ಪಂಚಮಿತ್ರ ವಾಟ್ಸಪ್ ಆ್ಯಪ್ ಬಿಡುಗಡೆ
ಬೀದರ್:ಮಾ.3: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ” ಪಂಚಮಿತ್ರ ವಾಟ್ಸ್ ಪ್ ಆ್ಯಪ್ ಚಾಟ್ ” ( ಗ್ರಾಪಂ ಸೇವೆಗಳನ್ನು ಇನ್ನೂ ಮುಂದೆ ವಾಟ್ಸ್ ಪ ಆ್ಯಪ್ ನಲ್ಲೇ ಪಡೆಯಿರಿ ) ಎಂಬ ಮಾಹಿತಿವುಳ್ಳುವ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.
ಈ ಸಂಧರ್ಭದಲ್ಲಿ ಗೋವಿಂದ ರೆಡ್ಡಿ ಜಿಲ್ಲಾಧಿಕಾರಿಗಳು ಬೀದರ, ಗಿರೀಶ್ ಬದೊಲೆ ಮುಖ್ಯ ಕಾರ್ಯನಿರ್ವಾಹಕ ಜಿಪಂ ಬೀದರ, ಚನ್ನಬಸವ ಲಂಗೋಟಿ ಎಸ್ ಪಿ ಬೀದರ, ವಾನತಿ ಡಿ ಎಫ ಓ, ಸೂರ್ಯಕಾಂತ ಬಿರಾದಾರ ಉಪ ಕಾರ್ಯದರ್ಶಿಗಳು ಜಿಪಂ, ಹಾಗೂ ಎಲ್ಲ ಅನುಷ್ಠಾನ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಇದ್ದರು.