ಭಾಲ್ಕಿ ಮಂಡಲ ಅಧ್ಯಕ್ಷರಾಗಿ ವೀರಣ್ಣ ಕಾರಬಾರಿ ನೇಮಕ
ಬೀದರ,ಮಾ.02: ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಗೋರಚಿಂಚೋಳಿ ಗ್ರಾಮದ ನಿವಾಸಿಯಾದ ವೀರಣ್ಣ ಕಾರಬಾರಿ ಅವರನ್ನು ಭಾರತೀಯ ಜನತಾ ಪಾರ್ಟಿಯ ಭಾಲ್ಕಿ ಮಂಡಲ ಅಧ್ಯಕ್ಷರಾಗಿ ನಿಯುಕ್ತಿಯನ್ನು ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಹುಡಗಿ ಅವರು ಮಾಡಿದ್ದಾರೆ.
ವೀರಣ್ಣ ಕಾರಬಾರಿ ಅವರು 9 ವರ್ಷ ಗೋರಚಿಂಚೋಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಒಂದುವರೆ ವರ್ಷದಿಂದ ಔರಾದ ತಾಲೂಕಿನ ಬಿಜೆಪಿ ಪಕ್ಷದ ಸಂಘಟನಾತ್ಮಕ ಪ್ರಭಾರಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.