ಎಮ್ ಟಿ ಸಾಲಗಳ ಬಡ್ಡಿ ಮನ್ನಾ ಅವಧಿ ಏ. 30ರವರೆಗೆ ವಿಸ್ತರಿಸಲು ಆಗ್ರಹ
ಬೀದರ:ಮಾ.3:ಕರ್ನಾಟಕ ರಾಜ್ಯವು ಹಾಗೂ ನಮ್ಮ ಬೀದರ ಲೋಕಸಭಾ ಕ್ಷೇತ್ರವು ಬರಗಾಲಕ್ಕೆ ತುತ್ತಾಗಿ ರೈತರು ಆರ್ಥೀಕ ಸಂಕಷ್ಟ ಅನುಭವಿಸುತ್ತಿದ್ದಾರೆ ಇಂತಹ ಸಮಯದಲ್ಲಿ ರಾಜ್ಯದ ರೈತರ ಜೊತೆ ಸರ್ಕಾರ ನಿಲ್ಲಬೇಕು, ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಿಲುಕುತ್ತಿದ್ದಾರೆ ಇದು ಅತ್ಯಂತ ಗಂಭಿರವಾದ ವಿಷಯವಾಗಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಬೆಳಗಾವಿ ಅಧಿವೆಶನದಲ್ಲಿ ಸಕಾರವು ಎಮ್ ಟಿ ಸಾಲಗಳ ಬಡ್ಡಿ ಮನ್ನಾ ಘೋಷಣೆ ಮಾಡಿದೆ. ಆದರೆ ರೈತರನ್ನು ಅಸಲನ್ನು ಕಟ್ಟಲು ಫೆಬ್ರುವರಿ 28ರವಳಗಾಗಿ ಕಟ್ಟಿದರೆ ಮಾತ್ರ ಎಂದು ಘೋಷಿಸಿದೆ. ಇದು ಯಾವ ಮಾನ ದಂಡದ ಆಧಾರದ ಮೇಲೆ ಸರ್ಕಾರ ಘೋಷಣೆ ಮಾಡಿದೆ ತಿಳಿಯುತ್ತಿಲ್ಲಾ ಏಕೆಂದರೆ ರೈತರ ಬೆಳೆಗಳು ಮಾರ್ಚ ಏಪ್ರೀಲ್‍ವರೆಗೆ ರಾಶಿ ಕಟಾವು ನಡೆಯುತ್ತವೆ. ಅದನ್ನು ಮಾರುಕಟ್ಟೆಗೆ ಮಾರಿ ಹಣ ಕಟ್ಟಬೇಕಾಗುತ್ತದೆ.
ಒಂದು ಕಡೆ ಬರಗಾಲ ಘೊಷಣೆ ಮಾಡಿ ಅವರಿಗೆ ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಹಣ ಸಹಿತ ರೈತರಿಗೆ ಪರಿಹಾರ ಇನ್ನು ಕೊಟ್ಟಿಲ್ಲಾ, ನೀರಾವರಿ ಪ್ರದೇಶದ ರೈತರು ಕಬ್ಬು ಕಾರ್ಖನೆಗೆ ಪೂರೈಸಿ 3 4 ತಿಂಗಳಾದರು ಕಬ್ಬಿನ ಹಣ ರೈತರಿಗೆ ಪಾವತಿ ಮಾಡುತ್ತಿಲ್ಲ ರೈತರು ಫೆಬ್ರುವರಿ 28ರವಳಗಾಗಿ ಕಟ್ಟಲು ಹೇಗೆ ಸಾಧ್ಯ? ನಿಜವಾಗಿಯು ರೈತರಿಗೆ ಬಡ್ಡಿ ಮನ್ನಾ ಮಾಡುವ ಉದ್ದೆಶವಿದ್ದರೆ ಕೂಡಲೆ ಕಾರ್ಖಾನೆಗಳಿಂದ ಹಣವನ್ನು ಕೋಡಿಸಬೇಕು ಕೇಂದ್ರ ಸಚಿವ ಭಗವಂತ ಖೂಬಾ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದರ ಜೊತೆಗೆ ರಾಜ್ಯಸಭೆ ಚುನಾವಣೆ ಗೆಲುವಿನ ಸಂಭ್ರಮದಲ್ಲಿ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯದ ಶಕ್ತಿಸೌಧವಾದ ವಿಧಾನಸೌಧದಲ್ಲಿ ಪಾಕಿಸ್ಥಾನ ಜಿಂದಾಬಾದ ಎಂದಿರುವುದು ಖಂಡಿನೀಯ, ಅಂತಹ ಪಾಪಿಗಳನ್ನು ಇಲ್ಲಿಯವರೆಗೆ ಬಂಧಿಸದೆ ಇರುವುದು ಇನ್ನು ಖಂಡನೀಯ, ಸಿದ್ದರಾಮಯ್ಯನವರ ಸರ್ಕಾರ ನಡೆಯುತ್ತಿರುವುದು ಭಾರತದಲ್ಲಿ, ದೇಶದ ಮೇಲೆ ಅಭಿಮಾನವಿದ್ದರೆ, ದೇಶದ್ರೋಹಿಗಳನ್ನ ಬಂಧಿಸಬೇಕಿತ್ತು ಹಾಗೆ ಎಫ್.ಎಸ್.ಎಲ್. ವರದಿ ಬಹಿರಂಗ ಪಡಿಸಬೇಕಿತ್ತು, ಆದರೆ ಮುಸ್ಲಿಂರ ಓಲೈಕೆಗಾಗಿ ಇಲ್ಲಿಯವರೆಗೆ ಕ್ರಮ ಕೈಗೊಳ್ಳದಿರುವುದು ಇವರ ದೇಶಾಭಿಮಾನದ ಮೇಲೆ ನಮಗೆ ನಂಬಿಕೆ ಅನುಮಾನ ಬರುತ್ತಿದೆ ಎಂದು ಕೇಂದ್ರ ಸಚಿವ ಖೂಬಾ ತಿಳಿಸಿದ್ದಾರೆ.
ಕೂಡಲೆ ಪಾಕಿಸ್ಥಾನ ಜಿಂದಾಬಾದ ಎಂದು ಕೂಗಿದವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮೂರ್ನಾಲ್ಕು ದಿನಗಳ ಹಿಂದೆ ಪಾಕಿಸ್ಥಾನ ಜಿಂದಾಬಾದ ಹಾಗೆ ನಿನ್ನೆ ರಾಮೇಶ್ವರಂ ಕೆಫೇಯಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವುದು ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ದೇಶವಿರೋಧಿ ಚಟುವಟಿಕೆಗಳು ಜಾಸ್ತಿ ಆಗುತ್ತವೆ ಎಂಬುದಕ್ಕೆ ಸಾಕ್ಷಿಗಳಾಗಿವೆ, ಸರ್ಕಾರ ಬಾಂಬ್ ಬ್ಲಾಸ್ಟ್ ವಿಷಯದಲ್ಲೂ ರಾಜ್ಯ ಸರ್ಕಾರ ಆಡಳಿತ ವೈಫಲ್ಯವೆ ಕಾರಣವಾಗಿದೆ, ಕಾಂಗ್ರೇಸ್ ಸರ್ಕಾರದಲ್ಲಿ ದುಷ್ಟ ಶಕ್ತಿಗಳಿಗೆ ಬೂಸ್ಟ್ ಸಿಕ್ಕಂತಾಗುತ್ತದೆ, ನಮ್ಮ ರಾಜ್ಯಕ್ಕೆ ದೇವರೆ ಕಾಪಾಡಬೇಕು, ಈ ಸರ್ಕಾರದಿಂದ ನಮ್ಮ ರಾಜ್ಯದ ಜನರ ರಕ್ಷಣೆ ಅಸಾಧ್ಯವೆಂದು ಸಚಿವ ಖೂಬಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೂಡಲೆ ಈ ದುರ್ಘಟನೆಯ ಹಿಂದೆ ಇರುವವರನ್ನು ಹೆಡೆಮುರಿ ಕಟ್ಟುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕೆಂದು ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.