ಆರ್.ಬಿ.ವೈ.ಎಂ.ಸಿ.ಯಲ್ಲಿ  “ಸಂವಿಧಾನ ಜಾಗೃತಿ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.02: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ
ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಬಳ್ಳಾರಿ ಮತ್ತು ಆರ್ ವೈ ಎಂ ಈ ಸಿ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ ಸೆಮಿನಾರ್ ಹಾಲ್ ನಲ್ಲಿ “ಸಂವಿಧಾನ ಜಾಗೃತಿ ಕಾರ್ಯಕ್ರಮ ನಡೆಯಿತು,
ಈ ಕಾರ್ಯಕ್ರಮದಲ್ಲಿ  ಸೋಶಿಯಲ್ ವೆಲ್ಫೇರ್ ಆಫೀಸರ್ ,ಶ್ರೀಮತಿ ಅಂಬಿಕಾ ,ಉಪನಿರ್ದೇಶಕರು ಸತೀಶ್ ,ಬಸವರಾಜ ಎನ್, ಕಲ್ಗುಡಿ ಬಸವರಾಜ ,ಶ್ರೀಮತಿ ವಿನೋದ , ಪ್ರಾಂಶುಪಾಲರು ಡಾ. ಹನುಮಂತರೆಡ್ಡಿ ಉಪ ಪ್ರಾಂಶುಪಾಲರು ಡಾ. ಸವಿತಾ ಸೋನೋಳಿ ,ಡಾ.ತಿಮ್ಮನಗೌಡ ,ಡಾ.ಜಗದೀಶ್ , ಡಾಕ್ಟರ್ ಚಂದ್ರೇಗೌಡ, ಡಾ.ಚಿನ್ನವೆಗೌಡರ್, ಡಾ. ಹನುಮಂತರಾವ್, ರಾಜಶೇಖರ್, ಶ್ರೀಧರ್ ಬೀಳಗಿ, ಶ್ರೀಮತಿ ಸೌಮ್ಯ ,ಶ್ರೀಮತಿ ಗಂಗಮ್ಮ , ವಿದ್ಯಾರ್ಥಿ ವೃಂದದವರು ಭಾಗವಹಿಸಿದ್ದರು. ಆರಂಭದಲ್ಲಿ ಡಾ. ತ್ರೀ ಹನುಮಂತರೆಡ್ಡಿ ಸ್ವಾಗತಿಸಿದರು “ಇದು ಒಂದು ಉತ್ತಮ ಕಾರ್ಯಕ್ರಮ ಬಿಆರ್ ಅಂಬೇಡ್ಕರ್ ಅವರನ್ನು ಫಾದರ್ ಆಫ್ ಇಂಡಿಯನ್ ಕಾನ್ಸ್ಟಿಟ್ಯೂಷನ್ ಭಾರತೀಯ ಸಂವಿಧಾನದ ಪಿತಾಮಹ ಎಂದು ಪರಗಣಿಸುತ್ತಾರೆ ಅವರ ಬಗ್ಗೆ ತಿಳಿದುಕೊಳ್ಳುವುದು ಹಾಗೆಯೇ ಭಾರತ ಸಂವಿಧಾನದ ಬಗ್ಗೆ ತಿಳಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು” . ಡಾಕ್ಟರ್ ಎ ತಿಮ್ಮನಗೌಡ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ “ಭಾರತೀಯ ಸಂವಿಧಾನದ ಮಹತ್ವ ಮೌಲ್ಯ ರಾಷ್ಟ್ರೀಯ ಏಕತೆ ಒತ್ತಿ ಹಿಡಿಯಬೇಕಾದ ಅವಶ್ಯವಿದೆ ಹಾಗೆಯೇ ಭಾರತೀಯ ಪ್ರಜೆಗಳ ಹಕ್ಕುಗಳು ವಿವಿಧ ಮೀಸಲಾತಿಗಳು ಮಹಿಳೆಯರಿಗಾಗಿ ಮೀಸಲಾತಿಗಳು ವಿದ್ಯಾರ್ಥಿಗಳಿಗಾಗಿ ಮಾಡಿರುವ ಸೌಲಭ್ಯಗಳು ತಿಳಿದುಕೊಳ್ಳಬೇಕಾದ ಅವಸರವಿದೆ ಈ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ನಾವು ಕೂಡ ಕೈಜೋಡಿಸಿಸುತ್ತಿದ್ದೇವೆ”, ಉಪ ಪ್ರಾಂಶುಪಾಲರಾದ ಡಾ. ಸವಿತಾ ಸೋನೋಳಿ  ಮಾತನಾಡುತ್ತಾ “ಭಾರತ ದೇಶದ ರಾಷ್ಟ್ರಗೀತೆ ರಾಷ್ಟ್ರಧ್ವಜ ಭಾರತೀಯ ಸಂವಿಧಾನ ಬಗ್ಗೆ ಗೌರವಿಸಬೇಕು ಹಾಗೆಯೇ ಸಾರ್ವಭೌಮತ್ವ ಏಕತೆ ಅಖಂಡತೆಯನ್ನು ಇವುಗಳ ಗೋಸ್ಕರ ಅವಶ್ಯವಾದ ವೇಳೆ ಪ್ರಾಣತ್ಯಾಗ ಮಾಡಬೇಕು ಮುಂದಿನ ದಿನಗಳಲ್ಲಿ ನೀವು ಭಾರತ ದೇಶದ ರಾಜಕಾರಣದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಬೇಕು” ಎಂದು ಕೋರಿದರು, ಬಳ್ಳಾರಿ ಜಿಲ್ಲಾ ಸೋಶಿಯಲ್ ವೆಲ್ಫೇರ್ ಆಫೀಸರ್ ಸಮಾಜ ಕಲ್ಯಾಣ ಅಧಿಕಾರಿ ಶ್ರೀಮತಿ ಅಂಬಿಕಾ ಮಾತನಾಡುತ್ತಾ “ಜನವರಿ 26ನೇ ತಾರೀಕು ನಿಂದ ಪ್ರಾರಂಭಗೊಂಡ ಈ ಕಾರ್ಯಕ್ರಮವು ಬಳ್ಳಾರಿ ಜಿಲ್ಲೆಯ ನಗರೈತರ ನಗರೇತರ ಎಲ್ಲಾ ವಿಭಾಗಗಳಿಗೆ ಎಲ್ಲಾ ಭಾಗಗಳಿಗೆ ಮುಗಿಸಿ ಈಗ ಬಳ್ಳಾರಿ ನಗರದ ಶಾಲಾ ಕಾಲೇಜುಗಳಿಗೆ ತಲುಪಿದ್ದೇವೆ ಇಲ್ಲಿ ಮುಖ್ಯವಾದ ವಿಷಯ ವೇದಕಾಲದಿಂದ, ಶತಮಾನ ಗಳಿಂದ ಭಾರತದೇಶವು ಸುಸಜ್ಜಿತ ಸಂಸೃತಿ, ಎಲ್ಲರಿಗೆ ಸಮಾಜಿಕ ನ್ಯಾಯ, ಉನ್ನತ ಜೀವನ ಶೈಲಿ, ಎಲ್ಲರಿಗೆ ಆರ್ಥಿಕ ಆಭಿವೃಧ್ದಿ, ಗೌರವಾನ್ವಿತ ಬದುಕು ಮುಂತಾದ ವಿಷಯಗಳಿಂದ ಇನಿತರ ದೇಶಗಳಿಗೆ ಆದರ್ಶಪ್ರಾಯ ವಾಗಿದೆ, ಆದರೆ ಕಾಲಕ್ರಮೇಣ ವಿದೇಶಿ ಆಕ್ರಮಣಗಳಿಂದ ತುಂಡು ತಣುಕು ಗಳಾಗುವ ಪರಿಷ್ಥಿತಿಯಾಯಿತು. ಆದರೂ ನಮ್ಮ ಸ್ವಾತಂತ್ರ ಹೋರಾಟದ ಮಹನೀಯರು ಅಂತಹದೇ ಆದ ಸುಸಜ್ಜಿತ ಭಾರತೀಯ ಸಂವಿಧಾನವನ್ನು  ನಮಗೇ ನೀಡಿರುತ್ತಾರೆ. ಮೊದಲು ನಾವೆಲ್ಲ ಭಾರತೀಯರು ಆ ಮಹನೀಯರ ಮಹಾನ್ ಉಡುಗೋರೆ ಓದಬೇಕಾಗಿದೆ ಮತ್ತು ಅರ್ಥಮಾಡಿಕೋಳ್ಳಬೇಕಾಗಿದೆ, ಪಾಲಿಸ ಬೇಕು. ಇಂದಿನ ಜಗತ್ತಿನ ಸಮಸ್ಯ ಗಳಿಗೆ ಎಲ್ಲಾ ಪರಿಹಾರಗಳು ನಮ್ಮ ಸಂವಿಧಾನದಲ್ಲಿವೆ.  ಭಾರತ ಸಂವಿಧಾನದ ಬಗ್ಗೆ ಎಲ್ಲರಿಗೆ ತಿಳಿದುಕೊಳ್ಳಬೇಕು ಅದರ ಮಹತ್ವವನ್ನು ಸರಿಯಾಗಿ ತಿಳಿಸಬೇಕು ಜನರಲ್ಲಿ ಆಸಕ್ತಿ ಇದೆ ಆದ್ದರಿಂದ ಅವರಿಗೆ ತಿಳಿಸಬೇಕು ಆಗಲೇ ಅದರ ಪೂರ್ಣ ಫಲಗಳನ್ನು ಪರಿಪೂರ್ಣ ಫಲಗಳನ್ನು ಅನುಭವಿಸಲು ಸಾಧ್ಯ ಉದಾಹರಣೆಗೆ ಮಹಿಳಾ ಮೀಸಲಾತಿ ಸಾಧ್ಯತೆ ಸಂವಿಧಾನದಲ್ಲಿ ಇದ್ದರೂ ಇತ್ತೀಚಿನ ದಿನಗಳಲ್ಲಿ ಮಾತ್ರ ಮಹಿಳೆಯರಿಗೆ ತಲುಪುತ್ತಳೆದೆ ಉದಾಹರಣೆಗೆ ಶ್ರೀಮತಿ ದ್ರೌಪದಿ ಮುರುಮು ಅವರು ಈಗ ಭಾರತ ದೇಶದ ರಾಷ್ಟ್ರಪತಿಯಾಗಿದ್ದಾರೆ ಹಾಗೆಯೇ ಮತದಾನ ಎನ್ನುವುದು ಗಂಡು ಹೆಣ್ಣು ಅಂಗವಿಕಲರು ಟ್ರಾನ್ಸ್ ಜೆಂಡರ್ಸ್ ಎಲ್ಲರಿಗೂ ಇದೆ ಆದರೂ ಪೂರ್ಣ ಪ್ರಮಾಣದಲ್ಲಿ ಮತದಾನ ನಡೆಯುತ್ತಿಲ್ಲ ಆದಕಾರಣ ಎಲ್ಲರಿಗೆ ಸಂವಿಧಾನದ ಬಗ್ಗೆ ತಿಳುವಳಿಕೆ ಬರಬೇಕು” ಎಂದರು.