ಹೊಸಪೇಟೆ ನಗರಸಭೆಯ ಪೌರಾಯುಕ್ತರಾಗಿ ಚಂದ್ರಪ್ಪ
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ2: ಹೊಸಪೇಟೆ ನಗರಸಭೆಯ ನೂತನ ಪೌರಾಯುಕ್ತರಾಗಿ ಚಂದ್ರಪ್ಪ ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಚಳ್ಳಕೇರಿ ನಗರಸಭಯ ಪೌರಾಯುಕ್ತರಾಗಿದ್ದ ಇವರು ಹೊಸಪೇಟೆಗೆ ವರ್ಗಾವಣೆಗೊಂಡು ಹಾಲಿ ಪ್ರಭಾರ ಪೌರಾಯುಕ್ತರಾಗಿದ್ದ ಎ.ಶಿವಕುಮಾರ ಇವರಿಂದ ಅಧಿಕಾರ ವಹಿಸಿಕೊಂಡರು. ಶಿವಕುಮಾರ ಹರಪನಹಳ್ಳಿ ಪುರಸಭೆಯ ಮುಖ್ಯಾಧಿಕಾರಿಗಳಾಗಿ ಕಳೆದ ಎರಡು ತಿಂಗಳಿಂದ ಪ್ರಭಾರ ಅಧಿಕಾರ ವಹಿಸಿಕೊಂಡು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಎಲ್ಲರ ಪ್ರೀತಿಪಾತ್ರರಾಗಿದ್ದರು.
ಇತ್ತೀಜೆಗೆ ಹೊಸಪೇಟೆ ನಗರಸಭೆಯ ಪೌರಾಯುಕ್ತರಾಗಿ ಇದೀಗ ವಿಜಯನಗರ ಜಿಲ್ಲಾ ನರಾಭಿವೃದ್ಧಿ ಕೋಶಕ್ಕೆ ಯೋಜನಾ ನಿರ್ದೇಶಕರಾಗಿ ನೇಮಕಗೊಂಡು ಬಂದಿರುವ ಪೌರಾಯುಕ್ತ ಮನೋಹರರೊಂದಿಗೆ ಬಂದು ಇಂದು ಅಧಿಕಾರ ವಹಿಸಿಕೊಂಡರು. ಇದೆ ಸಂದರ್ಭದಲ್ಲಿ ನೂತನ ಪೌರಾಯುಕ್ತ ಚಂದ್ರಪ್ಪ ಅಧಿಕಾರ ಹಸ್ತಾಂತರಿಸಿದ ಎ.ಶಿವಕುಮಾರ ಹಾಗೂ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಮನೋಹರರವರನ್ನು ಸನ್ಮಾನಿಸಿದರು.