ಜಾನಪದದಲ್ಲಿ ಮಾನವೀಯ ಮೌಲ್ಯಗಳು:ಪ್ರೊ. ಆಯ್.ಎಸ್. ಕಾಳಪ್ಪನವರ
ವಿಜಯಪುರ:ಮಾ.3: ಇಂದು ಬದುಕಿನಲ್ಲಿ ಜಾನಪದವಿಲ್ಲದಿದ್ದರೆ ಜೀವನಕ್ಕೆ ಯಾವ ಅರ್ಥ ಇರುತ್ತಿರಲಿಲ್ಲ. ನಮ್ಮ ಪೂರ್ವಜರ ನಡೆ, ನುಡಿ, ಅಂತಃಕರಣ, ತತ್ವ, ನಿಷ್ಠೆ, ಶೃದ್ದೆ, ಜೀವನ ಸಾರ್ಥಕತೆ ಮಾನವೀಯ ಮೌಲ್ಯಗಳಂತಹ ಯಾವ ನಮಗೆ ಇಂದು ಕಾಣುತ್ತಿರಲಿಲ್ಲ ಎಂದು ಬಿ.ಎಲ್.ಡಿ. ಸಂಸ್ಥೆಯ ಎಸ್.ಎಸ್. ಆವರಣದ ಆಡಳಿತಾಧಿಕಾರಿಗಳಾದ ಪ್ರೊ. ಆಯ್.ಎಸ್. ಕಾಳಪ್ಪನವರ ಹೇಳಿದರು.
ನಗರದ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಾ. ಎಂ.ಎನ್. ವಾಲಿ ಪ್ರತಿಷ್ಠಾನ ಹಾಗೂ ಡಾ. ಸರಸ್ವತಿ ಚಿಮ್ಮಲಗಿ ಅವರ ಯುಗದರ್ಶನಿ ಪ್ರತಿಷ್ಠಾನ ವತಿಯಿಂದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತ ಹಮ್ಮಿಕೊಂಡ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶರಣರ ಸಾಮಾಜಿಕ ವೈಚಾರಿಕ ಚಿಂತನೆಗಳು ಯುವ ಜನಾಂಗಕ್ಕೆ ದಾರಿದೀಪವಾಗಿವೆ ಎಂದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಬಿ.ಎನ್. ಪಾಟೀಲ ಇಬ್ರಾಹಿಂಪೂರ ಆಗಮಿಸಿ ಮಾತನಾಡಿದ ಅವರುದ ಜಾನಪದ ಸಾಹಿತ್ಯವು ಈ ನೆಲದ ನಿಧಿಯಾಗಿದೆ. ಬದುಕಿಗೆ ಸಂಸ್ಕಾರ ನೀಡುವ ಸಾಹಿತ್ಯವಾಗಿದ್ದು ವಿಶ್ವದ ಎಲ್ಲಾ ಸಾಹಿತ್ಯಗಳ ತಾಯಿಬೇರುಯಾಗಿದೆ. ಜಾನಪದ ಸಾಹಿತ್ಯವು ಬದುಕನ್ನು ಅರಳಿಸುವ ಮೌಲ್ಯಗಳನ್ನು ಒಳಗೊಂಡಿದ್ದು ಪ್ರಸ್ತುತ ಜನಾಂಗವು ವಿದೇಶಿ ಸಂಸ್ಕøತಿಯನ್ನು ಬಿಟ್ಟು ಜಾನಪದ ಸಾಹಿತ್ಯದ ಕಡೆಗೆ ಸಾಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಂಬುನಾಥ ಕಂಚ್ಯಾಣಿ ಮಾತನಾಡಿ ವಿಜಯಪುರ ಜಿಲ್ಲೆಯು ನಾಡಿನಲ್ಲೆಯೇ ಹೆಚ್ಚಿನ ಸಂಖ್ಯೆಯ ದತ್ತಿ ಸ್ಥಾಪನೆ ಹೆಚ್ಚಿನ ಸದಸ್ಯರು ಹೊಂದಿದ ಜಿಲ್ಲೆಯಾಗಿದೆ. ಹಾಗೂ ಕ್ರಿಯಾಶೀಲವಾದ ಶರಣ ಸಂಸ್ಕøತಿಗೆ ಸಂಬಂಧಪಟ್ಟಂತ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಮನೆಮಾತಾಗಿದೆ ಎಂದರು.
ಡಾ. ಉಷಾದೇವಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಎಂ. ಬಿ. ಕೋರಿ, ಎಂ.ಜಿ. ಯಾದವಾಡ, ವಿ.ಸಿ. ನಾಗಠಾಣ, ಡಾ. ಬಿ.ವಾಯ್.ಖಾಸನೀಸ, ವಿ.ಡಿ. ಐಹೊಳ್ಳಿ, ವಿಠ್ಠಳ ಪೂಜಾರಿ, ಎಂ.ಆಯ್. ಕುಮಟಗಿ, ಡಾ. ಬಿ.ಎಸ್. ಹಿರೇಮಠ, ಸುನೀಲ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಮಾರಿ ಶೃತಿ ಗುಡದಿನ್ನಿ ನಿರೂಪಿಸಿದರು. ಅಮರೇಶ ಸಾಲಕ್ಕಿ ಸ್ವಾಗತಿಸಿದರು. ರೇಖಾ ಹಿರೇಕುರಬರ ವಂದಿಸಿದರು.