ಕರಕನಳ್ಳಿ ಗ್ರಾಮದ ಗುರು ಗಂಗಾಧರ ಬಕ್ಕಪ್ರಭುಗಳ ದೇವಸ್ಥಾನದಲ್ಲಿ ಭಕ್ತರಿಗಾಗಿ ಸುಸಜ್ಜಿತ 35 ಲಕ್ಷ ರೂ ವೆಚ್ಚದ ಯಾತ್ರಿ ನಿವಾಸ ಕಾಮಗಾರಿಗೆ ಚಾಲನೆ
ಬೀದರ:ಮಾ.3:ದೇವಾಲಯ ಪರಿಸರ ಸುಂದರ ಗೊಳಿಸುವುದು, ಆಕರ್ಷಣೀಯ ಗೋಳಿಸುವುದು, ಭಕ್ತರನ್ನು, ಪ್ರವಾಸಿ ಗರನ್ನು ಸೆಳೆಯುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಸುಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಕರಕನಳ್ಳಿ ಗ್ರಾಮದ ಗುರು ಗಂಗಾಧರ ಬಕ್ಕಪ್ರಭುಗಳ ದೇವಸ್ಥಾನದಲ್ಲಿ ಭಕ್ತರಿಗಾಗಿ 35 ಲಕ್ಷ ರೂ ವೆಚ್ಚದ ಯಾತ್ರಿ ನಿವಾಸ ಹಾಗೂ 15 ಲಕ್ಷ ರೂ ವೆಚ್ಚದ ಶೌಚಾಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯಡಿಯ ಶ್ರೀ ಗುರು ಗಂಗಾಧರ ಬಕ್ಕಪ್ರಭು ದೇವಸ್ಥಾನದಲ್ಲಿ ದೇವರ ಪವಾಡ ಅಪಾರವಾಗಿದೆ ದೇವರ ಆಶೀರ್ವಾದ ಹಾಗೂ ಮತದಾರರ ಆಶೀರ್ವಾದದಿಂದ ಶಾಸಕನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಹೀಗಾಗಿ ದೇವಸ್ಥಾನದಲ್ಲಿ ಅಗತ್ಯ ಸೌಲಭ್ಯಕ್ಕೆ ಇಂದು ಚಾಲನೆ ನೀಡಿದ್ದೇನೆ. ಈಗಾಗಲೇ ಚಾಲನೆ ನೀಡಿರುವ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಸಹ ಪ್ರಾರಂಭವಾಗಿದೆ. ಈ ದೇವಸ್ಥಾನಕ್ಕೆ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯ, ಜಿಲ್ಲೆಗಳ ಸಾವಿರಾರು ಭಕ್ತರ ದಂಡೇ ಧಾವಿಸಿ ಬರುತ್ತದೆ. ನಾನಾ ಕಡೆಯಿಂದ ಹರಕೆ ಹೊತ್ತು ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಾತ್ರಾ ಉತ್ಸವದಲ್ಲಿ ಸಂಚಾರ ನಿಯಂತ್ರಣ ಹಾಗೂ ಜಾತ್ರೆಯ ವೇಳೆ ಜನರನ್ನು, ವಾಹನಗಳನ್ನು ನಿಯಂತ್ರಿಸಲು ಪೆÇಲೀಸ್ ಇಲಾಖೆಯಿಂದ ಬ್ಯಾರಿಕೇಡ್ , ಶ್ರೀ ಗುರು ಗಂಗಾಧರ ಬಕ್ಕಪ್ರಭು ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ತಯಾರಿಸಲು ಸೂಕ್ತ ಸ್ಥಳ ವ್ಯವಸ್ಥೆ, ವಿಧ್ಯುತ್ ವ್ಯವಸ್ಥೆ ಮಾಡಿಕೊಡಬೇಕು ದೇವರ ದರ್ಶನ ಪಡೆಯುವ ವೇಳೆ ಸಾಲಿನಲ್ಲಿ ಯಾವುದೇ ತೋಂದರೆ ಯಾಗದಂತೆ ಎಚ್ಚರ ವಹಿಸಬೇಕು ಮತ್ತು ವೃದ್ಧರಿಗೆ ಪ್ರತೇಕ ಸಾಲಿನ ವ್ಯವಸ್ಥೆ ಮಾಡಬೇಕು ಮತ್ತು ಪೆÇೀಲೀಸ್ ಅಧಿಕಾರಿಗಳು ಕಳ್ಳತನ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಒಟ್ಟಿನಲ್ಲಿ ಎಲ್ಲಾ ಗ್ರಾಮಸ್ಥರು ಸಹ ಅಧಿಕಾರಿಗಳಿಗೆ ಸಹಕಾರ ನೀಡುವ ಮೂಲಕ ಜಾತ್ರೆ ವಿಜೃಂಭಣೆಯಿಂದ ಮಾಡಬೇಕು ಎಂದರು. ಬಳಿಕ ದೇವಸ್ಥಾನದ ಸುತ್ತಲಿನ ಸ್ಥಳದ ಸ್ವಚ್ಚತೆ ಕುರಿತು ಪರಿಶೀಲನೆ ನಡೆಸಿದ ಶಾಸಕರು ಜಾತ್ರೆಯಲ್ಲಿ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಎಸಿ ಪ್ರಕಾಶ ಕುದರೆ, ತಹಶೀಲ್ದಾರ ರವೀಂದ್ರ ದಾಮಾ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಅಕ್ರಮ ಪಾಶಾ, ಜೆಸ್ಕಾಂ ಎಇಇ ಅನೀಲಕುಮಾರ ಪಾಟೀಲ್, ಪಿಎಸ್‍ಐ ಚಿದಾನಂದ, ಕಾರ್ಯದರ್ಶಿ ಸಂಜುಕುಮಾರ, ಮುಖಂಡರಾದ ರಾಜ ರೆಡ್ಡಿ ಶಾಬಾದ, ಪ್ರಭು ಮೆಂಗಾ, ರಾಜಕುಮಾರ ಮಳಗಿ, ಶ್ರೀನಿವಾಸ ಪತ್ತಾರ, ಸುರೇಶ ಮಾಶೆಟ್ಟಿ, ಪ್ರಶಾಂತ ಬೇಮಳಖೇಡಾ, ವಿಠಲರೆಡ್ಡಿ ಪೆÇೀಲಿಸ್ ಪಾಟೀಲ್, ಶಿವಶಂಕರ ಮಾಲಿ ಪಾಟೀಲ್, ಗೋಪಾಲ ರೆಡ್ಡಿ, ಲಕ್ಷ್ಮೀಕಾಂತ ಕುಲಕರ್ಣಿ, ಗಂಗಾ ರೆಡ್ಡಿ, ಲಕ್ಷ್ಮೀಕಾಂತ ರೆಡ್ಡಿ, ವೀರಶೆಟ್ಟಿ ಪಾಟೀಲ್, ವಿಜಯಕುಮಾರ ರಾಜಗೀರಾ, ಕರಣಯ್ಯಾ ಸ್ವಾಮಿ, ಅಶೋಕ ರಾಮಜಿ, ಸಿದ್ದು , ಗೋಪಾಲ ಸುರಿ, ಸಣ್ಮೂಕಪ್ಪಾ, ಶಿವಶರಪ್ಪಾ ಮಾಸ್ಟರ್, ಪಪ್ಪು ಸ್ವಾಮಿ, ವಿಜಯಕುಮಾರ ವಾಲಿ ಮತ್ತಿತರರು ಉಪಸ್ಥಿತರಿದ್ದರು.