ಉಚಿತ ಆರೋಗ್ಯ ತಪಾಸಣಾ ಶಿಬಿರ
ಕಲಬುರಗಿ:ಮಾ.2:ತಾಲ್ಲೂಕಿನಜೋಗುರಗ್ರಾಮದಲ್ಲಿ ಸೇವಾ ಸಂಗಮ ಸಂಸ್ಧೆ ಹಾಗೂ ಇಂಡಿಯನ್‍ಕ್ಯಾನ್ಸರ್ ಸೊಸೈಟಿಇವರ ಸಂಯುಕ್ತಾಶ್ರಯದಲ್ಲಿಜೋಗುರಗ್ರಾಮದ ಮಹಾಲಕ್ಷಿದೇವಸ್ಧಾನದಲ್ಲಿಉಚಿತಆರೋಗ್ಯತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಸೇವಾ ಸಂಗಮ ಸಂಸ್ಧೆಯ ಸಹ ನಿರ್ದೇಶಕರಾದ ಫಾದರ್ ದೀಪಕ್, ಹಾಗೂ ಬಸವಪಟ್ಟಣ ಪಂಚಾಯತ ಪಿಡಿಓ ಹರಳಯ್ಯರಾಯ ದೇಸಾಯಿ, ಮತ್ತುಇಂಡಿಯನ್‍ಕ್ಯನ್ಸರ್ ಸೊಸೈಟಿಯ ಸಂಯೋಜಕರಾದ ಶ್ರೀನೀಧಿ ಡಾ.ಅಕ್ಷತಾಯಾದವ, ಹಾಗೂ ಶ್ರೀಮತಿ ಮಂಗಲಾ ಪಿಎಚ್‍ಸಿ ಯ ಸಹಾಯಕಿ ಜೋಗುರ, ಉಮೇಶ ಗ್ರಾಮಪಂಚಾಯತ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ದೀಪ ಬೇಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸೇವಾ ಸಂಗಮ ಸಂಸ್ಧೆಯ ಸಹ ನಿರ್ದೇಶಕರಾದ ಫಾದರ್ ದೀಪಕ್‍ರವರು ಮಾತನಾಡುತ್ತಾ, ಕಾಲಕಾಲಕ್ಕೆ ಸರಿಯಾದತಪಸಣೆಯುಕ್ಯಾನ್ಸರ್‍ನಿಂದ ಆಗುವ ದುಷ್ಪರಿಣಾಮಗಳನ್ನು ತಗ್ಗಿಸಬಹುದು.ಈ ಆರೋಗ್ಯತಪಾಸಣಾ ಶೀಬಿರದ ಸುಪಯೋಗಗ್ರಾಮದಜನರು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವಂತೆ ತಿಳಿಸಿದರು.
ಬಸವಪಟ್ಟಣಗ್ರಾಮ ಪಂಚಾಯತಿಯ ಹರಳಯ್ಯರಾಯ ದೇಸಾಯಿರವರುಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಆರೋಗ್ಯತಪಾಸಣಾ ಶಿಬಿರವು ಊರಿನಜನರೆಲ್ಲರುಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.ಈ ಶೀಬಿರದಲ್ಲಿ ವಿಶೇಷವಾಗಿ ಗರ್ಭಕೋಶಕ್ಯಾನ್ಸರ್, ಬಾಯಿ ಕ್ಯಾನ್ಸರ್, ಮತ್ತು ಸ್ತನ ಕ್ಯಾನ್ಸರ್, ಪರಿಕ್ಷೆ ಮಾಡಲಾಗುವುದು, ಆದ್ದರಿಂದಎಲ್ಲಾಊರಿನಜನರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗವನ್ನು ಪಡೆಯಬಹುದುಎಂದು ತಿಳಿಸಿದರು.
ಇಂಡಿಯನ್‍ಕ್ಯಾನ್ಸರ್ ಸೊಸೈಟಿಯಕ್ಯಾನ್ಸರ್‍ತಜ್ಞರಾದಡಾ.ಅಕ್ಷತಾಯಾದವಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ. ಈ ಭಾಗದಜನರಿಗೆಇದುಒಂದು ಒಳ್ಳೆಯ ಅವಕಾಶ ಹಾಗೆಯೆಎಲ್ಲಾಜನರು ಈ ಒಂದುಉಚಿತಆರೋಗ್ಯತಪಾಸಣಾ ಶೀಬಿರವು ನಿಮಗೋಸ್ಕರ ನಿಮ್ಮ ಹಳ್ಳಿಯಲ್ಲಿ ಏರ್ಪಡಿಸಲಾಗಿದೆ.ಇದರ ಪ್ರಯೋಜನವು ನಿವೆಲ್ಲರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಶಿಬಿರದಲ್ಲಿ ಒಟ್ಟು 80 ಜನ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು.
ಶ್ರೀಮತಿ ಶ್ವೇತಾ ಸ್ವಾಗತಿಸಿ, ಶ್ರೀಮತಿ ಸ್ವಾತಿ ವಂದಿಸಿ, ಶ್ರೀ ರಾಜಕುಮಾರ ನಿರೂಪಿಸಿದರು.