ನಾಣ್ಯದಲ್ಲಿ ಅರಳಿದ ಅಯೋಧ್ಯೆಯ ಶ್ರೀರಾಮ ಮಂದಿರ
ಅನಂತ ಜೋಶಿ
ಹೊಸಪೇಟೆ, ಮಾ.02: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿಂದತೇ ದೇಶದೆಲ್ಲೆಡೆ ಶ್ರೀ ರಾಮ ನಾಮ ಸ್ಮರಣೆ ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಕಲಾವಿದರೊಬ್ಬರು ಅಯೋಧ್ಯೆಯ ಶ್ರೀ ರಾಮ ಮಂದಿರ ಮಾದರಿಯನ್ನು  ನಾಣ್ಯಗಳಲ್ಲಿ ರಚಿಸುವ ಮೂಲಕ ಭಕ್ತಿಯ ಪರಾಕಾಷ್ಠೇಯನ್ನು ಮೆರೆದು ಪ್ರಸಂಶೆಗೆ ಕಾರಣವಾಗುತ್ತಿದ್ದಾರೆ. 
ಹೌದು! ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದಿಂದ ಪ್ರೇರಣೆಯಾದ ಹರಿಹರ ಮೂಲದ ಯುವ ಕಲಾವಿದ ರಾಮು ಎಂಬುವವರು 19 ಜನ ಮಕ್ಕಳ ಸಹಾಯದೊಂದಿಗೆ ಒಂದು ತಿಂಗಳ ಕಾಲ ನಾಣ್ಯದಲ್ಲಿ ರಾಮ ಮಂದಿರವನ್ನು ಸೃಜಿಸಿ, ಈಗಾಗಲೇ ವಿವಿಧ ನಗರ-ಪಟ್ಟಣಗಳಲ್ಲಿ ಪ್ರದರ್ಶನಕ್ಕಿಡುವ ಮೂಲಕ ಗಮನ ಸೆಳೆದು ನಾಡಿನಾದ್ಯಂತ ತನ್ನ ಕಲೆಯನ್ನು ಅನಾವರಣಗೊಳಿಸುತ್ತಿದ್ದಾನೆ.
ಹರಿಹರದಲ್ಲಿ ಚಿತ್ರಕಲಾ-ಮೂರ್ತಿ ಕಲಾ ಕಲಿಕಾ ಶಾಲೆಯನ್ನು ನಡೆಸುತ್ತಿರುವ ರಾಮು ಶಾಲೆಯ ಕಲಾ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಮ ಮಂದಿರ ಸೃಜಿಸಿ, ಸೈ ಎನ್ನಿಸಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾದ ಬೆನ್ನಲ್ಲಿಯೇ ನಾಣ್ಯದಲ್ಲಿ ಶ್ರೀ ರಾಮ ಮಂದಿರ ತಯಾರಿಸಿ, ಅದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಿಸಲು ತೀರ್ಮಾಸಿದ್ದಾರೆ. ಇದಕ್ಕೆ ಮೋದಿ ಅವರಿಂದ ಸಮ್ಮತಿ ಸಿಕ್ಕಿದೆ ಎಂದು ಸಂಸದ ಪ್ರಲ್ಹಾದ್ ಜೋಶಿ ಯವರಿಂದ ಮಾಹಿತಿ ಸಿಕ್ಕಿದೆ ಎಂದು ಕಲಾವಿದ ರಾಮು ಹೆಮ್ಮೆಯಿಂದ ಮಾಹಿತಿಯನ್ನು ಪತ್ರಿಕೆಯೊಂದಿಗೆ  ಹಂಚಿಕೊಂಡರು.
ಮೊದಲು ಹರಿಹರ ಜಾತ್ರೆಯಲ್ಲಿ ರಾಮ ಮಂದಿರ ಪ್ರದರ್ಶನ ನಡೆಸಿದ ರಾಮು ಅವರು, ಇದೀಗ ಹೊಸಪೇಟೆ ನಗರದ ಸಹಕಾರಿ ಕಲ್ಯಾಣ ಮಂಟಪದ ಆವರಣದಲ್ಲಿರುವ ರಾಮ ಮಂದಿರದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
ದಾವಣಗೆರೆ, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರ-ಪಟ್ಟಣಗಳಲ್ಲಿ ಮಂದಿರವನ್ನು ಪ್ರದರ್ಶನ ಇಡುವ ಸಂಕಲ್ಪ ಮಾಡಿದ್ದಾರೆ. ಅಂತಿಮವಾಗಿ ಪ್ರಧಾನಿ ಮೋದಿಯವರಿಗೆ ಮಂದಿರವನ್ನು ಒಪ್ಪಿಸಿ, ಬಳಿಕ ಅಯೋಧ್ಯೆಯ ವಸ್ತು ಸಂಗ್ರಾಲಯದಲ್ಲಿ ಪ್ರದರ್ಶನಕ್ಕೆ ಇಡಲಿದ್ದಾರೆ.
ನಾಣ್ಯ ಸಂಗ್ರಹ:
ರಾಮ ಮಂದಿರ ತಯಾರಿಕೆಗಾಗಿ ಹಲವು ರಾಮ ಭಕ್ತರ ಕಾಣಿಕೆ ಸಲ್ಲಿಕೆಯಾಗಿದೆ. ದೂರದ ಊರುಗಳಿಂದ ನಾಣ್ಯಗಳನ್ನು ಕಲಾವಿದ ರಾಮನಿಗೆ ಕಳಹಿಸಿಕೊಟ್ಟು ನೆರವಾಗಿದ್ದಾರೆ. ಒಂದು ಪೈಸೆ, 25 ಪೈಸೆಯಿಂದ 2, 5, 10, 20 ರೂ ನಾಣ್ಯಗಳನ್ನು ಜೋಡಣೆಯಲ್ಲಿ ರಾಮ ಮಂದಿರ ಸಿದ್ದವಾಗಿದೆ. ಒಂದು ತಿಂಗಳ ಕಾಲ ಹತ್ತಾರು ಮಕ್ಕಳಿಂದ ನಡೆದ ಶ್ರಮದಾನದಲ್ಲಿ ರಾಮ ಮಂದಿರ ಅರಳಿ ನಿಂತಿದೆ.
ಶ್ರೀ ರಾಮ ಮಂದಿರ ತಯಾರಿಸಿ, ಅದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಿಸಲು ತೀರ್ಮಾಸಿದ್ದು, ಇದಕ್ಕೆ ಮೋದಿ ಅವರಿಂದ ಸಮ್ಮತಿ ಸಿಕ್ಕಿದೆ ಎಂದು ಸಂಸದ ಪ್ರಲ್ಹಾದ್ ಜೋಶಿ ಯವರಿಂದ ಮಾಹಿತಿ ಸಿಕ್ಕಿದೆ. ಅಯೋಧ್ಯೆಯಲ್ಲಿ ಮ್ಯೂಸಿಯಂ ಪ್ರದರ್ಶನ ಇಡಲಾಗುವದು.
ರಾಮು, ಕಲಾವಿದ, ಹರಿಹರ
ಕಲಾವಿದ ರಾಮು, ನಾಣ್ಯದಲ್ಲಿ ರಾಮ ಮಂದಿರ ಸೃಜಿಸಲು ಸಂಕಲ್ಪ ಬಂದಿರುವುದು ನಿಜಕ್ಕೂ ಶ್ರೀ ರಾಮಚಂದ್ರನ ಆರ್ಶಿವಾದ ಎಂದೇ ಹೇಳಬಹುದು. ಹಳೇ ಹಾಗೂ ಹೊಸ ನಾಣ್ಯಗಳನ್ನು ಬಳಿಸಿ, ಸುಂದರವಾದ ರಾಮ ಮಂದಿರವನ್ನು ಸಿದ್ದ ಪಡಿಸಿರುವುದು, ನಿಜಕ್ಕೂ ಕಲಾವಿದ ಕೈಚಳ ಮಾತ್ರವಲ್ಲ, ಭಕ್ತಿಭಾವನೆ ಕಾರಣವಾಗಿದೆ.
ಚಂದ್ರಕಾಂತ್ ಕಾಮತ್, ನಗರಸಭೆ ಮಾಜಿ ಸದಸ್ಯರು,  ಹೊಸಪೇಟೆ.