ರಾಜಕೀಯ ಪ್ರಚಾರ ಸಾಮಗ್ರಿಗಳ ಮುದ್ರಣ ವಿಷಯಗಳಲ್ಲಿ ಮುದ್ರಕರು ಹಾಗೂ ಪ್ರಕಾಶಕರ ಹೆಸರು ಕಡ್ಡಾಯ

ಸಂಜೆವಾಣಿ ವಾರ್ತೆ
ಮಂಡ್ಯ.ಮಾ.03- ಲೋಕಸಭಾ ಸಾರ್ವತ್ರಿಕ ಚುನಾವಣಾ-2024ರ ವೇಳಪಟ್ಟಿ ಪ್ರಕಟವಾದ ದಿನಾಂಕದಿಂದ ಕರಪತ್ರ, ಪೆÇೀಸ್ಟರ್ ಇನ್ನಿತರೆ ರಾಜಕೀಯ ಪ್ರಚಾರ ವಿಷಯಗಳನ್ನು ಮುದ್ರಿಸುವಾಗ ಮುದ್ರಕರು ಹಾಗೂ ಪ್ರಕಾಶಕರ ಹೆಸರು,ವಿಳಾಸ ಹಾಗೂ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೇಬಲ್ ಟಿ.ವಿ. ಹಾಗೂ ಮುದ್ರಣಾಲಯದ ಮಾಲೀಕರ ಸಭೆ ನಡೆಸಿ ಮಾತನಾಡಿದರು.ಚುನಾವಣಾ ಆಯೋಗ ನೀಡುವ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದರು.
ಮುದ್ರಣಾಲಯದ ಮಾಲೀಕರು ಚುನಾವಣಾ ಆಯೋಗ ನಿಗಧಿ ಪಡಿಸಿರುವ ಅಪೆಂಡಿಕ್ಸ್-ಎ ಮತ್ತು ಬಿ ನಮೂನೆಯಲ್ಲಿ ಎರಡು ಪ್ರತಿಗಳನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತೆರೆಯಲಾಗುವ ಎಂ.ಸಿ.ಎಂ.ಸಿ ಸಮಿತಿಗೆ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು ಎಂದರು.ಕರಪತ್ರ, ಪೆÇೀಸ್ಟರ್‍ಗಳಲ್ಲಿ ಪ್ರಕಾಶಕರು ಹಾಗೂ ಮುದ್ರಕರ ಹೆಸರು ಇಲ್ಲದೇ ಮುದ್ರಣ ಮಾಡಿ ಹಂಚಿಕೆಯಾಗುತ್ತಿರುವುದು ಕಂಡು ಬಂದಲ್ಲಿ ಆರ್.ಪಿ ಆ?ಯಕ್ಟ್ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾಮಾಜಿಕ ಮಾಧ್ಯಮ, ಟಿ.ವಿ.ವಾಹಿನಿ,ಕೇಬಲ್ ವಾಹಿನಿ, ಎಫ್.ಎಂ,ಬಲ್ಕ್ ಎಸ್.ಎಂ.ಎಸ್, ಇ-ಪೇಪರ್ ಸೇರಿದಂತೆ ಯಾವುದೇ ಇಲೆಕ್ಟ್ರಾನಿಕ್ ಗ್ಯಾಡ್‍ಗೆಟ್‍ಗಳನ್ನು ಬಳಸಿ ಪ್ರಸಾರ ಮಾಡುವ ಎಲ್ಲಾ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.ನಿಗಧಿತ ಅರ್ಜಿಯಲ್ಲಿ ಜಾಹೀರಾತು ವಿಷಯಗಳ ಎರಡು ಸಿ.ಡಿ ಸಲ್ಲಿಸಿ ಅನುಮೋದನೆ ಪಡೆದು ನಂತರ ಜಾಹೀರಾತು ಪ್ರಸಾರ ಮಾಡುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಡಾ.ಹೆಚ್.ಎಲ್.ನಾಗರಾಜು, ಚುನಾವಣಾ ತಹಶೀಲ್ದಾರ್ ವೆಂಕಟಾಚಲಪತಿ,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಹೆಚ್. ನಿರ್ಮಲ ಉಪಸ್ಥಿತರಿದ್ದರು.