ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಾ. 5 ರಂದು ಜನಸ್ಪಂದನ ಕಾರ್ಯಕ್ರಮ
ಕಲಬುರಗಿ:ಮಾ.02: ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಾರ್ಚ 5 ರಂದು ಗ್ರಾಮೀಣಾಬಿವೃದ್ಧಿ, ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತ್ರಂತ್ರಜ್ಞಾನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಅಧ್ಯಕ್ಷತೆ ಜನಸ್ಪಂದನ ಕಾರ್ಯಕ್ರಮ ಜರಗುವುದು ಎಂದು ಜಿಲ್ಲಾಧಿಕಾರಿ. ಫೌಜಿಯಾ ತರನ್ನುಮ್ ಬಿ ಅವರು ಹೇಳಿದರು.
ಶನಿವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನಸ್ಪಂದನ ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜರಗಲಿದ್ದು, ಬೆಳಿಗ್ಗೆ 10.30 ಗಂಟೆಯಿಂದ 5.30 ಗಂಟೆಯವರೆ ಅದು ನಡೆಯುವ ಕಾರ್ಯಕ್ರಮ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಆಗಮಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗುವುದು. ಈ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸಮನ್ವಯತೆ ಕೆಲಸಗಳು ನಿರ್ವಹಿಸಲು ಸೂಚಿಸಿದರು.
20 ಮಳಿಗೆಗಳನ್ನು ಹಾಕಬೇಕು ಮಳಿಗೆಗಳು ಕ್ರಮಬದ್ಧವಾಗಿ ಹಾಕಬೇಕು ಜನರಿಗೆ ಹೋಗಲು ಬರಲು ಯಾವುದೇ ತೊಂದರೆಯಾಗದಂತೆ ಕೆಲಸಗಳನ್ನು ನಿರ್ವಹಿಸಲು ಸೂಚಿಸಿದರು.
ಶಾಮಿಯಾನ, ಹಾಗೂ ಕುರ್ಚಿಗಳು ಹಾಕಬೇಕು ಸುತ್ತಮುತ್ತಲಿನ ಸ್ವಚ್ಫತೆ ಕಾಪಾಡಿಕೊಂಡು ಹೋಗಬೇಕು ಸ್ಟೇಜ್ ಹೂಗಳಿಂದ ಆಲಂಕರಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತ್ಯೇಕ ಕೌಂಟರ್ ಸ್ಥಾಪಿಸಬೇಕು, ಅರ್ಜಿಗಳನ್ನು ಸ್ವೀಕರಿಸಲು ಹಾಗೂ ವಿಲೇವರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಇಲಾಖೆ ಸಂಬಂಧಪಟ್ಟ ಫಲಾನುಭವಿಗಳಿಗೆ ವೇದಿಕೆ 5 ಜನರು ಕರೆತರುವ ವ್ಯವಸ್ಥೆ ಮಾಡಬೇಕು. ಕಾರ್ಮಿಕ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಆಗಿರಬಹುದು ಎಲ್ಲರೂ ತಮ್ಮ ಫಲಾನುಭವಿಗಳಿ ಕರೆ ತರುವ ವ್ಯವಸ್ಥೆ ಮಾಡಬೇಕು. ಜಿಲ್ಲಾಧಿಕಾರಿಗಳ ಕಚೇರಿಗೆ ಪಿಂಚಣೆ ಸಂಬಂಧಿಸಿದ ಫಲಾನುಭವಿಗಳನ್ನು ಕರೆತರಲು ಸಂಬಂಧಪಟ್ಟ ಅಧಿಕಾರಿಗಳಿ ಸೂಚನೆ ನೀಡಿದರು.
ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಊಟದ ವ್ಯವಸ್ಥೆಯನ್ನು ಮಾಡಬೇಕು. ಯಾವುದೇ ಅಹಿತಕರ ಘಟನೆಗಳನ್ನು ಜರುಗದಂತೆ ಕ್ರಮವಹಿಸಲು ಸೂಚಿಸಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಪಾಟೀಲ ಭುವನೇಶ್ ದೇವಿದಾಸ ಅವರು ಮಾತನಾಡಿ , ಮಳಿಗೆ 10’x10′ ಮಳಿಗೆಗಳನ್ನು ಹಾಕಬೇಕು. ಬ್ಯಾನರ್‍ಗಳು ತಮ್ಮ ತಮ್ಮ ಇಲಾಖೆಗಳಿಂದ ತರಬೇಕು. ಲ್ಯಾಬ್‍ಟ್ಯಾಪ್, ಕಂಪ್ಯೂಟರ್, ಸಿಬ್ಬಂದಿಗಳು ನಿಯೋಜಿಸಬೇಕೆಂದರು. ಜನರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕೆಂದರು.
ತುರ್ತಾಗಿ ಇರುವಂತಹ ಅರ್ಜಿಗಳನ್ನು ಸಚಿವರ ಗಮನಕ್ಕೆ ತರಲು ಅನುವು ಮಾಡಿಕೊಡಬೇಕೆಂದರು. ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಮಹಾನಗರ ಪಾಲಿಕೆಯಿಂದ ಮಾಡಲಾಗುತ್ತದೆ ಎಂದರು.
ವೇದಿಕೆ ಮೇಲೆ ಕಲ್ಯಾಣ ಕರ್ನಾಟ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರಿ ಐ.ಎ.ಎಸ. ಅಧಿಕಾರಿ ಗಜಾನಂದ ಬಾಳೆ, ಸಹಾಯಕ ಆಯುಕ್ತೆ ರೂಪೇಂದ್ರ ಕೌರ್, ಸೇಡಂ ಉಪವಿಭಾಗದ ಆಯುಕ್ತ ಆಶಾಪ್ಪ ಪೂಜಾರಿ, ಮಹಾನಗರ ಪಾಲಿಕೆ ಉಪ-ಆಯುಕ್ತ ಆರ್.ಪಿ. ಜಾಧವ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.