ಅಧಿಕಾರಕ್ಕಾಗಿ ಯಾವ ನಾಯಕರ ಮನೆ ಬಾಗಿಲು ತಟ್ಟುವುದಿಲ್ಲ
ಚಿಕ್ಕಬಳ್ಳಾಪುರ.ಮಾ೨:ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೧೯ ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿ ಪಕ್ಷದ ಬಲವರ್ಧನೆಗಾಗಿ ತನುಮನ ಧನ ವ್ಯಯಿಸಿರುವ ನನ್ನ ಸೇವೆಯನ್ನು ಪಕ್ಷವೇ ಗುರ್ತಿಸಬೇಕೆ ಹೊರತು ನಾನು ಯಾರಲ್ಲಿಯೂ ಅಧಿಕಾರಕ್ಕಾಗಿ ಯಾವ ನಾಯಕರಾ ಮನೆ ಬಾಗಿಲು ತಟ್ಟುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಅಕ್ಕಿ ಆಂಜಿನಪ್ಪ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಮೇಲಿನವರು ಪದಾಧಿಕಾರಗಳನ್ನು ಏರಿಕೆ ಮಾಡುವ ಸಂಸ್ಕೃತಿ ಈ ಹಿಂದೆ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅದು ಇರಲಿಲ್ಲ ಮತ್ತೆ ಈ ಪ್ರವೃತ್ತಿ ಬೆಳೆಯುತ್ತಿದೆ ಇದು ಪಕ್ಷದ ಸಂಘಟನೆಗೆ ಕುತ್ತು ತರುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸಿದ ಯಾರ ಮುಖಂಡರನ್ನು ಅವರ ಸೇವೆಯನ್ನು ಗಮನಕ್ಕೆ ತಂದುಕೊಳ್ಳದೆ ಈಗಾಗಲೇ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ಹೊಂದಿರುವ ಗೌರಿಬಿದನರಿನವರಿಗೆ ಚಿಕ್ಕಬಳ್ಳಾಪುರ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡಿರುವುದು ಉತ್ತಮ ನಿರ್ಧಾರ ಅಲ್ಲ ಎಂದರು.
ಇನ್ನು ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಅಧ್ಯಕ್ಷ ಸ್ಥಾನಕ್ಕೆ ಅತಿ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ ನಾನು ವೈಯಕ್ತಿಕವಾಗಿ ನನ್ನ ಬೆಂಬಲವನ್ನು ಕೋಚಿಮುಲ್ ನಿರ್ದೇಶಕರಾಗಿರುವ ಭರಣಿ ವೆಂಕಟೇಶ್ ರವರಿಗೆ ನೀಡುತ್ತೇನೆ ಎಂದರು.
ಇತ್ತೀಚಿನ ದಿನಗಳಲ್ಲಿ ಎನ್ ವಿನಯ್ ಶಾಮ್ ರವರು ಕಾಂಗ್ರೆಸ್ ಪಕ್ಷದ ಯಾವುದೇ ಪತ್ರಿಕಾಗೋಷ್ಠಿಗಳಲ್ಲಿ ಅಥವಾ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಈ ಬಗ್ಗೆ ಸುದ್ದಿಗಾರರು ಅವರನ್ನು ನೀವೇ ಕರೆಯುತ್ತಿಲ್ಲ ಅಥವಾ ನಿಮ್ಮನ್ನು ಅವರೇ ಬರಮಾಡಿಕೊಳ್ಳುತ್ತಿಲ್ಲವೋ ಎಂದು ಕೇಳಿದ ಪ್ರಶ್ನೆಗೆ ಅಂಜನಪ್ಪ ರವರು ಉತ್ತರಿಸಿ. ನಿಜಕ್ಕೂ ಏನ್ ವಿನಯ್ ಶಾಮ್ ರವರು ಸಹ ಪಕ್ಷದ ಸಂಘಟನೆಗೆ ದುಡಿದಿದ್ದಾರೆ ಇದರ ಬಗ್ಗೆ ಪಕ್ಷದ ಬ್ಲಾಕ್ ಅಧ್ಯಕ್ಷರುಗಳು ತಿಳಿಸಬೇಕು ಎಂದರು.
ಮಾಜಿ ಶಾಸಕ ಶಿವಾನಂದ ಮಾಜಿ ಮುಖ್ಯಮಂತ್ರಿ ಎಂ ವಿರಪ್ಪ ಮೈಲಿ ರವರನ್ನು ಆಧುನಿಕ ಕಾಳಿದಾಸ ಎಂದು ಹೊಗಳಿದರು ವೇದಿಕೆಯಲ್ಲಿ ಮಾಜಿ ಶಾಸಕ ಎಸ್ ಎಂ ಮುನಿಯಪ್ಪ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂವಿ ಕೃಷ್ಣಪ್ಪ ಚಿ ಮುಲ್ ನಿರ್ದೇಶಕ ಭರಣಿ ವೆಂಕಟೇಶ್ ನಗರಸಭೆ ಸದಸ್ಯ ಮಿಲ್ಟನ್ ವೆಂಕಟೇಶ್ ಅಂಬರೀಶ್ ಅಜಿತ್ ಪ್ರಸಾದ್ ಸುಧಾ ವೆಂಕಟೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಣ್ಜೇನಹಳ್ಳಿ ಜಯರಾಮ್ ಹಾಗೂ ಡಿ ವಿ ರಾಜೇಶ್ ಒಳಗೊಂಡಂತೆ ಮತ್ತಿತರರು ಹಾಜರಿದ್ದರು.