ಶ್ರೀನಿಧಿಗೆ ಗೋಲ್ಡ್‍ಮೆಡಲ್
ವಿಜಯಪುರ:ಮಾ.3: ಪಟ್ಟಣದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಶಿಶುನಿಕೇತನ ಶಾಲೆಯ ಒಂದನೆಯ ತರಗತಿಯಲ್ಲಿ ಓದುತ್ತಿರುವ ಕುಮಾರಿ ಶ್ರೀನಿಧಿ ಮಾಗಣಗೇರಿ ನವದೆಹಲಿಯ ಸೈಯಿನ್ಸ ಓಲಂಪಿಯಾಡ ಪೌಂಡೇಶನ್ ನಡೆಸುವ 2023-24ರ ಇಂಟೆರನ್ಯಾಷನಲ್ ಮೆಥೆಮೆಟಿಕ್ಸ್ ಓಲಂಪಿಯಾಡ ಪರೀಕ್ಷೆಯಲ್ಲಿ ಇಂಟೆರನ್ಯಾಷನಲ್ ಲೇವಲ್‍ನಲ್ಲಿ ಮೊದಲನೆಯ ರ್ಯಾಂಕ ಪಡೆಯುವುದರ ಜೊತೆಗೆ ಗೋಲ್ಡ್‍ಮೆಡಲ್ ಪಡೆದುಕೊಂಡಿದ್ದಾಳೆ. ಶ್ರೀನಿಧಿ ಮಾಗಣಗೇರಿಯ ಈ ಸಾದನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.