ಆರೋಗ್ಯವಂತರಾಗಿರಲು ಮುಂಜಾಗೃತೆ ಅಗತ್ಯ- ಇಮಾಮ್ ನಿಯಾಜಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ16: ದುಶ್ಚಟಗಳಿಂದ ದೂರವಿರುವುದು ಸೇರಿದಂತೆ ಆರೋಗ್ಯವ ವಿಷಯದಲ್ಲಿ ಜಾಗೃತವಾಗಿರುವ ಮೂಲಕ ಮುಂಜಾಗೃತಯೊಂದಿಗೆ ಜೀವನ ನಡೆಸುವುದು ಅಗತ್ಯವಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜ ಹೇಳಿದರು.
ಹೊಸಪೇಟೆಯ ಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬಲಿಜ ಯುವ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ನಾಲೆಗೆ ರುಚಿಗಾಗಿ ಜಂಕ್ ಫುಡ್‍ಗಳತ್ತ ಯುವ ಜನತೆ ವಾಲುತ್ತಿದ್ದು ಇದು ಅನೇಕ ಸಮಸ್ಯೆಗಳ ಆಹ್ವಾನಕ್ಕೆ ದಾರಿಯಾಗಿದೆ. ಅನೇಕ ಹೊಸ ಹೊಸ ಕಾಯಿಲೆಗಳು ಆಗಮಿಸಿ ಜನ ಜೀವನವನ್ನು ಹಾಳುಮಾಡುತ್ತಿದ್ದು ಇದಕ್ಕೆ ನಾವು ಸುಚ್ಚಿತ್ವ ಕಾಪಾಡುವುದು, ನಿಯಮಿತವಾಗಿ ವಾಯು ವಿಹಾರ, ಯೋಗ ವ್ಯಾಯಾಮಗಳನ್ನು ಮಾಡುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು. ದುಭಾರಿಯಾಗುತ್ತಿರುವ ಆರೋಗ್ಯ ಚಿಕಿತ್ಸೆಯಲ್ಲಿ ಇಂತಹ ಉಚಿತ ತಪಾಸಣಾ ಶಿಬಿರಗಳು ಸಹಕಾರಿಯಾಗಲಿದ್ದು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.
ತಾಲೂಕು ಆರೋಗ್ಯಾಧಿಕಾರಿ ಭಾಸ್ಕರ್, ನಗರಸಭಾ ಸದಸ್ಯ ಕೆ.ಗೌಸ್, ಮುಖಂಡರಾದ ದಾದ ಖಲಂದರ್, ಸಂಘಟನೆ ರಾಜ್ಯಾಧ್ಯಕ್ಷ ಶ್ಯಾಮಸುಂದರ್, ಗುಜ್ಜಲ್ ಗಣೇಶ್, ಕವಿತಾ ಈಶ್ವರ್ ಸಿಂಗ್, ಸರಳ ಕಾವ್ಯ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಭಾಗದ ಅನೇಕರು ಕಾರ್ಯಕ್ರಮದ ಪ್ರಯೋಜನ ಪಡೆದರು.