ರಾಜಶ್ರೀ ಮಾವಿನಕುರ್ವೆ ಅವರಿಗೆ ಪಿಎಚ್.ಡಿ. ಪದವಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೩: ಪ್ರಾಧ್ಯಾಪಕ ಪ್ರೊ.ರವಿಕುಮಾರ ಪಾಟೀಲ ಎಚ್.ಎಸ್. ಅವರ ಮಾರ್ಗದರ್ಶನದಲ್ಲಿ ಆಹಾರ ತಂತ್ರಜ್ಞಾನ ಅಧ್ಯಯನ ವಿಭಾಗದಲ್ಲಿ ಸಂಶೋಧನೆ ನಡೆಸಿ, ಪ್ರಬಂಧ ಮಂಡಿಸಿದ ರಾಜಶ್ರೀ ಮಾವಿನಕುರ್ವೆ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.ರಾಜಶ್ರೀ ಅವರು ‘ಎಕ್ಸ್ಪ್ಲೋರಿಂಗ್ ಬಯೊಡೈನಾಮಿಕ್ ಎಫೆಕ್ಟ್÷್ಸ ಆಫ್ ಸೆಲೆಕ್ಟೆಡ್ ಟ್ರೆಡಿಷನಲ್ ಫುಡ್ ಫಾರ್ಮುಲೇಷನ್ಸ್ ಫಾರ್ ಲ್ಯಾಕ್ಟೇಟಿಂಗ್ ವುಮೆನ್’ ವಿಷಯ ಕುರಿತು ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿದ್ದರು.