ನೀರಿನ ಬಾಟಲ್ – ಕಿತ್ತಳೆ ಹಣ್ಣು ವಿತರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ,ಮಾ.೩- ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ದಾವಣಗೆರೆಯಿಂದ ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿಯ 45ನೇ ವರ್ಷದ ಕೊಟ್ಟೂರು ಜಾತ್ರೆಗೆ ತೆರಳುತ್ತಿರುವ ಪಾದಯಾತ್ರೆಗಳಿಗೆ ಅರಸೀಕೆರೆಯ ಸರಕಾರಿ ಶಾಲೆ ಹತ್ತಿರ ನೀರಿನ ಬಾಟಲ್ ಹಾಗೂ ಕಿತ್ತಳೆ ಹಣ್ಣುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಧ್ಯ ಕರ್ನಾಟಕ ಜಿಲ್ಲಾಧ್ಯಕ್ಷ ನಾಗರಾಜ್ ಗೌಡ, ರಾಜ್ಯ ಖಜಾಂಚಿ ಎಂ ರವಿ, ರಾಜ್ಯ ಸಂಚಾಲಕ ಬಿ ಇ ದಯಾನಂದ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ದೊಡ್ಮನಿ, ಜಿಲ್ಲಾ ಸಂಚಾಲಕ ಮಂಜುನಾಥ್, ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಎಂ ಮನು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು