಈ ಹಿಂದೆ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ವಿಜಯಪೂರ
ಜಿಲ್ಲೆಯ ವಿಧ್ಯಾರ್ಥಿಗಳು ರಾಜ್ಯದಲ್ಲಿಯೆ ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ. ನಮ್ಮ ಜಿಲ್ಲೆ ಯಾವುದರಲ್ಲಿ ಹಿಂದೆ ಬಿದ್ದಿಲ್ಲ. ವಿಜಯಪೂರ ,ಬಾಗಲಕೋಟ ಜನತೆ ಹೃದಯವಂತರಷ್ಠೇ ಅಲ್ಲ ತ್ಯಾಗಿಗಳು ಕೂಡಾ ಹೌದು ಅವಳಿ ಜಿಲ್ಲೆಯಲ್ಲಿ ನೀರು ಹರಿದರೂ ಕೂಡಾ ನೀರಾವರಿ ಯೋಜನೆಗಾಗಿ ನಮ್ಮ ಮನೆ ,ಮಠಗಳನ್ನು ,ಆಸ್ತಿ ,ಪಾಸ್ತಿಗಳನ್ನು ಕಳೆದುಕೊಂಡು ಸಹೋದರ ಸಂಬಂಧಿ ಜಿಲ್ಲೆಗಳಿಗೆ ನೀರು ಕೊಟ್ಟು ಹೃದಯ ವಿಶಾಲತೆಯಿಂದ ಬದಕುತ್ತಿದ್ದೇವೆ .ಇಂದಿನ ಪರಸ್ಥೀತಿ ಅವಲೋಕಿಸಿದಾಗ ಶಿಕ್ಷಕರ ಸಂಬಳ ಹೆಚ್ಚುವರಿಯಾಗಿ ಕೇಳುವುದು ಸರಿಯಾದ ಕ್ರಮವಾಗಿದೆ. ಈ ಹಿಂದೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಶಿಕ್ಷಕರಿಗಾಗಿ 10 ಸಾವಿರ ಕೋಟಿ ಸಹಾಯ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅನುಧಾನದ ಅನುಪಾತದಲ್ಲಿ ಶಿಕ್ಷಕರ ಬೇಡಿಕೆಗೆ ಸದಾ ಸ್ಪಂದಿಸುವದಾಗಿ ಭರವಸೆ ನೀಡಿದರು.
ರಾಜಕೀಯ ಕ್ಷೇತ್ರ ಕಲುಷೀತವಾಗಿದೆ ನೈತಿಕತೆ ರಾಜಕೀಯ ಮಾಡುವ ವ್ಯಕ್ತಿಗಳು ಬೆರಳಣಿಕೆಯಲ್ಲಿದ್ದಾರೆ ಅಂತಹವರ ಸಾಲಿನಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ, ಇಂತಹ ಹೃದಯವಂತ ಶಾಸಕರನ್ನು ಆಯ್ಕೆ ಮಾಡಿರುವ ನಿಮ್ಮಂತ ಜನರು ಭಾಗ್ಯವಂತರು. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಸರಕಾರಿ ನೌಕರರ ವಿರೋಧಿ ಇದ್ದಾರೆ ಎಂದು ಹೇಳುತ್ತಿರುವುದು ತಪ್ಪು ಈ ಹಿಂದೆ 10 ಸಾವಿರ ಕೋಟಿ ನೀಡಿ ಶಿಕ್ಷಕರ ಸಹಾಯಕ್ಕೆ ಬಂದಿದ್ದಾರೆ.ರಾಜ್ಯದಲ್ಲಿ 45 ಸಾವಿರಕ್ಕಿಂತ ಅಧಿಕ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷೆ ಅಸಾಧ್ಯ. ಖಾಲಿ ಹುದ್ದೆಗಳನ್ನು ತುಂಬಬೇಕು. ರಾಜ್ಯ ಸರಕಾರ ಎನ್.ಪಿ.ಎಸ್ ರದ್ದುಪಡಿಸಿ ಒ.ಪಿ.ಎಸ್ ಜಾರಿಗೋಳಿಸಬೇಕು .ಈ ದೇಶದ ಭವಿಷ್ಯ ಯಾವ ದೇವಾಲಯಗಳಲ್ಲಿ ಇಲ್ಲ ನಾಲ್ಕು ಗೋಡೆಗಳಲ್ಲಿ ಅಡಗಿದೆ. ವಿಧ್ಯಾರ್ಥಿಗಳು ಝೀರೋ ಟು ಹಿರೋ ಆಗುವುದೆ ಸರಕಾರಿ ಶಾಲೆಗಳಲ್ಲಿ ಎಂದು ಕ.ರಾ.ಪ್ರಾ.ಶಾ.ಶಿ.ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನೂಗ್ಲಿ ಹೇಳಿದರು.
ಬಸವರಾಜ ಗುರಿಕಾರ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎ.ಎಲ್.ಪಿ.ಟಿ.ಎಫ್ ದೆಹಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮಂಜುನಾಥ ಜುನಗೊಂಡ ಉಪನ್ಯಾಸ ನೀಡಿದರು.
ಕಾತ್ರಾಳ ಬಾಲಗಾಂವ ಆಶ್ರಮದ ಡಾ. ಅಮೃತಾನಂದ ಸ್ವಾಮಿಗಳು ಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ಶಿಕ್ಷಣಾಧಿಕಾರಿ ಟಿ.ಎಸ್ ಆಲಗೂರ, ಎಸ್.ಆರ್ ನಡಗಡ್ಡಿ, ಸಹಕಾರಿ ರತ್ನ ಪುರಸ್ಕøತ ಶ್ರೀಮಂತ ಇಂಡಿ , ಅರ್ಜುನ ಲಮಾಣಿ, ಎ.ಎಸ್ ಹತ್ತಳ್ಳಿ, ಎನ್.ಎಸ್ ಸಿನ್ನೂರ, ಈರಪ್ಪ ತೇಲಿ, ಎಂ.ಎಂ ತೇಲಿ, ಎ.ಎಸ್ ಲಾಳಸೇರಿ, ಜಿ.ಎಸ್ ಬೇವನೂರ, ಹಣಮಂತ ಕೊಣದಿ, ಟಿ.ಕೆ ಜಂಬಗಿ, ಚಂದ್ರಶೇಖರ ಜತ್ತಿ, ಅಶೋಕ ಚೆನ್ನಬಸುಗೋಳ,ಅಲ್ಲಾಭಕ್ಷ ವಾಲೀಕಾರ, ಜೈಶ್ರೀಬೆಣ್ಣೆ, ನೀಲಾ ಇಂಗಳೆ, ಡಾ.ಕಾಂತು ಇಂಡಿ, ಪಿ.ಎಸ್ ಚಾಂದಕವಟೆ, ಡಿ.ಜಿ ರಾಠೋಡ, ಎಂ.ಎಂ ನೇದಲಗಿ, ಎಸ್.ವ್ಹಿ ಹರಳಯ್ಯಾ,ವಾಯ್.ಟಿ ಪಾಟೀಲ,ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಧನರಾಜ ಮುಜಗೊಂಡ, ಪ್ರಕಾಶ ನಾಯಕ, ಬಸವರಾಜ ಗೋರನಾಳ ಸೇರಿದಂತೆ ಕ.ರಾ.ಪ್ರಾ.ಶಾ.ಶಿ.ಸಂಘ ತಾಲೂಕಾ ಘಟಕದ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ಪ್ರಾ.ಶಾ.ಶಿ, ಸಹಕಾರಿ ಸಂಘದ ನಿರ್ದೇಶಕರುಗಳು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ವೇದಿಕೆಯಲ್ಲಿದ್ದರು.