ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎಂಬ ನಿರಂತರ ಜವಾಬ್ದಾರಿ
ಇಂಡಿ:ಸೆ.16:ಸ್ವಾತಂತ್ರ್ಯ, ಸಮಾನತೆ, ಭ್ರಾತತ್ವ , ಸಂಘಟನೆಗಳು ವ್ಯಕ್ತಿ ಗೌರವ, ಶಿಕ್ಷಣ ಮತ್ತು ಸಂವಿಧಾನಾತ್ಮಕ ನಡವಳಿಕೆಗಳು ಪ್ರಜಾಪ್ರಭುತ್ವದ ಸೂತ್ರಗಳು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ತಾಲೂಕಿನ ಜೇವೂರ ಗ್ರಾಮದ ಅರಣ್ಯ ಇಲಾಖೆಯ ವನ್ಯಧಾಮದಲ್ಲಿ ಇಂಡಿ ಮತ್ತು ಚಡಚಣ ತಾಲೂಕಿನ ಎಲ್ಲ ಇಲಾಖೆಗಳ ಸಹಯೋಗದಲ್ಲಿ ನಡೆದ ಪ್ರಜಾಪಭುತ್ವ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅದಲ್ಲದೆ ಕಾರ್ಯಕ್ರಮವನ್ನು ಎಲ್ಲ ಇಂಡಿ ಮತ್ತು ಚಡಚಣ ತಾಲೂಕಿನ ಪರ್ತಕರ್ತರು ವೇದಿಕೆಯ ಪಾಲ್ಗೊಂಡು ಅವರಿಗೆ ಸಮರ್ಪಿಸಲಾಗಿತ್ತು. .
ಉಪನ್ಯಾಸಕ ರವಿ ಅರಳಿ ಉಪನ್ಯಾಸ ನೀಡಿ ಸಾಮಾಜಿಕ,ಅರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತ, ನಂಬಿಕೆ ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವದಕ್ಕಾಗಿ ವ್ಯಕ್ತಿ ಗೌರವ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಭಾತೃತ್ವ ಮೂಡಿಸುವದು ಸಂವಿಧಾನವಾಗಿದೆ ಎಂದರು.
ಪರಮಪೂಜ್ಯ ಮಹಾಂತೇಶ ಶಾಸ್ತ್ರೀಗಳು, ತಹಸೀಲ್ದಾರ ಬಿ.ಎಸ್.ಕಡಕಬಾವಿ, ವಲಯ ಅರಣ್ಯಾಧಿಕಾರಿ ಎಸ್.ಜೆ.ಸಂಗಾಲಕ, ಪರ್ತಕರ್ತ ಶಂಕರ ಜಮಾದಾರ, ದುಂಡಪ್ಪ ಮುಜಗೊಂಡ ಮಾತನಾಡಿದರು.
ವೇದಿಕೆಯ ಮೇಲೆ ಗ್ರಾ.ಪಂ ಅಧ್ಯಕ್ಷೆ ಶಾಂತಾಬಾಯಿ ಮೇಲಿನಮನಿ,ಇಒ ಬಾಬು ರಾಠೋಡ,ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ, ಪಶು ವೈದ್ಯಾಧಿಕಾರಿ ರಾಜಕುಮಾರ ಅಡಕಿ, ಚಡಚಣ ಇಒ ಸಂಜಯ ಖಡಗೇಕರ ಸೇರಿದಂತೆ ಇಂಡಿ ಮತ್ತು ಚಡಚಣ ತಾಲೂಕಿನ ಎಲ್ಲ ಪರ್ತಕರ್ತರು ಪಾಲ್ಗೊಂಡಿದ್ದರು.
ಇದೇ ವೇಳೆ ಸಸಿಗಳನ್ನು ನೇಡಲಾಯಿತು. ಮತ್ತು ಮಾನವ ಸರಪಳಿ ನಿರ್ಮಿಸಲಾಗಿತ್ತು.