ನಾಳೆಯಿಂದ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.16:  ತಾಲೂಕಿನ ಬಳ್ಳಾರಿ  ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಬಿಟಿಪಿಎಸ್)ನಲ್ಲಿ ದೈನಂದಿನ ಚಲನೆ-ಪಾಲನೆ ನಿರಂತರ ಕಾಮಗಾರಿಯಲ್ಲಿ ಹಲವಾರು ವರ್ಷಗಳಿಂದ ದುಡಿಯುವ ಗುತ್ತಿಗೆ ಕಾರ್ಮಿಕರಿಗೆ ಖಾಯಂ ಮಾಡುವಂತೆ ಆಗ್ರಹಿಸಿ ನಾಳೆಯಿಂದ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘವು ಸಿಐಟಿಯುವ ನೇತೃತ್ವದಲ್ಲಿ ಕೇಂದ್ರದ  ಮೆಟೀರಿಯಲ್ ಗೇಟ್  ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಸಗ್ರಹ ನಡೆಸಲಿದೆ.
ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿಐಟಿಯುನ ಮುಖಂಡ ಜೆ.ಸತ್ಯಬಾಬು ಮತ್ತು ಎಂ.ತಿಪ್ಪೆಸ್ವಾಮಿ ಮೊದಲಾದವರು. ಬಿಟಿಪಿಎಸ್ ನಲ್ಲಿ ಅನೇಕ ವರ್ಷಗಳಿಂದ ಕಾರ್ಮಿಕರನ್ನು ಕನಿಷ್ಟ ವೇತನ ನೀಡಿ  ದುಡಿಸಿಕೊಳ್ಳಲಾಗುತ್ತಿದೆ. ಇ.ಎಸ್.ಐ ಕಾಯ್ದೆ 1952, ವೇತನ ಪಾವತಿ ಕಾಯ್ದೆ 1936, ಕಾರ್ಖಾನೆ ಕಾಯ್ದೆಗಳ ಪ್ರಕಾರ ಇತರೆ ಅಲೋಯನ್‌ಗಳು ಹಾಗೂ ಸುರಕ್ಷಿತ ಸಾಮಾಗ್ರಿಗಳು ಸರ್ಮಾಪಕವಾಗಿ ಜಾರಿಯಾಗಬೇಕೆಂದು  ಒತ್ತಾಯಿಸಿ ಈ ಸತ್ಯಾಗ್ರಹ  ನಡೆಸಲಿದೆ.
ಹಾರು ಬೂದಿ ಮತ್ತು ಕಲ್ಲಿದ್ದಲು   ಘಟಕಗಳಲ್ಲಿ ದುಡಿಯುವ ಕಾರ್ಮಿಕರ ವೇತನ  ಪರಿಷ್ಕರಣೆ ಆಗಬೇಕು.  ಹಲವಾರು ವರ್ಷಗಳಿಂದ ದುಡಿಯುವ ಕಾರ್ಮಿಕರನ್ನು ಖಾಯಂ ಮಾಡಬೇಕು.  ಟೆಂಡರ್‌ಗಳನ್ನು ಹೆಚ್ಚುವರಿಯಾಗಿ ದಿನಗಳಲ್ಲಾಗಲೀ ಅಥವಾ ತಿಂಗಳುಗಳಲ್ಲಾಗಲೀ ನೀಡಿದರೆ ಹೊಸ ವೇತನ ಆಡಳಿತ ಮಂಡಳಿಯೇ ನೀಡಬೇಕು.  ಎಲ್ಲಾ ಕಾರ್ಮಿರಿಗೆ ಸುರಕ್ಷಿತ ಸಮಾಗ್ರಿಗಳು ಸಮರ್ಪಕವಾಗಿ ಜಾರಿ ಮಾಡಬೇಕು. ಹಾಗೂ ಸುರಕ್ಷತಾ ತರಭೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾರಿಗೆ ವ್ಯವಸ್ಥೆ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಧರಣಿ ನಡೆಯಲಿದೆಯಂತೆ.