ಅಧಿಕ ಕರ ವಸುಲಾತಿಯಲ್ಲಿ ಮರಖಲ-ಗಾದಗಿ ಗ್ರಾ.ಪಂ ಪ್ರಥಮ
ಬೀದರ್: ಮಾ.3:ಜಿಲ್ಲಾ ಪಂಚಾಯತಿಯ ತೆರಗೆ ವಸೂಲಾತಿ ಅಭಿಯಾನದಡಿ ಮರಖಲ ಹಾಗೂ ಗಾದಗಿ ಗ್ರಾಮ ಪಂಚಾಯತಿಗಳು ಹೆಚ್ಚಿನ ಕರ ವಸೂಲಾತಿ ಮಾಡುವ ಮೂಲಕ ಮೊದಲ ಸ್ಥಾನ ಪಡಿದುಕೊಂಡಿವೆ.
ಪ್ರಥಮ ಸ್ಥಾನ ಪಡೆದ ಮರಖಲ್ ಗ್ರಾಮ ಪಂಚಾಯತ ಅಭಿವೃದ್ದಿ ಉಮೇಶ್ ಜಾಬಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಹಾಗೂ ಬೀದರ ತಾಲೂಕಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸತತವಾಗಿ ಕೆಲಸ ಮಾಡಿದರಿಂದ ಈ ಪ್ರಶಸ್ತಿ ಲಭಿಸುವಂತಾಗಿದೆ ಎಂದರು.
ಗಾದಗಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಅನಿಲಕುಮಾರ ಮಾತನಾಡಿ, ಎಲ್ಲಾ ಸಿಬ್ಬಂದಿಗಳ ಸಹಕಾರಿದಿಂದ ನಮ್ಮ ಪಂಚಾಯತಿಯಲ್ಲಿ ಹೆಚ್ಚಿನ ಕರವಸೂಲಾತಿ ಮಾಡಲು ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕೆಲಸ ಮಾಡಲು ಪ್ರೇರಣೆಯಾಗಿದೆ ಎಂದು ಹೇಳಿದರು