ಮಾ. 9 ರಿಂದ ಶ್ರೀ ಅಣಿವೀರಭದ್ರೇಶ್ವರ ಜಾತ್ರಾ ಮಹೊತ್ಸವ
ಕಲಬುರಗಿ:ಮಾ.02:ಕಾಳಗಿ ತಾಲೂಕಿನ ಕೋರವಾರ ಗ್ರಾಮದ ಶ್ರೀ ಅಣಿವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಇದೇ ಮಾರ್ಚ್ 9 ರಿಂದ 12 ರವರೆಗೆ ಜರುಗಲಿದೆ ಎಂದು ಕಾಳಗಿ ತಹಶೀಲ್ದಾರರು ಹಾಗೂ ಕೋರವಾರ ಶ್ರೀ ಅಣವೀರ ಭದ್ರೇಶ್ವರ ದೇವಸ್ಥಾನದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 10 ರಂದು ಸಂಜೆ 6 ಗಂಟೆಗೆ ಅಗ್ನಿಪ್ರಜೆ ಹಾಗೂ ರಾತ್ರಿ 11 ಗಂಟೆಗೆ ಅಗ್ಗಿ ಪ್ರವೇಶ ಕಾರ್ಯಕ್ರಮ ಜರುಗಲಿದೆ. ಮಾರ್ಚ್ 11 ರಂದು ರಾತ್ರಿ 8 ಗಂಟೆಗೆ ಭವ್ಯ ರಥೋತ್ಸವ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.